Friday, July 1, 2022

ಆರೋಗ್ಯ ಆಫ್ಫಾರ್ಮೆಷನ್

 

ಆರೋಗ್ಯ ಆಫ್ಫಾರ್ಮೆಷನ್

 

ನಮಸ್ಕಾರ ಸ್ನೇಹಿತರೆ, ನಾನು ಇಲ್ಲಿ ಕೊಟ್ಟಿರುವ ಆರೋಗ್ಯದ ಆಫ್ಫಾರ್ಮಶನ್ ಗಳು, ತುಂಬಾ ಪರಿಣಾಮ ಕಾರಿ ಮತ್ತು ಪ್ರಾಯೋಗಿಕವಾಗಿ ವಿಶ್ವದಲ್ಲಿ ಆಫ್ಫಾರ್ಮಶನ್ ಮೂಲಕ ಆರೋಗ್ಯ ಸುಧಾರಣೆಗೆ ಅನುಸರಿಸುವ ಉತ್ತಮ ಪದ್ಧತಿಗಳು.

 ನೀವು ಸಂಪೂರ್ಣ ದೇಹದ ಆರೋಗ್ಯ ಬಯಸುವುದಾದರೆ ನಾನು ಇಲ್ಲಿ ಕೊಟ್ಟಿರುವ ಎಲ್ಲಾ ಆಫ್ಫಾರ್ಮಶನ್ ಗಳನ್ನ ಒಂದು ಹಾಳೆಯಲ್ಲಿ ಬರೆದುಕೊಂಡು ದಿನವೂ ಹೇಳಿಕೊಳ್ಳಿ ಅಥವಾ ಈ ವಿಡಿಯೋ ಕೇಳುತ್ತಾ ಮನದಲ್ಲಿ ಆಫ್ಫಾರ್ಮಶನ್ ಹೇಳಿಕೊಂಡು ಅಭ್ಯಾಸ ಮಾಡಿ. ಅಥವಾ ನನ್ನ ಯು ಟ್ಯೂಬ್ ವಿಡಿಯೋ ಆರೋಗ್ಯದ ಅಫಾರ್ಮೇಶನ್ ಧ್ಯಾನ ಎನ್ನುವ ವಿಡಿಯೋ ಕೇಳುತ್ತಾ ಅಭ್ಯಾಸ ಮಾಡಿ.

 ನಿಮ್ಮಲ್ಲಿ ದೇಹದ ಯಾವುದಾದರೂ ಒಂದು ಅಂಗಾಂಗಕ್ಕೆ ಸಂಬಂದಿಸಿದ ಅನಾರೋಗ್ಯ ಸಮಸ್ಯೆ ಇದ್ದರೆ, ನೀವು ಆ ಅಂಗಾಂಗಕ್ಕೆ ಸಂಬಂದಿಸಿದ ಆಫ್ಫಾರ್ಮಶನ್ ಗಳನ್ನು ಮಾತ್ರ ಪೇಪರ್ ನಲ್ಲಿ ಬರೆದು ಕೊಂಡು ಅಭ್ಯಾಸ ಮಾಡಿ.

 ನಿಮ್ಮಆಫ್ಫಾರ್ಮಶನ್ ಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು, ನಾನು ಹೇಳುವ ವಿಧಾವನ್ನು ಅನುಸರಿಸಿ ಅಭ್ಯಾಸ ಮಾಡಿ.

 ನಿಮ್ಮ ಆಫ್ಫಾರ್ಮಶನ್ ಬೇಗ ನಿಮಗೆ ಫಲಿತಾಂಶ ಕೊಡಬೇಕೆಂದರೆ ನಿಮಗೆ ನಿಮ್ಮ ಮೇಲೆ ಸಂಪೂರ್ಣವಾದ ನಂಬಿಕೆ ಇರಬೇಕು. ನಿಮಗೆ ನಿಮ್ಮ ಆತ್ಮದ ಶಕ್ತಿಯ ಮೇಲೆ ಮತ್ತು ಆ ಪರಮಾತ್ಮನ ಮೇಲೆ ಸಂಪೂರ್ಣವಾದ ವಿಸ್ವಾಸ ಇರಬೇಕು.

 ಮತ್ತು ಈ  ಆಫ್ಫಾರ್ಮಶನ್ ಗಳನ್ನ, ನೀವು ದಿನವೂ ನಾನು ಹೇಳಿದ ಸಮಯದಲ್ಲಿ, ಹೇಳಿದ ವಿಧಾನವನ್ನು ಅನುಸರಿಸಿ ತಪ್ಪದೆ ಅಭ್ಯಾಸ ಮಾಡಬೇಕು. 

 ಅಭ್ಯಾಸ ಮಾಡುವಾಗ ನೀವು, ಪ್ರತಿ ಒಂದು ಸಮಯದಲ್ಲಿ, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಹೇಳಿಕೊಳ್ಳಬೇಕು.

 ನೀವು ಪ್ರತಿ ಬಾರಿ ಮನದಲ್ಲಿ ಹೇಳಿಕೊಳ್ಳುವಾಗ, ಅದನ್ನು ಪೂರ್ಣ ವಿಸ್ವಾಸಾದದಿಂದ ನಿಮ್ಮ ಹೃದಯದಲ್ಲಿ ಭಾವಿಸಬೇಕು. ನೀವು ಆಫ್ಫಾರ್ಮಶನ್ ಹೇಳಿಕೊಳ್ಳುವಾಗ ಎಷ್ಟು ಮನದಲ್ಲಿ ಫೀಲ್ ಆಗುವಿರೋ ಅಷ್ಟು ಪರಿಣಾಮ ಕಾರಿಯಾಗಿ ಅದು ನಿಮಗೆ ರಿಸಲ್ಟ್ ಕೊಡುತ್ತದೆ. 

 ಒಂದುವೇಳೆ ನಿಮಗೆ ಸಮಯ ಇದ್ದರೆ ಅಥವಾ ಬೇಗ ಗುಣವಾಗಲು ಬಯಸಿದರೆ, ದಿನದಲ್ಲಿ ೫ ಅಥವಾ ೬ ಸಮಯದಲ್ಲಿಈ ಆಫ್ಫಾರ್ಮಶನ್ ಗಳನ್ನ ಅಭ್ಯಾಸ ಮಾಡಿ.

 ಬೆಳಿಗ್ಗೆ ಎದ್ದ ಕೊಡಲೇ, ನೀವು ಹಾಸಿಗೆಯಿಂದ ಕೆಳಗೆ ಇಳಿಯುವುದಕ್ಕೂ ಮೊದಲೇ, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ಮತ್ತೆ ನೀವು ಸ್ನಾನ ಮಾಡುವ ಸಮಯದಲ್ಲಿ, ನೀರನ್ನು ನಿಮ್ಮ ದೇಹದ ಮೇಲೆ ಹಾಕಿಕೊಳ್ಳುತ್ತಾ ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ಮತ್ತೆ ರಾತ್ರಿ ನೀವು ಮಲಗುವುದಕ್ಕೂ ಮುನ್ನ, ಎಂದರೆ ನೀವು ನಿದ್ದೆಗೆ ಹೋಗುವ ೧೦ ನಿಮಿಷದ ಮೊದಲು, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ನಾನು ಹೇಳಿದ ಈ ಮೂರು ಸಮಯಗಳಲ್ಲಿ ನಿಮ್ಮ ಆಫ್ಫಾರ್ಮಶನ್ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಏಕೆ ಮತ್ತು ಹೇಗೆ ಎನ್ನುವದನ್ನ ನಾನು ಮುಂದಿನ ದಿನಗಳಲ್ಲಿ ವೈಜ್ಞಾನಿಕ ಕಾರಣಗಳೊಂದಿಗೆ ವಿವರಿಸುತ್ತೇನೆ.

 ಮಿತ್ರರೇ ಈಗ ನಾವು ಆರೋಗ್ಯದ ಮತ್ತು ದೇಹದ ಅಂಗಾಂಗಳಿಗೆ ಸಂಬಂದಿಸಿದ ಆಫ್ಫಾರ್ಮಶನ್ ಗಳನ್ನ ಒಂದೊಂದಾಗಿ ನೋಡೋಣ...

 ಮುಖ

ನಾನು ಹೇಗಿದ್ದೇನೋ ಹಾಗೆಯೆ ನನ್ನನ್ನು ನಾನು ಪ್ರೀತಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ನಾನು ಅದ್ಭುತವಾದ ವ್ಯಕ್ತಿ.

 ತಲೆ

ನನ್ನಲ್ಲಿ ಶಾಂತಿ, ಪ್ರೀತಿ, ಸಂತೋಷ, ಮತ್ತು ವಿಶ್ರಾಂತಿ ತುಂಬಿವೆ. ನಾನು ಜೀವನದ ಜ್ಯೋತೆ ಹಾಯಾಗಿ ನದಿಯ ರೀತಿ ಪ್ರಯಾಣ ಮಾಡುತ್ತೇನೆ ಮತ್ತು ಜೀವನವು ಸುಲಭವಾಗಿ ನನ್ನ ಮೂಲಕ ನದಿಯ ಹಾಗೆ  ಹರಿಯುತ್ತಿದೆ.

 ಕಿವಿಗಳು

ದ್ವನಿ ದೇವರ ವಾಣಿ. ನಾನು ದೇವರ ವಾಣಿಯನ್ನು ಕೇಳುತ್ತೇನೆ. ನಾನು ಜೀವನದ ಸಂತೋಷವನ್ನು ಹಾಯಾಗಿ ಕೇಳುತ್ತೇನೆ. ದ್ವನಿ  ಜೀವನದ ಒಂದು  ಭಾಗ, ನಾನು ಪ್ರೀತಿಯಿಂದ ಎಲ್ಲವನ್ನು ಕೇಳುತ್ತೇನೆ.

 ಬಾಯಿ

ನಾನು ಪ್ರೀತಿಯಿಂದ ಇದ್ದೇನೆ. ನಾನೊಬ್ಬ ನಿರ್ಣಾಯಕ ವ್ಯಕ್ತಿ. ನಾನು ಎಲ್ಲವನ್ನು ಅನುಸರಿಸುತ್ತೇನೆ. ನಾನು ಹೊಸ ಆಲೋಚನೆಗಳು ಮತ್ತು ಹೊಸ ಪರಿಕಲ್ಪನೆಗಳನ್ನು ಸ್ವಾಗತಿಸುತ್ತೇನೆ.

 ಮೆದುಳು

ನಾನು ಜೀವನದಲ್ಲಿ ಎಲ್ಲರೊಂದಿಗೆ ಒಂದಾಗಿದ್ದೇನೆ. ನನ್ನ ಶಾಂತಿಯನ್ನು ಕದಡುವ ಶಕ್ತಿ ಯಾರಿಗೂ ಇಲ್ಲ. ನಾನು ಹಳೆಯ ನಂಬಿಕೆಗಳನ್ನು ನಿರಾಕರಿಸುತ್ತೇನೆ.  ನನ್ನ ಜೀವನ ಶಾಂತಿ ಮತ್ತು ಸಾಮರಸ್ಯವಾಗಿದೆ.

 ಕಣ್ಣುಗಳು

ನಾನು ಸ್ವತಂತ್ರವಾಗಿ ಇದ್ದೇನೆ.  ನಾನು ಮುಕ್ತವಾಗಿ ಮುಂದೆ ನೋಡುತ್ತೇನೆ ಏಕೆಂದರೆ ಜೀವನವು ಶಾಶ್ವತವಾಗಿದೆ ಮತ್ತು ಸಂತೋಷದಿಂದ ತುಂಬಿದೆ. ನಾನು ನನ್ನ ಪ್ರೀತಿಯ ಕಣ್ಣುಗಳಿಂದ ಅದನ್ನು ನೋಡುತ್ತೇನೆ. ಯಾರೂ ನನ್ನನ್ನು ಎಂದಿಗೂ ನೋಯಿಸಲಾರರು. ನಾನು ಎಲ್ಲವನ್ನು ತುಂಬಾ ಖುಷಿ ಮತ್ತು ಪ್ರೀತಿ ಯಿಂದ ನೋಡುತ್ತೇನೆ. 

 ಗಂಟಲು

ನಾನು ಹಾಯಾಗಿ ಮಾತನಾಡಬಲ್ಲೆ. ನಾನು ನನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತೇನೆ. ನಾನು ಸೃಜನಶೀಲ ವ್ಯಕ್ತಿ. ನಾನು ಪ್ರೀತಿಯಿಂದ ಮಾತನಾಡುತ್ತೇನೆ.

 ಕುತ್ತಿಗೆ

ನಾನು ಹೊಂದಿಕೊಳ್ಳುವ ವ್ಯಕ್ತಿ. ನಾನು ಇತರರ ಭಾವನೆ ಮತ್ತು ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇನೆ. ನನ್ನ ಜೀವನ ಶಾಂತಿ ಮತ್ತು ಸುರಕ್ಷಿತವಾಗಿ ಇದೆ.

 ಶ್ವಾಸಕೋಶಗಳು

ಜೀವನದ ಉಸಿರು ನನ್ನ ಮೂಲಕ ಸುಲಭವಾಗಿ ಹರಿಯುತ್ತಿದೆ. ಶಾಂತಿ ತುಂಬಿದೆ. ಯಾರೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನನ್ನ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಸ್ವತಂತ್ರವಾಗಿದ್ದೇನೆ. ನಾನು ಜೀವನವನ್ನು ಸರಿತೂಗಿಸಬಲ್ಲೆ.

 ಹೃದಯ

ನನ್ನಲ್ಲಿ ಸಂತೋಷ, ಪ್ರೀತಿ, ಶಾಂತಿ ತುಂಬಿದೆ. ನಾನು ಜೀವನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನ ಹೃದಯ ಮತ್ತೆ ಆನಂದ ಮತ್ತು ಸಂತೋಷ ದಿಂದ ತುಂಬಿದೆ.

 ಭುಜಗಳು

ನಾನು ಕೋಪವನ್ನು ನನ್ನಿಂದ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತೇನೆ. ನನ್ನಲ್ಲಿ ಪ್ರೀತಿ ಮತ್ತು ವಿಶ್ರಾಂತಿ ಹೆಚ್ಚಾಗುತ್ತಿದೆ. ನನ್ನ ಜೀವನ ಸಂತೋಷ ಮತ್ತು ಮುಕ್ತವಾಗಿದೆ; ನಾನು ಸ್ವೀಕರಿಸುವ ಎಲ್ಲವೂ ಒಳ್ಳೆಯದೇ.

 ಕೈಗಳು

ನಾನು ಎಲ್ಲಾ ವಿಚಾರಗಳನ್ನು ಪ್ರೀತಿಯಿಂದ ಮತ್ತು ಸುಲಭವಾಗಿ ನಿಭಾಯಿಸುತ್ತೇನೆ.

 ಕೈ ಬೆರಳುಗಳು

ನಾನು ಹಾಯಾಗಿ ವಿಶ್ರಾಂತಿ ಪಡೆಯುತ್ತೇನೆ.  ನನ್ನ ಜೀವನದ ಬುದ್ಧಿವಂತಿಕೆ ಎಲ್ಲವನ್ನು ನೋಡಿಕೊಳ್ಳುವ ಮತ್ತು ನಿಭಾಯಿಸುವ ಶಕ್ತಿ ಹೊಂದಿದೆ.  ನನ್ನಲ್ಲಿ ಶಾಂತಿ, ಪ್ರೀತಿ, ಹಿತವಾದ ವಾತಾವರಣವಿದೆ.  ನನ್ನ ಕೌಟುಂಬಿಕ ಜೀವನ ಆನಂದಮಯವಾಗಿದೆ. 

 ಲಿವರ್

ನಾನು ಇನ್ನು ಮುಂದೆ, ನನಗೆ ಅಗತ್ಯವಿಲ್ಲದ ಎಲ್ಲವನ್ನೂ ನಾನು ಬಿಟ್ಟು ಬಿಡುತ್ತೇನೆ. ನನ್ನ ಪ್ರಜ್ಞೆಯು ಈಗ ಶುದ್ಧವಾಗಿದೆ ಮತ್ತು ನನ್ನ ಪರಿಕಲ್ಪನೆಗಳು ಹೊಸತನದೊಂದಿಗೆ ಕಂಗೊಳಿಸುತ್ತಿವೆ.  ನನ್ನಲ್ಲಿ ಶಾಂತಿ, ಪ್ರೀತಿ ಮತ್ತು ಸಂತೋಷ ತುಂಬಿದೆ.

 ಹೊಟ್ಟೆ

ನಾನು ಹೊಸ ಆಲೋಚನೆಗಳನ್ನು ಸುಲಭವಾಗಿ ಸಂಯೋಜಿಸುತ್ತೇನೆ. ನನ್ನನ್ನು ನಾನು  ಒಪ್ಪುತ್ತೇನೆ ಮತ್ತು ಪ್ರೀತಿಸುತ್ತೇನೆ.  ಯಾವುದೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನಾನು ಶಾಂತವಾಗಿದ್ದೇನೆ. ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ.

 ದೊಡ್ಡ ಕರುಳುಗಳು

ನಾನು ಸ್ವತಂತ್ರವಾಗಿ ಇದ್ದೇನೆ; ನಾನು ಹಿಂದಿನ ಎಲ್ಲಾ ನೆನಪುಗಳನ್ನು ಬಿಡುಗಡೆ ಮಾಡುತ್ತೇನೆ. ನನ್ನ ಜೀವನವು ಈಗ ಸುಲಭವಾಗಿ ನದಿಯ ರೀತಿ ಹರಿಯುತ್ತಿದೆ. ನಾನು ಎಲ್ಲಾ ಒತ್ತಡ ಮತ್ತು ಭಾರಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಈ ಕ್ಷಣಗಳು ಸಂತೋಷ ಮತ್ತು ಆನಂದ ದಿಂದ ತುಂಬಿವೆ.

 ಮೂತ್ರಪಿಂಡಗಳು (Kidneys)

ನಾನು ಹಳೆಯ ಸರಿಯಲ್ಲದ ನೆನಪುಗಳನ್ನು ಬಿಡುಗಡೆ ಮಾಡಿದ್ದೇನೆ. ನಾನು ಎಲ್ಲಾಕಡೆ  ಒಳ್ಳೆಯದನ್ನು ಮಾತ್ರ ಹುಡುಕುತ್ತೇನೆ. ಜೀವನ ಸರಿಯಾದ ಕ್ರಮದಲ್ಲಿ ಸಾಗುತ್ತಿದೆ. ನಾನು ಸಂಪೂರ್ಣನಾಗಿದ್ದೇನೆ.

 ಮೂತ್ರ ಕೋಶ (Kidneys)

ನಾನು ಹಳೆಯದನ್ನು ಬಿಡುಗಡೆ ಮಾಡುತ್ತೇನೆ ಮತ್ತು ಹೊಸದನ್ನು ಸ್ವಾಗತಿಸುತ್ತೇನೆ.

 ಪೆಲ್ವಿಸ್

ಆಕಾರಗಳು  ಮತ್ತು ಸಂಪರ್ಕಗಳು  ಬದಲಾಗಬಹುದು ಆದರೆ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ದೇಹದ ಎಲ್ಲಾ ಬದಲಾವಣೆಗಳಲ್ಲಿ ನಾನು ಸಮತೋಲನದಲ್ಲಿದ್ದೇನೆ. ನಾನು ನನ್ನ ದೇಹವನ್ನು ಪ್ರೀತಿಯಿಂದ ಆಶೀರ್ವದಿಸುತ್ತೇನೆ. ನನ್ನ ದೇಹದ ಎಲ್ಲಾ ಭಾಗಗಳು ಸುಂದರವಾಗಿವೆ.

 ಹಿಪ್

ನಾನು ನನ್ನ ಜೀವನದ ಶಕ್ತಿ, ಬೆಂಬಲ ಮತ್ತು ಸಮರ್ಥನೆಯೊಂದಿಗೆ ಸಂತೋಷದಿಂದ ಮುನ್ನಡೆಯುತ್ತೇನೆ. ನಾನು ಇನ್ನು ಹೆಚ್ಚು ಒಳತಿನೆಡೆಗೆ ಮುನ್ನಡೆಯುತ್ತಿದ್ದೇನೆ. ನಾನು ಇತರರನ್ನು ಅವರಂತೆಯೇ ಇರಲು ಬಿಡುತ್ತೇನೆ ಮತ್ತು ನಾನು ಸ್ವತಂತ್ರವಾಗಿದ್ದೇನೆ. ನನ್ನ ಜೀವನ ಸಮತೋನವಾಗಿ ಮುಂದುವರೆಯುತ್ತಿದೆ. 

 ಜನನಾಂಗಗಳು

ನನ್ನಲ್ಲಿ ಶಕ್ತಿ ಇದೆ, ನನ್ನ ಲೈಂಗಿಕ ಅಂಗಾಂಗಳು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿವೆ,  ನಾನು ಅವನ್ನು ಸುಲಭವಾಗಿ ಮತ್ತು ಸಂತೋಷದಿಂದ ಕಾರ್ಯನಿರ್ವಹಿಸಲು ಅನುಮತಿಸುತ್ತೇನೆ. ನನ್ನ ಲೈಂಗಿಕತೆಯನ್ನು ನಾನು ಪ್ರೀತಿಯಿಂದ ಮತ್ತು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನಲ್ಲಿ ಯಾವುದೇ ಬೇಸರವಾಗಲಿ ಮತ್ತು ಅಪರಾಧ ಭಾವನೆಯಾಗಲಿ ಇಲ್ಲ.

 ಮೊಣಕಾಲು

ನನ್ನಲ್ಲಿ ಕ್ಷಮೆ, ಸಹನೆ, ಸಹಾನುಭೂತಿ ತುಂಬಿವೆ. ನಾನು ಹಿಂಜರಿಕೆಯಿಲ್ಲದೆ ಮುನ್ನಡೆಯುತ್ತೇನೆ. ನಾನು ಈಗಿನ ಸ್ಥಿತಿಗತಿಗೆ ಅನುಸಾರವಾಗಿ ಬದಲಾಗುವ ಸ್ನೇಹ ಮತ್ತು ಪ್ರೀತಿಯ ಭಾವವನ್ನು ಹೊಂದಿದ್ದೇನೆ.

 ಚರ್ಮ

ನಾನು ಒಳ್ಳೆಯ ರೀತಿಯಲ್ಲಿ ಎಲ್ಲರನ್ನು ಗಮನ ಸೆಳೆಯುತ್ತೇನೆ. ನಾನು ಸುರಕ್ಷಿತವಾಗಿದ್ದೇನೆ. ನನ್ನ ವ್ಯಕ್ತಿತ್ವಕ್ಕೆ ಯಾವ ಭಯವು ಇಲ್ಲ. ನಾನು ಸಮಾಧಾನದಲ್ಲಿದ್ದೇನೆ. ಜಗತ್ತು ಸುರಕ್ಷಿತ ಮತ್ತು ಸ್ನೇಹಪರವಾಗಿದೆ. ನಾನು ಎಲ್ಲಾ ಕೋಪ ಮತ್ತು ಅಸಮಾಧಾನವನ್ನು ಬಿಡುಗಡೆ ಮಾಡುತ್ತೇನೆ. ನನಗೆ ಏನು ಬೇಕೋ ಅದು ಯಾವಾಗಲೂ ನನ್ನಲ್ಲಿಗೆ ಬರುತ್ತದೆ. ನಾನು ನನ್ನಲ್ಲಿನ  ಒಳ್ಳೆಯತನವನ್ನು ಹಾಯಾಗಿ ಸ್ವೀಕರಿಸುತ್ತೇನೆ. ನಾನು ನನ್ನ ಜೀವನದಲ್ಲಿ ಬರುವ ಎಲ್ಲಾ ಸಣ್ಣ ವಿಷಯಗಳೊಂದಿಗೆ ಶಾಂತಿಯುತವಾಗಿರುತ್ತೇನೆ.

 ಬೆನ್ನು

ಜೀವನ ನನ್ನನ್ನು ಬೆಂಬಲಿಸುತ್ತಿದೆ. ನಾನು ವಿಶ್ವವನ್ನು ನಂಬುತ್ತೇನೆ. ನಾನು ಪ್ರೀತಿ ಮತ್ತು ವಿಶ್ವಾಸವನ್ನು ಮುಕ್ತವಾಗಿ ನೀಡುತ್ತೇನೆ. ನಾನು ಧೈರ್ಯಶಾಲಿ ಮತ್ತು ಸ್ವತಂತ್ರ. ಜೀವನ ಚೆನ್ನಾಗಿದೆ. ನಾನು ಪ್ರೀತಿಯಿಂದ ಮುಂದುವರೆಯುತ್ತಿದ್ದೇನೆ. ಆ ದೈವದ ಸಪೋರ್ಟ್ ನನಗೆ ಇದೆ.

 ಗ್ರಂಥಿಗಳು

ನಾನು ಸಂಪೂರ್ಣ ಸಮತೋಲನದಲ್ಲಿದ್ದೇನೆ. ನನ್ನ ದೇಹದ ಅಂಗಾಂಗಳ ವ್ಯವಸ್ಥೆಯು ಕ್ರಮಬದ್ಧವಾಗಿದೆ. ನಾನು ಜೀವನವನ್ನು ಪ್ರೀತಿಸುತ್ತೇನೆ ಮತ್ತು ಮುಕ್ತವಾಗಿ ಸ್ವೀಕಾರ ಮಾಡುತ್ತೇನೆ. ನಾನು ಸೃಜನಶೀಲ ವ್ಯಕ್ತಿ.

ಪಾದಗಳು

ನಾನು ಸತ್ಯದಲ್ಲಿ ನಿಲ್ಲುತ್ತೇನೆ. ನಾನು ಸಂತೋಷದಿಂದ ಮುನ್ನಡೆಯುತ್ತೇನೆ. ನನಗೆ ಆಧ್ಯಾತ್ಮಿಕ ತಿಳುವಳಿಕೆ ಇದೆ. ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತೇನೆ.

 ಒಂದು ವಿಶೇಷ ಸೂಚನೆ ಮಿತ್ರರೇ,

ನೀವು ಈ ಅಫ್ರಾಮ್ಷನ್ ಮಾಡುವಾಗ ಒಂದುವೇಳೆ ಯಾವುದಾದರೂ ಮೆಡಿಕೇಷನ್ ನಲ್ಲಿ ಇದ್ದಾರೆ ಅದನ್ನು ನಿಲ್ಲಿಸ ಬೀಡಿ, ನಿಮಗೆ ಈ ಆಫ್ರ್ಮ್ಯಾಟಿವ್ನ್ ಮಾಡಿ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದ ಮೇಲೆ ವೈದ್ಯರ ಸಲಹೆಯ ಮೇರೆಗೆ ಬೇಕಾದರೆ ಆ ಮೆಡಿಕೇಷನ ಅನ್ನು ನಿಲ್ಲಿಸ ಬಹುದು. 

 ನೀವು ಈ ಆಫ್ಫಾರ್ಮಶನ್ ಗಳನ್ನ 30 ರಿಂದ 60 ದಿನ, ಒಂದು ದಿನವೂ ತಪ್ಪಿಸದೇ ನಾನು ಹೇಳಿದ ಆ ಮೂರು ಸಮಯದಲ್ಲಿ ಅಭ್ಯಾಸ ಮಾಡಿದರೆ, ನೀವು ನಿಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆ ಗಮನಿಸಬಲ್ಲಿರಿ.  ನಿಮಗೆ ಇದರ ಅಭ್ಯಾಸ ದಿಂದ ಆರೋಗ್ಯ ಸುಧಾರಣೆಯಾದರೆ, ದಯವಿಟ್ಟು ಈ ವಿಡಿಯೋ ಲಿಂಕ್ ಅನ್ನು ಇತರರಿಗೂ ಶೇರ್ ಮಾಡಿ, ಅವರಿಗೆ ಆರೋಗ್ಯ ಕರುಣಿಸಿದ ಸ್ವಲ್ಪವಾದರೂ ಪುಣ್ಯ ನಿಮಗೂ ಬರುತ್ತದೆ.

 ನೀವು ಈ ಅಫರ್ಮಶನ್ ದಿನಕ್ಕೆ 3 ಬಾರಿ ಹೇಳಿಕೊಂಳ್ಳುವುದರಿಂದಲೇ  ನಿಮ್ಮ ಆರೋಗ್ಯ ಸಮಸ್ಯಗೆ ಪರಿಹಾರ ಪಡೆಯಬಹುದು. ನಿಮಗೆ ಮತ್ತೆ ಬೇರೆ ರೀತಿಯ ಆರೋಗ್ಯ ಸಮಸ್ಯೆ ಬರದೇ ಶಾಶ್ವತ ಪರಿಹಾರ ಪಡೆಯಲು ನೀವು ಬಯಸಿದರೆ. ಕನಿಷ್ಠ ದಿನಕ್ಕೆ ಒಂದು ಗಂಟೆ ಆರೋಗ್ಯದ ಧ್ಯಾನ ಅಥವಾ ಇನ್ನಾವುದೇ ದ್ಯಾನ ಮಾಡುವ ಅಭ್ಯಾಸ ಮಾಡಿಕೊಂಡರೆ. ನೀವು ಬದುಕಿರುವ ವರೆಗು ಪೂರ್ಣ ಆರೋಗ್ಯ ದಿಂದ ಜೀವಿಸುವ ಸಾದ್ಯತೆ ಹೆಚ್ಚುಇದೆ ಮಿತ್ರರೇ.

ಹಾಗಾಗಿ, ನೀವು ನನ್ನ ಸಂಕಲ್ಪ ಧ್ಯಾನ ಅಥವಾ ಆರೋಗ್ಯ ಧ್ಯಾನದ ವಿಡಿಯೋ ನೋಡಿ ಕನಿಷ್ಟ ದಿನಕ್ಕೆ ಒಂದು ಗಂಟೆ ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.

 ಇದು ನನ್ನ ಯು ಟ್ಯೂಬ್ ಲಿಂಕ್:

https://youtube.com/channel/UCgDZumB4pM3kfqNjuLj2x3w

 ಮುಖ್ಯ ಸೂಚನೆ: ಬರೀ ಸಂಕಲ್ಪಗಳನ್ನು ಅಥವಾ ಅಫರ್ಮಶನ್  ಮಾಡಿಯೇ ನೀವು ಇಚ್ಚಿಸಿದ್ದನ್ನ ಪಡೆಯಬಹುದು, ಆದರೆ ಬಂದ ಆ ಆರೋಗ್ಯ ಅಥವಾ ಸಂಪತ್ತನ್ನು ಕಾಪಾಡಿಕೊಳ್ಳಲು ದಿನವೂ ಧ್ಯಾನ ಮಾಡುವುದು ತುಂಬಾ ಮುಖ್ಯ. ಧ್ಯಾನಕ್ಕೆ ಕರ್ಮವನ್ನು ಸುಡುವ ಶಕ್ತಿ ಇದೆ.

 ನೀವು ಆರೋಗ್ಯ ಪಡೆಯಲು ಧ್ಯಾನ ಮಾಡಲು ಇಚ್ಚಿಸಿದರೆ ನನ್ನ ಆರೋಗ್ಯದ ಅಫರ್ಮಶನ್  ಧ್ಯಾನ ಮತ್ತು  ಆರೋಗ್ಯದ ಸಂಕಲ್ಪ ಧ್ಯಾನ ಎರೆಡು ವಿಡಿಯೋಗಳನ್ನ ಅನುಸರಿಸಿ ಅವು ತುಂಬಾ ಪರಿಣಾಮಕಾರಿ ದ್ಯಾನಗಳು, ಅದರಲ್ಲಿ ನಿಮಗೆ ಇಷ್ಟವಾದ ಧ್ಯಾನವನ್ನು ದಿನಕ್ಕೆ ಕನಿಷ್ಠ ಎರೆಡು ಬಾರಿ ಮಾಡಿ.

 ನೀವು ಸಂಪತ್ತಿನ ಧ್ಯಾನ ಮಾಡಲು ಇಚ್ಚಿಸಿದರೆ ನನ್ನ ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನವನ್ನು ದಿನಕ್ಕೆ ಎರೆಡು ಬಾರಿ ಅಭ್ಯಾಸ ಮಾಡಿ.

ನೀವು ಈ ಅಫರ್ಮೇಶನ್ ಗಳನ್ನೂ ಓದಿಕೊಂಡು ಮಾಡಲು ಅಥವಾ ಬರೆದು ಕೊಳ್ಳಲು, ನಾನು ಈ ವಿಡಿಯೋ ಡೆಸ್ಕ್ರಿಪ್ಶೇನ್ ನಲ್ಲಿ ಕೊಟ್ಟಿರುವ ನನ್ನ ಬ್ಲಾಗ್ ಲಿಂಕ್ ಅನ್ನು ಕ್ಲಿಕ್ ಮಾಡಿ...

ಆರೋಗ್ಯದ ಸಂಕಲ್ಪ ಧ್ಯಾನ:

https://youtu.be/gMbHWJJoV_g

ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನ:

https://youtu.be/WGKHrg7az_E


ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇

http://askvishnudotcom.blogspot.com/2018/04/why-you-get-disease.html?m=1


 ಧನ್ಯವಾದಗಳು ಸ್ನೇಹಿತರೆ

 ಇಂತಿ ನಿಮ್ಮ

 ಜಿ ಸಿ ವಿ