Sunday, December 24, 2023

ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ - Tiruvannamalai Giri Pradakshina


ತಿರುವಣ್ಣಾಮಲೈ ನಲ್ಲಿ ಇರುವ ಅಗ್ನಿ ಲಿಂಗದ ದರ್ಶನ ಮತ್ತು ಗಿರಿ ಪ್ರದಕ್ಷಿಣೆ


ಜೀವನದ ದಿಕ್ಕನ್ನೇ ಬದಲಿಸಬಲ್ಲ ಯಾವುದಾದರೂ ಒಂದು ಕ್ಷೇತ್ರವಿದ್ದರೆ, ಅದು ದಕ್ಷಿಣದ ಕಾಶಿ - ತಿರುವಣ್ಣಾಮಲೈ! ಇದು ನನ್ನ ಅನುಭವದ ಮಾತು. ನಾನು ಪಾಂಡಿಚೆರಿಗೆ ಹೋದಾಗ, ಹಿಂದಕ್ಕೆ ಹೋಗುವಾಗ ಯಾವುದಾದರು ಕ್ಷೇತ್ರವಿದ್ದರೆ, ಅದನ್ನು ದರ್ಶನ ಮಾಡಿಕೊಂಡು ಹೋಗಬೇಕು ಎಂದು, ಗೂಗಲ್ ನಲ್ಲಿ ಹುಡುಕಿದಾಗ, ನನಗೆ ಸಿಕ್ಕ ಕ್ಷೇತ್ರ ತಿರುವಣ್ಣಾಮಲೈ. 

ಅದರ ದರ್ಶನದ ನಂತರ, ಅದರ ಬಗ್ಗೆ ನನಗೆ ಸಾಕಷ್ಟು ವಿಚಾರಗಳು ತಿಳಿದು ಆಶ್ಚರ್ಯವಾಯಿತು. ತಿರುವಣ್ಣಾಮಲೈ ದರ್ಶನ ಮತ್ತು ಗಿರಿ ಪ್ರದಕ್ಷಣೆ, ಸಾಮಾನ್ಯವಾದ ವಿಷಯಗಳು ಅಲ್ಲ. ನಿಮ್ಮ ಜನ್ಮ ಜನ್ಮಾಂತರದ ಸಂಚಿತ ಕರ್ಮವನ್ನು ಕೇವಲ ಒಂದು ದರ್ಶನದಿಂದಲೇ ಸುಟ್ಟು ಹಾಕುವಂತಹ ಕ್ಷೇತ್ರ ತಿರುವಣ್ಣಾಮಲೈ. 

ರಮಣ ಮಹರ್ಷಿ, ಧಾರ್ಮಿಕ ಗುರು ಮಮ್ತಾಜ್ ಅಲಿ ಖಾನ್, ರಿಂದ ಹಿಡಿದು ಇತ್ತೀಚಿನ ವಿನಯ್ ಗುರೂಜಿ ವರೆಗೂ ನೂರಾರು, ಸಾಧು, ಸಂತರು, ಮಹಾ ಮಹಿಮರು ತಿರುವಣ್ಣಾಮಲೈ ಕ್ಷೇತ್ರದ ಶಕ್ತಿಯ ಬಗ್ಗೆ ಹೇಳಿದ್ದಾರೆ. ತಿರುವಣ್ಣಾಮಲೈ ಅಗ್ನಿ ಲಿಂಗದ ದರ್ಶನ, ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಎಲ್ಲರಿಗೂ ಸಾಧ್ಯವಾಗದ ವಿಷಯ. ಅದಕ್ಕೆ ಕೆಲವು ಅರ್ಹತೆಗಳು ಇರಬೇಕು, ಕೇವಲ ಹಣ ಇದ್ದರೆ ಸಾಲದು. 

ತಿರುವಣ್ಣಾಮಲೈ ನಲ್ಲಿ ಇರುವ ಅಗ್ನಿ ಲಿಂಗದ ದರ್ಶನ ಮತ್ತು ಗಿರಿ ಪ್ರದಕ್ಷಿಣೆ ನಿಮ್ಮ ಜನ್ಮ ಜನ್ಮಾಂತರದ ಕರ್ಮಗಳನ್ನು ಸುಡಲು ಸಹಾಯ ಮಾಡುತ್ತದೆ. ಇದನ್ನು ನಾನು ಪ್ರಾಯೋಗಿಕವಾಗಿ ಮಾಡಿ, ಅನುಭವಿಸಿ ಹೇಳುತ್ತಿದ್ದೇನೆ. ನಾನು ಓದಿರುವುದು BSc, MCA ಹಾಗು ಪ್ರಾಧ್ಯಾಪನಾಗಿ ಮತ್ತು ಸಾಫ್ಟ್ ವೆರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ ಮತ್ತು ವಿದೇಶಗಳಿಗೂ ಸಹ ಹೋಗಿ ಬಂದಿದ್ದೇನೆ. ನಾನು ಯಾವುದನ್ನಾದರೂ ಪರೀಕ್ಷೆ ಮಾಡಿ ನಂಬುವ ಮನುಷ್ಯ, ನಾನು ಪರೀಕ್ಷೆ ಮಾಡಿ ಅದರಿಂದ ಫಲ ಪಡೆದ ಮೇಲೆಯೇ, ನಾನು ಕಂಡ ಸತ್ಯ ಮತ್ತು ಅದನ್ನು ಪಡೆಯುವ ಮಾರ್ಗದ ಬಗ್ಗೆ ಹೇಳುತ್ತಿದ್ದೇನೆ. 

ಸಾದ್ಯವಾದರೆ, ನೀವು ಪ್ರಯತ್ನಿಸಿ, ತಿರುವಣ್ಣಾಮಲೈ ನಲ್ಲಿ ಇರುವ ಅಗ್ನಿ ಲಿಂಗದ ದರ್ಶನ ಮತ್ತು ಗಿರಿ ಪ್ರದಕ್ಷಿಣೆ ನಿಮ್ಮ ಜೀವದಲ್ಲಿ ಮಹಾ ಬದಲಾವಣೆ ತರಬಲ್ಲದು. 

ಸೂಚನೆ:

1.ಗಿರಿಪ್ರದಕ್ಷಣೆ ಸಮಯದಲ್ಲಿ, ಚಿತ್ರದಲ್ಲಿ ಇರುವ ಸಂಖ್ಯೆಗಳ ಅನುಸಾರ, ಅಲ್ಲಿ ಕೊಟ್ಟಿರುವ ಎಲ್ಲಾ ದೇವಸ್ಥಾನಗಳನ್ನು ದರ್ಶನ ಮಾಡಿಕೊಳ್ಳಿ.

2. ರಮಣ ಮಹರ್ಷಿ ಅವರ ಆಶ್ರಮಕ್ಕೆ ಭೇಟಿಕೊಡಲು ಬಯಸಿದರೆ, ಅದಕ್ಕೆ ಕೆಲವು ಸಮಯಗಳನ್ನು ನಿಗದಿಪಡಿಸಿದ್ದಾರೆ. ಆ ಸಮಯಗಳನ್ನು ನೋಡಿಕೊಂಡು ಆಶ್ರಮಕ್ಕೆ ಭೇಟಿ ಮಾಡಿ. ಸಾಧ್ಯವಾದರೆ ಸ್ವಲ್ಪ ಹೊತ್ತು ಪ್ರಮಾಣ ಮಹರ್ಷಿಯವರ ಸಮಾಧಿಯ ಬಳಿ ಸಮಯವನ್ನು ಕಳೆದು ಬನ್ನಿ.

ತಿರುವಣ್ಣಾಮಲೈ ಬಗ್ಗೆ ವಿನಯ್ ಗುರೂಜಿ ಅವರು ಅನುಭವದ ಮಾತು...👇




ಕೆಳಗಿನ ಚಿತ್ರದಲ್ಲಿ, ಗಿರಿ ಪ್ರದಕ್ಷಣೆ ಮಾಡುವಾಗ, ದರ್ಶನ ಮಾಡಬೇಕಾದ ದೇವಸ್ಥಾನ ಮತ್ತು ಅದರ ನಕ್ಷೆಯನ್ನು ಕೊಡಲಾಗಿದೆ, ಅದನ್ನು ಅನುಸರಿಸಿ...👇👇👇


ತಿರುವಣ್ಣಾಮಲೈ ಗಿರಿ ಪ್ರದಕ್ಷಿಣ - Tiruvannamalai Giri Pradakshina