Sunday, July 2, 2023

ನೀವು ಅಂದುಕೊಂಡಂತೆ ಜೀವನವಿಲ್ಲ

 

ನೀವು ಅಂದುಕೊಂಡಂತೆ ಜೀವನವಿಲ್ಲ!

ನಿಮ್ಮಆತ್ಮ ಶಕ್ತಿಗೆ ಅಸಾಧ್ಯ ಎನ್ನುವುದು  ಯಾವುದೂ ಇಲ್ಲ!

ಸೌಂದರ್ಯವು ನಿಮ್ಮ ಹತ್ತಿರದಲ್ಲಿಯೇ ಇದೆ, ಬೇರೆಡೆ ಹುಡುಕಲು ಪ್ರಯತ್ನಿಸಬೇಡಿ!

ನನ್ನ ಡ್ರಿಫ್ಟ್ ವಾಕ್ ಸಮಯದಲ್ಲಿ. ಪ್ರಕೃತಿ ನನಗೆ 2 ಪಾಠಗಳನ್ನು ಕಲಿಸಿದೆ. ಮತ್ತು ನನ್ನ ಡ್ರಿಫ್ಟ್ ವಾಕ್‌ನಲ್ಲಿ ನಾನು ಬೆಂಗಳೂರಿನ ಸೌಂದರ್ಯವನ್ನು ಸಹ ನೋಡಿದೆ ...

ಡ್ರಿಫ್ಟ್  ವಾಕ್:  ಎಂದರೆ, ಏನು ಎಂದು ತಿಳಿಯಲು ಈ ಬ್ಲಾಗ್ ಅನ್ನು ಕೊನೆಯವರೆಗೂ ಓದಿ! 

ಮೊದಲು ಪ್ರಕೃತಿ ನನಗೆ ಯಾವ ಪಾಠಗಳನ್ನು ಕಲಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಸೌಂದರ್ಯ ಎಂದರೆ ಏನು ಎಂದು ಅರ್ಥಮಾಡಿಕೊಳ್ಳಲು ಸಹ ನಂತರ ಪ್ರಯತ್ನಿಸೋಣ!

ಪಾಠ - 1
ನನಗೆ ಬಲ ಇದೆ, ಅಧಿಕಾರ ಇದೆ, ಬೆಂಬಲವಿದೆ ಮತ್ತು ನಾನು ಸುರಕ್ಷಿತವಾಗಿದ್ದೇನೆ ಎಂದು ಎಲ್ಲರೂ ಭಾವಿಸುತ್ತಾರೆ. ಕೆಳಗಿನ ಚಿತ್ರದಲ್ಲಿರುವಂತೆ. ನಿಮ್ಮ ಕೆಳಗೆ ಕೆಲವು ಜೇನುಗೂಡುಗಳು ಅಡಗಿವೆ. ಕೇವಲ ಒಂದು ಚಿಕ್ಕ ತಪ್ಪು, ಜೇನುನೊಣಗಳಿಂದ ನಿಮ್ಮ ಮೇಲೆ ಆಕ್ರಮಣ ಮಾಡಿಸಬಹುದು.

ನೀವು ಎಷ್ಟು  ಶಕ್ತಿಯುತವಾಗಿದ್ದಿರಿ, ಎಷ್ಟು ಸುರಕ್ಷಿತವಾಗಿದ್ದಿರಿ ಮತ್ತು ಎಷ್ಟು  ದೊಡ್ಡವರಾಗಿದ್ದೀರಿ ಎಂಬುದು ಮುಖ್ಯವಲ್ಲ.

ಒಂದು ಚಿಕ್ಕ ತಪ್ಪು ಅಥವಾ ಒಂದು ಪ್ರಜ್ಞಾಹೀನ ಕ್ರಿಯೆಯು ನಿಮ್ಮನ್ನು ನೆಲಸಮ ಗೊಳಿಸಬಹುದು ಮತ್ತು ನಿಮ್ಮ ಸಂಪತ್ತು, ಹಣ, ಅಧಿಕಾರ ಎಲ್ಲಾ ವಸ್ತು ಸಂಗ್ರಹಣೆಯನ್ನು ಕೇವಲ, ಒಂದು ಚಿಕ್ಕ ತಪ್ಪು ಹೆಜ್ಜೆ ನಾಶಪಡಿಸಬಲ್ಲದು!

ಪ್ರತಿಯೊಬ್ಬರೂ ತಮ್ಮದೇ ಆದ ಒಂದು ಅಪಾಯ ಹೊಂದಿದ್ದಾರೆ. ಪ್ರಜ್ಞೆ ಮತ್ತು ದೇವರ ಅನುಗ್ರಹ ಮಾತ್ರ ರಕ್ಷಣೆ ನೀಡಬಲ್ಲದು...

ಪಾಠ - 2
ನಿಮ್ಮ ಇಡೀ ಜೀವಮಾನದ ಸಾಧನೆ ಮತ್ತು ಸಂಪತ್ತು ನಾಶವಾಗಿದ್ದರು. ಎಂತಹ ದೊಡ್ಡ ವಿಪತ್ತು ನಿಮಗೆ ಬಂದಿದ್ದರು. ಇನ್ನು ಜೀವನವೇ ಇಲ್ಲ ಎನ್ನುವ ಸ್ಥಿತಿ ಬಂದಿದ್ದರು.

ನೀವು ಅದನ್ನೇ ಯೋಚಿಸುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಮನಸ್ಸಿದ್ದರೆ ಮಾರ್ಗ ಇದ್ದೇ ಇರುತ್ತದೆ. ಕೇವಲ ಒಂದೇ ಒಂದು ಭರವಸೆ ನಿಮ್ಮಲ್ಲಿ ಇದ್ದರೆ ಸಾಕು. ಕೆಳಗಿನ ಚಿತ್ರದಲ್ಲಿ ಇರುವ ರೀತಿ, ಕಡಿದು ತುಂಡರಿಸಿದ ಮರದಲ್ಲಿ ಚಿಗುರಿದ ಕೊಂಬೆಯ ರೀತಿ, ನೀವು ಮತ್ತೆ ನಿಮ್ಮ ಜೀವನವನ್ನು ಪುನರ್ನಿರ್ಮಾಣ ಮಾಡಬಹುದು.

ಸಂಕಲ್ಪವಿದ್ದರೆ ದಾರಿಯೂ ಇದೆ. ಮರದ ಕೊಂಬೆಯಂತೆ ನೀವು ಮತ್ತೆ ಹೊಸ ಬದುಕನ್ನು  ಆರಂಬಿಸಬಹುದು...

ಸೌಂದರ್ಯವನ್ನು ಅರ್ಥಮಾಡಿಕೊಳ್ಳುವುದು:

ನೀವು ಜೀವನವನ್ನು ಆನಂದಿಸಲು ಬಯಸಿದರೆ, ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ನಿಮ್ಮ ಹತ್ತಿರ ಮತ್ತು ಸುತ್ತಲೂ ಸೌಂದರ್ಯವಿದೆ. ಪ್ರಶ್ನೆಯೆಂದರೆ, ಅದನ್ನು ಗುರುತಿಸಲು ಮತ್ತು ನೋಡಲು ನಿಮಗೆ ಹೃದಯ ಮತ್ತು ಕಣ್ಣುಗಳಿವೆಯೇ?

ನೀವು ಯಾವುದೊ ಯೋಚನೆ ಮತ್ತು ಚಿಂತೆಯಲ್ಲಿ ಮುಳುಗಿದ್ದರೆ, ಮಂಗಳ ಗ್ರಹಕ್ಕೆ ಯಾತ್ರೆ ಹೋಗುವುದರಲ್ಲಿ ಅರ್ಥವೇ ಇಲ್ಲ, ಏಕೆಂದರೆ ನಿಮ್ಮ ಮನಸ್ಸು ಯೋಚನೆ ಮತ್ತು ಚಿಂತೆ ಮಾಡುತ್ತಾ ಭೂಮಿಯ ಮೇಲೆಯೇ ಇರುತ್ತದೆ, ನೀವು ಮಂಗಳ ಗ್ರಹಕ್ಕೆ ತೆಗೆದುಕೊಂಡ ಹೋಗಿರುವುದು ಕೇವಲ ನಿಮ್ಮ ದೇಹ ಮಾತ್ರ.

ನೀವು ಜೀವನವನ್ನು ಆನಂದಿಸಲು ಬಯಸಿದರೆ, ನೀವು ಎಲ್ಲಿ ಇರುತ್ತೀರೋ ಅಲ್ಲಿಯೇ ಇರಲು ಪ್ರಯತ್ನ ಮಾಡಿ. ಇರುವುದು ಎಂದರೆ ನಿಮ್ಮ ಮನಸ್ಸು ಮತ್ತು ದೇಹವನ್ನು ಒಂದೇ ಸ್ಥಳದಲ್ಲಿ ಇಟ್ಟು ಕೊಂಡಿರುವುದು.

ನನ್ನ ಡ್ರಿಫ್ಟ್ (ಗುರಿ ಇಲ್ಲದ) ವಾಕ್‌ನಲ್ಲಿ ನಾನು ಸೆರೆಹಿಡಿದ ಬೆಂಗಳೂರಿನ ಸೌಂದರ್ಯ ಕೆಳಗಿನ ಚಿತ್ರಗಳಲ್ಲಿ ಇದೆ...

ಡ್ರಿಫ್ಟ್  ವಾಕ್: ಗುರಿ ಇಲ್ಲದ ನಡಿಗೆ. ಎಂದರೆ, ಯಾವುದೇ ನಿರ್ದಿಷ್ಟ ಗುರಿ ಇಲ್ಲದೆ, ನಿಮ್ಮ ಇಚ್ಛೆ ಬಂದ ಕಡೆ ಸಾಗುವುದು. ಗುರಿ ಇದ್ದರೆ ಅದರಲ್ಲಿ ನಿರೀಕ್ಷೆ ಮತ್ತು ಊಹೆಗಳು ಇರುತ್ತವೆ ಹಾಗು ಅದು ಸೀಮಿತವಾಗಿರುತ್ತದೆ. ಗುರಿ ಇಲ್ಲದೆ ಇರುವಾಗ, ನೀವು ನಡೆಯುವ ದಾರಿಯಲ್ಲಿ ವಿಚಿತ್ರ, ವಿಸ್ಮಯ, ಆಶ್ಚರ್ಯ, ಸಂತೋಷ, ಕುತೂಹಲಗಳು ಇರುತ್ತವೆ ಹಾಗು ಅದು ಎಲ್ಲೆ ಇಲ್ಲದ ನಡಿಗೆ. ಅಲ್ಲಿ ನೀವು ಸಂಪೂರ್ಣವಾಗಿ ಕಾನ್ಸಿಯಸ್ ಆಗಿ ಇರುತ್ತೀರಿ. 

ನೀವು ಕಾನ್ಸಿಯಸ್ ಆಗಿ ಇರಬೇಕೆಂದರೆ ನೀವು ರೊಟಿನ್ ಆಗಿ ಇರಬಾರದು, ರೊಟಿನ್ ಆಗಿ ಇದ್ದರೆ, ಅಲ್ಲಿ ಕೇವಲ ಸಬ್ ಕಾನ್ಸಿಯಸ್ ಮೈಂಡ್ ಅಷ್ಟೇ ಕೆಲಸ ಮಾಡುತ್ತದೆ, ದಿನವೂ ಒಂದೇ ರಸ್ತೆಯಲ್ಲಿ ಆಫೀಸ್ ಗೆ ಹೋಗುವ ಜನರು, ಸಾಕಷ್ಟು ಸಮಯ ಅವರು ಕಾನ್ಸಿಯಸ್ ಆಗಿ ಇರುವುದಿಲ್ಲ ಆದರೆ ಅವರು ಆಫೀಸ್ ತಲುಪುವರು. ಅಲ್ಲಿ ಅವರ ದೇಹ ಸಬ್ ಕಾನ್ಸಿಯಸ್ ಪ್ರೋಗ್ರಾಮ್ (ಆಟೋಮ್ಯಾಟಿಕ್ ಪ್ರೋಗ್ರಾಮ್) ಬಳಸಿ ಆಫೀಸ್ ತಲುಪುತ್ತಾರೆ. ಆದರೆ, ಭಿನ್ನವಾದ ಕೆಲಸ ಅಥವಾ ದಾರಿಯಲ್ಲಿ ಸಾಗುವಾಗ, ನೀವು ಸಬ್ ಕಾನ್ಸಿಯಸ್ ಮೈಂಡ್ ಬಳಸಲು ಆಗೋಲ್ಲ ಆಗ ನೀವು ಕಾನ್ಸಿಯಸ್ ಆಗಿ ಇರುವಿರಿ. 

ಕಾನ್ಸಿಯಸ್ ಆಗಿ ಇರುವುದು ಎಂದರೆ ಅದು ಧ್ಯಾನಕ್ಕೆ ಸಮಾನ, ಹೇಗೆ ಧ್ಯಾನ ಆನಂದವನ್ನು ಕೊಡುವುದೋ ಹಾಗೆ. ಹಾಗಾಗಿಯೇ ಜನರು ಹೊಸ ಪ್ರದೇಶಕ್ಕೆ ಹೋದಾಗ, ಟ್ರೆಕ್ ಮಾಡುವಾಗ ಅಥವಾ ಗೇಮ್ಸ್ ಆಡುವಾಗ ಆನಂದ ಅನುಭವಿಸುವರು. ನೀವು ಹಾಗಾಗ ಡ್ರಿಫ್ಟ್ ವಾಕ್ ಅಥವಾ ಡ್ರಿಫ್ಟ್ ಡ್ರೈವ್ ಮಾಡಿ ನೋಡಿ, ಅದು ನಿಮಗೆ, ಆಶ್ಚರ್ಯ ಮತ್ತು ಆನಂದ ಕೊಡುವುದು. 

ನೀವು ಜೀವನ, ಆರೋಗ್ಯ, ಆಧ್ಯಾತ್ಮಿಕ ಮತ್ತು ಧ್ಯಾನದ ವೀಡಿಯೊಗಳನ್ನು ವೀಕ್ಷಿಸಲು, ದಯವಿಟ್ಟು ನನ್ನ ಕನ್ನಡ ಭಾಷೆಯ YouTube ಚಾನಲ್‌ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ ಅಥವಾ Youtube ನಲ್ಲಿ ಹೀಗೆ ಹುಡುಕಿ: @gcvkannada

 















ನೀವು ಜೀವನ, ಆರೋಗ್ಯ, ಆಧ್ಯಾತ್ಮಿಕ ಮತ್ತು ಧ್ಯಾನದ ವೀಡಿಯೊಗಳನ್ನು ವೀಕ್ಷಿಸಲು, ದಯವಿಟ್ಟು ನನ್ನ ಕನ್ನಡ ಭಾಷೆಯ YouTube ಚಾನಲ್‌ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ ಅಥವಾ Youtube ನಲ್ಲಿ ಹೀಗೆ ಹುಡುಕಿ: @gcvkannada


ಧನ್ಯವಾದಗಳು 

ಜಿ ಸಿ ವಿ