Friday, September 27, 2024

ಮೆಡಿಕಲ್ ಸೈನ್ಸ್ ತುಂಬಾ ಮುಂದುವರೆದಿದೆ ಎಚ್ಚರ!

ಮೆಡಿಕಲ್ ಸೈನ್ಸ್ ತುಂಬಾ ಮುಂದುವರೆದಿದೆ ಎಚ್ಚರ!

 


1.ಆರೋಗ್ಯವಂತ ವ್ಯಕ್ತಿಯನ್ನು ವಿವಿಧ ಪರೀಕ್ಷೆ ಮಾಡಿ, ನಿಮಗೆ ಹತ್ತು ಕಾಯಿಲೆ ಇದೆ ಎಂದು ಹೇಳುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

2.ನಡೆದಾಡಿಕೊಂಡು ಇರುವ ವ್ಯಕ್ತಿಗೆ ಟ್ರೀಟ್ಮೆಂಟ್ ಮಾಡಿ ವೀಲ್ ಚೆರ್ ನಲ್ಲಿ ಕೂರಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

3.ಒಂದು ಕಾಯಿಲೆಗೆ ಗುಳಿಗೆ ಕೊಟ್ಟು, ನಾಲ್ಕು ಹೊಸ ಕಾಯಿಲೆ ತರಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

4.ಹುಟ್ಟಿದ ಕೂಸಿಗೆ ತಾಯಿಯ ಹಾಲು ಕುಡಿಸದೆ ಮಗುವನ್ನು iCU ನಲ್ಲಿ ಇಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

5.ಕಣ್ಣು ಚೆನ್ನಾಗಿದ್ದರೂ ಹೊಸದೊಂದು ಕಾರಣ ಹೇಳಿ ಕನ್ನಡಕ ಕೊಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

6.ಮಣ್ಣು, ಸೂರ್ಯನ ಬಿಸಿಲು ಕೆಟ್ಟದ್ದೆಂದು ಬಿಂಬಿಸಿ, ವಿಟಮಿನ್ ಗುಳಿಗೆ ಮಾರುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

7.ದನ, ಮೇಕೆ, ಕುರಿಗಳ ಜೊತೆಗೆ ವಾಸಿಸಿ ಹೇರಳವಾಗಿ ಟಿ-ಸೆಲ್ಸ್  (T-regs) ಪಡೆದು ಅಲರ್ಜಿ, ಆಟೋ ಇಮ್ಯುನಿಟಿ, ಕ್ಯಾನ್ಸರ್ ಇಲ್ಲದೆ ಜೀವಿಸುವ ಜನರಿಗೆ, ಅವುಗಳಿದ ದೂರ ಇರಿಸಿ, ನಂತರ ಜನರಿಗೆ ಗುಳಿಗೆ, ಟ್ರೀಟ್ಮೆಂಟ್ ಕೊಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

8.ಗರ್ಭಿಣಿ ಹೊಟ್ಟೆಗೆ ಇಂಜೆಕ್ಷನ್ ಚುಚ್ಚಿ ನೀರನ್ನು ಪರೀಕ್ಷಿಸುವ (amniotic fluid) ಹೆಸರಲ್ಲಿ ಹೊಟ್ಟೆಯಲ್ಲಿ ಇರುವ ಮಗುವಿಗೂ ಭಯ ಬೀಳಿಸಿ ಹೊಟ್ಟೆಯಲ್ಲಿಯೆ ಮಗುವನ್ನು ಗಿರಗಿರ ತಿರುಗಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

9.ಆಸ್ಪತ್ರೆಯ ಸಹವಾಸ ಬೇಡ ಎಂದು ಮನೆಯಲ್ಲಿ ಇರುವ ಜನರಿಗೂ ಉಚಿತ ಮೆಡಿಕಲ್ ಚೆಕಪ್ ಮಾಡುತ್ತೇವೆ ಎನ್ನುವ ಬಲೆ ಬೀಸಿ, ಟ್ರೀಟ್ಮೆಂಟ್ ಎನ್ನುವ ಕೆಡ್ಡಗೆ ಕೆಡವಿಕೊಳ್ಳುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

10.ನಮ್ಮ ಪುರಾತನ ಆಹಾರ ಪದ್ಧತಿಯನ್ನು ಸರಿ ಇಲ್ಲ ಎಂದು ಭಯ ಪಡಿಸಿ ಬಿಡಿಸಿ, ಅನಾಯೋಗ್ಯ ತರಿಸಿ, ಔಷಧಿ ಕೊಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

11. ನಡೆದಾಡುವ ವ್ಯಕ್ತಿಗೆ ವೀಲ್ ಚೇರ್ ಕೊಟ್ಟು, ವೀಲ್ ಚೇರ್ ನಲ್ಲಿ ಇದ್ದವರನ್ನು iCU ಗೆ ಕಳುಹಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

12.ಆಗಲೇ ಜನಿಸಿದ ಮರಿಗಳನ್ನು ನಾಯಿ, ಬೆಕ್ಕುಗಳೇ ಎಳೆಯ ಕಣ್ಣಿಗೆ ಹಾನಿಯಾಗದ ರೀತಿ ಕತ್ತಲೆ ಜಾಗದಲ್ಲಿ ಇಡುತ್ತವೆ. ಆದರೆ, ಮನುಷ್ಯರ  ಹಸು ಗೂಸನ್ನು LED ಲೈಟ್ ಕೆಳಗೆ ಇಟ್ಟು, ಮಕ್ಕಳಿಗೆ ಬಾಲ್ಯದಲ್ಲೇ ಕನ್ನಡಕ ಕೊಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

13.ಅಮೇರಿಕಾ ದಂತಹ ದೇಶದಲ್ಲಿ ಕಂಪನಿಗಳು ಲಾಬಿ ಮಾಡಿ ಮಕ್ಕಳಿಗೆ 70 ಅನಾವಶ್ಯಕ ಲಸಿಕೆ ಕೊಟ್ಟು ಮಕ್ಕಳಲ್ಲಿ ಅಂಗವೈಕಲ್ಯ ತರುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ. (Ref:below video)

14. ಸಾಂಕ್ರಾಮಿಕ ರೋಗ ಎಂದು ಟಿವಿ, ಮೀಡಿಯಾದಲ್ಲಿ ಆಗಾಗ ಭಯ ಪಡಿಸಿ ತಮ್ಮ ತಮ್ಮ ಲಸಿಕೆಯ ಜಾತ್ರೆ ಮಾಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

15. ಮನೆ ಮದ್ದಿಗೆ ಹೋಗುವ ಕಾಯಿಲೆಗೂ MRI ಸ್ಕ್ಯಾನ್, ಹಾಗೂ ನೂರಾರು ಟೆಸ್ಟು ಮಾಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

16. ಆರೋಗ್ಯ ಪರೀಕ್ಷೆಯಲ್ಲಿ ಹೆಚ್ಚು ಜನ ಸಿಗುತ್ತಿಲ್ಲ ಎಂದು, ಅಳತೆ ಪ್ರಮಾಣ ಹೆಚ್ಚು ಕಡಿಮೆ ಮಾಡಿ, ಹೆಚ್ಚು ಹೆಚ್ಚು ಜನರಿಗೆ ಟ್ರೀಟ್ಮೆಂಟ್ ಎನ್ನುವ ಬಲೆ ಬೀಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

17. ಹಿಂದೆ ಸತ್ತ ಹೆಣವನ್ನು ಎರೆಡು, ಮೂರು ದಿನ ಇಟ್ಟು ಎಲ್ಲರೂ ಬಂದಾಗ ಶವ ಸಂಸ್ಕಾರ ಮಾಡುತ್ತಿದ್ದರು, ಈಗ ವ್ಯಕ್ತಿ ಸತ್ತ ಕೂಡಲೇ ಅದಾಗುತ್ತೆ ಇದಾಗುತ್ತೆ ಎಂದು ಭಯ ಬೀಳಿಸಿ, ಕೆಮಿಕಲ್ ಮತ್ತು ಫ್ರೀಜರ್ ಬಳಸುವಂತೆ ಭಯ ಬೀಳಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

18. ಅರ್ಧ ಗಂಟೆ, ಗಂಟೆ ತಡಾ ಆಗಿದ್ದರೆ ಪ್ರಾಣ ಹೋಗುತ್ತದೆ ಎಂದು ಭಯ ಬೀಳಿಸಿ, ಅವಶ್ಯಕತೆ ಇಲ್ಲದ ಆಪರೇಷನ್ ಮಾಡಿ, ಮನೆ, ಹೊಲ, ಮತ್ತು ಮಾಂಗಲ್ಯ ಮಾರಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

19. ಒಂದು ದಿನಕ್ಕೆ 10 ಸಾವಿರ, 50 ಸಾವಿರದ 2, 3 ಇಂಜೆಕ್ಷನ್ ಮಾಡಿದರೆ ಮಾತ್ರ ವ್ಯಕ್ತಿ ಬದುಕುವರು ಎಂದು ಹೇಳಿ, ಯಮ ಧರ್ಮರಾಯ ರನ್ನು ಬೆಚ್ಚಿ ಬೀಳಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

20. ನೀವು ಕಂಪ್ಯೂಟರ್ ಮೊಬೈಲ್ ನೋಡಿ, ನಿಮ್ಮ ಕಣ್ಣಲ್ಲಿ ನೀರು ಬತ್ತಿ ಹೋಗಿದೆ ಎಂದು ಹೇಳಿ, ಕೃತಕ ಕಣ್ಣಿರು ಜನರಿಗೆ ಮಾರುವಷ್ಟು ಮೆಡಿಕಲ್ ಸೈನ್ಸ್  ಮುಂದುವರೆದಿದೆ.

21. ಹೊಸ ಕಾಯಿಲೆ, ಹೊಸ ವೈರಸ್ ಹೆಸರು ಹೇಳಿ, ಹೊಸ ದಂದೆ ಮಾಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

22. ನದಿ, ಪ್ರಕೃತಿ, ಗಿಡ ಮರದ ಸಂಪರ್ಕ ಬಿಸಿಡಿ, ಮನೆಯಲ್ಲಿ ಇದ್ದರೆ ಸುರಕ್ಷೆ ಎಂದು ಹೇಳಿ, ನಂತರ ನಿಮಗೆ ಡಿಪ್ರೆಶನ್ ಇದೆ ಎಂದು ಹೇಳಿ ಅದರ ಗುಳಿಗೆ ಮಾರುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

23. ತಾಲೂಕಿಗೆ ಎರಡು ಮೆಡಿಕಲ್ ಸ್ಟೋರ್ ಇದ್ದ ದೇಶದಲ್ಲಿ, ಪ್ರತಿ ಮನೆಯಲ್ಲಿ ಒಂದು ಚಿಕ್ಕ ಮೆಡಿಕಲ್ ಸ್ಟೋರ್ ಇಟ್ಟುಕೊಳ್ಳುವ ಹಾಗೆ ಮಾಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

24. ಮೆಡಿಕಲ್ ಇನ್ಸೂರೆನ್ಸ್ ಇಲ್ಲದೆ ಇದ್ದರೆ ಮನುಷ್ಯರು ಮನೆಯಿಂದ ಹೊರಗೆ ಹೋದರು ತುಂಬಾ ಕಷ್ಟ ಎಂದು ಭಯ ಪಡಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

25. ಸಾವಿರಾರು ವರ್ಷದ ಹಿಂದೆಯೇ ಆಗಾಗ ಉಪವಾಸ ಮಾಡುವುದು ಒಳ್ಳೆಯದು ಎಂದು ಅರಿತು ಮಾಡುತ್ತಿದ್ದ ನಮ್ಮ ದೇಶದ ಜನರಿಗೆ, ಅಸಿಡಿಟಿ, ಗ್ಯಾಸ್ ಎಂದು ಉಪವಾಸ ಬಿಡಿಸಿ. ಈಗ ಉಪವಾಸ ಒಳ್ಳೆಯದು ಎಂದ ಜಪಾನ್ ವಿಜ್ಞಾನಿಗೆ ನೊಬೆಲ್ ಪುರಸ್ಕಾರ ಕೊಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

26. ಬರಿಗಾಲಿನಲ್ಲಿ ನಡೆದು ದೈರ್ಯವಾಗಿ ಜೀವಿಸುತ್ತಿದ್ದ ಜನರಿಗೆ ಮೆಡಿಕಲ್ ಚಪ್ಪಲಿ ಕೊಟ್ಟು ಮನೆಯಲ್ಲಿಯೂ ಚಪ್ಪಲಿ ಹಾಕಿಸಿ, ಭಯ, ಆತಂಕ, ಅಜೀರ್ಣ ಸಮಸ್ಯೆಯಲ್ಲಿ ಜೀವಿಸುವಂತೆ ಮಾಡುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

27. ಆಸ್ಪತ್ರೆಯಲ್ಲಿ ಇರುವ ಪರಿಕರಗಳಿಗೆ ಕೆಲಸ ಕೊಡಲು, ಜನರನ್ನು ವಿಧವಿಧದ ಪರೀಕ್ಷೆಗೆ ಒಳಪಡಿಸುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

28. ಸಾಯುವ ವಯಕ್ತಿಯನ್ನು ಬದುಕಿಸುತ್ತೇವೆ ಎಂದು ಹೇಳಿ, ಬದುಕಿರುವ ವ್ಯಕ್ತಿಗಳನ್ನು ಸಾಲದ ಶೂಲಕ್ಕೆ ಏರಿಸಿ ಸಾಯಿಸುವ ಮಟ್ಟಕ್ಕೆ ಮೆಡಿಕಲ್ ಸೈನ್ಸ್ ಮುಂದುವರೆದಿದೆ.

29. ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದ ಜನರಿಗೆ, ಆದುನಿಕತೆ ಪಾಠ ಮಾಡಿ, ಈಗ ಹೊಟ್ಟೆಯ ಬೊಜ್ಜು ಕರಗಿಸಲು ನಾವು ಯಂತ್ರ, ಔಷಧಿ ಕಂಡುಹಿಡಿದ್ದೇವೆ ಎಂದು ಹೇಳುವಷ್ಟು ಮೆಡಿಕಲ್ ಸೈನ್ಸ್ ಮುಂದುವರೆದಿದೆ.

30. ವಯಸ್ಸಾದಾಗ ಮೂರು ಕಾಲಿನಲ್ಲಿ ನಡೆದು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ ಜನರಿಗೆ, ವೀಲ್ ಚೇರ್ ಕೊಟ್ಟು ಸಂಪೂರ್ಣ ಮೂಲೆ ಹಿಡಿಸುವ ಮಟ್ಟಕ್ಕೆ ಮೆಡಿಕಲ್ ಸೈನ್ಸ್ ಮುಂದುವರೆದಿದೆ.

31. ಒಳ್ಳೆಯ ಮನಸ್ಥಿತಿ, ಮಾನವತ್ವ ಇರುವ ಡಾಕ್ಟರ್ ಗಳನ್ನೂ ದಿಕ್ಕು ತಪ್ಪಿಸುವ ಅಥವಾ ದಮನ ಮಾಡುವ ಮಟ್ಟಕ್ಕೆ ಈಗಿನ ಮೆಡಿಕಲ್ ಸೈನ್ಸ್ ಮುಂದುವರೆದಿದೆ.

 

 

ನನ್ನ ಪ್ರೀತಿಯ ಸ್ನೇಹಿತರೆ, ಜಗತ್ತಿನಲ್ಲಿ ಇರುವ 97% ಕಾಯಿಲೆಗೆ ಮೂಲ, "ಭಯ" ಮತ್ತು "ಸಿಟ್ಟು". ಯಾರಲ್ಲಿ ಇವು ಜಾಸ್ತಿ ಇರುತ್ತವೋ, ಅವರಲ್ಲಿ ಕಾಯಿಲೆಗಳು ಜಾಸ್ತಿ ಆಗುವ ಸಾದ್ಯತೆ ಇದೆ. ಮೊದಲು ದೈರ್ಯವಾಗಿ, ಅನ್ಯೋನ್ಯವಾಗಿ ಜೀವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

 

ಅದರ ಜೊತೆಗೆ, ಕೆಳಗಿನ ಆರೋಗ್ಯ ಸೂತ್ರ ಪಾಲಿಸಿ: ನಿಮ್ಮ ವಯಸ್ಸು 20 ದಾಟಿದ್ದರೆ ದಿನವೂ ಇದನ್ನು ತಪ್ಪದೆ ಪಾಲನೆ ಮಾಡಿ. ಅದು ಈಗಿನ ಕಲುಷಿತ ಮಣ್ಣು, ನೀರು, ಗಾಳಿ ಮತ್ತು ಆಹಾರದ ಪರಿಣಾಮ ದಿಂದ ನಿಮ್ಮನ್ನು ರಕ್ಷಿಸಿ ಕೊಳ್ಳಲು ಸಹಾಯ ಮಾಡುತ್ತದೆ.

 

1. ದಿನವೂ ಒಂದು ಗಂಟೆ ವಾಕ್ ಮಾಡಿ.

2. ದಿನವೂ ಒಂದು ಗಂಟೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ.

3. ದಿನವೂ ಕನಿಷ್ಠ ಅರ್ಥ ಗಂಟೆ ಸೂರ್ಯ ನಮಸ್ಕಾರ, ಯೋಗಾಸನ ಅಥವಾ ಎಕ್ಸರ್ಸೈಜ್ ಮಾಡಿ.

4. ದಿನವೂ ಕನಿಷ್ಠ ಅರ್ಧ ಗಂಟೆ ಧ್ಯಾನ ಅಥವಾ ದೇವರ ನಾಮ ಜಪ ಮಾಡಿ.

(ಧ್ಯಾನ ವಿಡಿಯೋ ನೋಡಿ ಧ್ಯಾನ ಮಾಡಲು ನನ್ನ ಯು ಟ್ಯೂಬ್ ಚಾನೆಲ್ ಗೆ ಭೇಟಿ ಕೊಡಲು  : @gcvkannada ಎಂದು ಹುಡುಕಿ)

5. ಹಬ್ಬದ ದಿನ ಹೊರತು ಪಡಿಸಿ ಬೇರೆಯ ದಿನ ಸಿಹಿ ತಿನ್ನಬೇಡಿ. ಹಣ್ಣು ತಿನ್ನಿ ಜ್ಯೂಸ್ ಬೇಡ.

6. ಮೊಬೈಲ್ ಮತ್ತು ಟಿವಿ ಯಲ್ಲಿ ಕೆಟ್ಟ ವಿಷಯ, ಕೆಟ್ಟ ವಿಚಾರ ಬಂದರೆ ಅದನ್ನು ಓದಬೇಡಿ, ಡಿಲೀಟ್ ಮಾಡಿ.

7. ಮೊಬೈಲ್ ಬಳಕೆ ಕಡಿಮೆಮಾಡಿ, ದೈಹಿಕ ಶ್ರಮದ ಕೆಲಸ ಜಾಸ್ತಿ ಮಾಡಿ.

 

ಸೂಚನೆ:

1. ನೀವು ಆಹಾರ ಸೇವಿಸದೇ ಉಪವಾಸ ಇದ್ದ ದಿನ ಮೇಲಿನ 3 ಸೂತ್ರದ ಪಾಲನೆಯ ಅವಶ್ಯಕತೆ ಇಲ್ಲ. ಆದರೆ 4 ನೆ ಸೂತ್ರ ಪಾಲಿಸಿ, ಉಪವಾಸ ದೇಹಕ್ಕೆ ಮನಸ್ಸಿಗೆ ಅಲ್ಲ.

2. ನಿಮ್ಮಲ್ಲಿ ಯಾವುದೇ ಆತಂಕ, ಚಿಂತೆ, ಭಯ, ಅಸೂಯೆ, ಸಿಟ್ಟು ಮತ್ತು ದ್ವೇಷದ ಭಾವನೆ ಇಲ್ಲದೇ ಇದ್ದರೆ. ಮೇಲಿನ 1 ರಿಂದ 4 ನೆಯ ಆರೋಗ್ಯ ಸೂತ್ರದ ಪಾಲನೆಯ ಅವಶ್ಯಕತೆ ನಿಮಗೆ ಇಲ್ಲ.

 

 

ನಿಮಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇದ್ದರೆ, ಎರಡು ಆರೋಗ್ಯದ ಪುಸ್ತಕ ಓದಿ...👇

 

You can heal your life.

By - Louise Hay

 

You are the Placebo.

By - Dr. Joe Dispenza

 

ನಿಮಗೆ ಪುಸ್ತಕ ಕೊಂಡು ಓದಲು ಆಗದೆ ಇದ್ದರೂ ಚಿಂತಿಸ ಬೇಡಿ, ಮೇಲಿನ 8 ಆರೋಗ್ಯ ಸೂತ್ರ ಪಾಲಿಸಿ. ದಿನವೂ ತಪ್ಪದೇ ಧ್ಯಾನದ ಅಭ್ಯಾಸ ಮಾಡಿ, ಧ್ಯಾನ ವಿಶ್ವದ ಉನ್ನತ ಜ್ಞಾನವನ್ನು ನಿಮಗೆ ನಿಮ್ಮ ಅಂತಃಪ್ರಜ್ಞೆಯ ಮೂಲಕ ತಂದು ಕೊಡುತ್ತದೆ, ಅಷ್ಟೆ ಅಲ್ಲ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಲು ಅದು ತುಂಬಾ ಸಹಾಯ ಮಾಡುತ್ತದೆ.

 

ಮಕ್ಕಳನ್ನು ಆಗಾಗ ದನಗಳ ಕೊಟ್ಟಿಗೆ, ಕುರಿ, ಮೇಕೆಯ ಕೊಟ್ಟಿಗೆಯ ಬಳಿ ಆಟ ಆಡಿಸಿದರು, ಅಲ್ಲಿರುವ ದೂಳಿನ ಕಣಗಳು ಜೊತೆ ಟಿ-ಸೆಲ್ಸ್  (T-regs) ಗಳನ್ನು ಅವರ ದೇಹಕ್ಕೆ ಪಡೆದು ಅಲರ್ಜಿ, ಆಟೋ ಇಮ್ಯುನಿಟಿ, ಕ್ಯಾನ್ಸರ್ ಇಲ್ಲದೆ ಜೀವಿಸುವರು.

 

ಮಣ್ಣಿನ ನೆಲದ ಮೇಲೆ, ಬರಿಗಾಲಿನಲ್ಲಿ ದಿನವೂ ಅರ್ಧ ಗಂಟೆ ನಡೆಯುವ ಅಭ್ಯಾಸ ಇಟ್ಟುಕೊಳ್ಳಿ, ಅದು ನಿಮ್ಮ ಭಯ ದೂರ ಮಾಡಿ, ನಿಮ್ಮ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತವೆ. ಮುಕ್ಕಾಲು ಪಾಲು ಖಾಯಿಲೆಗಳಿಗೆ ಮೂಲ ಕಾರಣ ಅಜೀರ್ಣ ಸಮಸ್ಯೆ.

 

ಸೂಚನೆ: ಮೇಲಿನ ವಿಚಾರಗಳು ನನಗೆ ಅಧ್ಯಯನಗಳ ಮೂಲಕ ತಿಳಿದ ಸತ್ಯಗಳು, ಮತ್ತು ಸ್ನೇಹಿತರು, ವೈದ್ಯರು, ವಿಜ್ಞಾನಿಗಳು ಹೇಳಿದ ಮಾಹಿತಿಯ ಮೇಲೆ, ಇಲ್ಲಿ ಕ್ರೂಡಿಕರಿಸಲಾಗಿದೆ. ಇದು ನಿಮ್ಮ ಅನುಭವಕ್ಕೂ ನಿಜ ಎನ್ನಿಸಿದರೆ, ನಿಮ್ಮ ಆಪ್ತರ ಬಳಿ ಹಂಚಿಕೊಳ್ಳಿ.

 

The cure for 97% of diseases mirrored from Dr. Bergman...👇

 

https://youtu.be/Xz6t-fACaTU?si=trV1QFZYE0E6Z67S

 

 

ಧನ್ಯವಾದಗಳು

ಇಂತಿ ನಿಮ್ಮ

ಜಿ ಸಿ ವಿ 🙏💐💮
Visit My YouTube channel: @gcvkannada

Monday, September 23, 2024

ಎಲ್ಲರನ್ನೂ ಕಂಡೆ, ನನ್ನನ್ನು ಕಂಡೆ!

 

ಎಲ್ಲರನ್ನೂ ಕಂಡೆ, ನನ್ನನ್ನು ಕಂಡೆ!


ತುಂಬಾ ಜನ ಶ್ರೀಮಂತರ ಕಂಡೆ.
ತುಂಬಾ ಜನ ಬಡವರನ್ನು ಕಂಡೆ.
ತುಂಬಾ ಜನ ವಿಧ್ಯಾವಂತರ ಕಂಡೆ.
ತುಂಬಾ ಜನ ಅವಿಧ್ಯಾವಂತರ ಕಂಡೆ.
ತುಂಬಾ ಜನ ಮೇಧಾವಿಗಳ ಕಂಡೆ.
ತುಂಬಾ ಜನ ಪ್ರಭಾವಿಗಳ ಕಂಡೆ.
ತುಂಬಾ ಜನ ಯುವಕರನ್ನು ಕಂಡೆ.
ತುಂಬಾ ಜನ ವಯಸ್ಕರನ್ನು ಕಂಡೆ.
ತುಂಬಾ ಜನ ಪಂಡಿತರನ್ನು ಕಂಡೆ.
ತುಂಬಾ ಜನ ಶಿಕ್ಷಕರನ್ನು ಕಂಡೆ.
ತುಂಬಾ ಜನ ಸುಳ್ಳುಗಾರರ  ಕಂಡೆ.
ತುಂಬಾ ಜನ ಸತ್ಯವಂತರ ಕಂಡೆ.
ತುಂಬಾ ಜನ ವೈದ್ಯರನ್ನು ಕಂಡೆ.
ತುಂಬಾ ಜನ ಇಂಜಿನಿಯರ್ ಗಳ ಕಂಡೆ.
ತುಂಬಾ ಜನ ಲಾಯರ್ ಗಳ ಕಂಡೆ.
ತುಂಬಾ ಜನ ಮಂತ್ರಿಗಳ ಕಂಡೆ.
ತುಂಬಾ ಜನ ಪತ್ರಕರ್ತರ ಕಂಡೆ.
ತುಂಬಾ ಜನ ಜನಸೇವಕರ ಕಂಡೆ.
ತುಂಬಾ ಜನ ರೈತರನ್ನು ಕಂಡೆ.
ತುಂಬಾ ಜನ ಪೊಲೀಸರನ್ನು ಕಂಡೆ.
ವಿವಿಧ ಮಠಗಳ ಜನರನ್ನು ಕಂಡೆ.
ವಿವಿಧ ಮತಗಳ ಜನರನ್ನು ಕಂಡೆ.
ವಿವಿಧ ದೇಶದ ಜನರನ್ನು ಕಂಡೆ.
ವಿವಿಧ ಭಾಷೆಯ ಜನರನ್ನು ಕಂಡೆ.
ಸ್ವಲ್ಪ ಜನ ಸ್ವಾಮೀಜಿಗಳನೂ ಕಂಡೆ.
ಸ್ವಲ್ಪ ಜನ ಸಾಧುಗಳನೂ ಕಂಡೆ.
ನನ್ನೊಳಗಿನ ಈಗಿನ ನನ್ನನು ಕಂಡೆ.
ಈ ಎಲ್ಲರಲ್ಲಿಯೂ ಸ್ವತಂತ್ರದ ಜೀವನವಿಲ್ಲ.
ಈ ಎಲ್ಲರಲ್ಲಿಯೂ ಆನಂದದ ಭಾವನೆಯಿಲ್ಲ.

ತುಂಬಾ ಜನ ಮಹನೀಯರನ್ನು ಹತ್ತಿರದಿಂದ ಗಮನಿಸಿದ್ದೇನೆ, ಎಷ್ಟೋ ಮಹನೀಯರನ್ನು ಮಾತನಾಡಿಸಿ ಅವರ ಜೀವನದ ಬಗ್ಗೆ ಅರಿತಿದ್ದೇನೆ. ಆಶ್ಚರ್ಯ ಎಂದರೆ, ಎಲ್ಲರೂ ಮಹಾ ಆನಂದದಲ್ಲಿ ಜೀವನ ನಡೆಸುವ ಹಾಗೆ ನಾಟಕ ಆಡುತ್ತಿದ್ದಾರೆ. ಆದರೆ, ಅವರ ಅಂತರಂಗಕ್ಕೆ ಗೊತ್ತಿದೆ ಅವರ ಉಳುಕು, ಕೊಳಕು, ಹತಾಶೆ, ದುಃಖ ಮತ್ತು ನೋವು. ವಾಸ್ತವದಲ್ಲಿ ನಾನು ಕಂಡ ಮಹನೀಯರು ದುಃಖ, ನೋವಿನಲ್ಲಿ ಇದ್ದರೂ ಹೊರಗೆ ಹೇಳಿಕೊಳ್ಳಲು ಆಗದೆ, ಒಳಗೆ ನುಂಗಿ ಕೊಳ್ಳಲು ಆಗದೆ, ಹಾಗೆಯೇ ಜೀವಿಸುತ್ತಿದ್ದಾರೆ. ಕೆಲವರನ್ನು ಹೊರತು ಪಡಿಸಿ, ಎಲ್ಲರ ಕಥೆಯೂ ಅಷ್ಟೇ. ಎಷ್ಟು ದಿನಗಳ ಕಾಲ ಈ ನಾಟಕ, ಹೀಗೆ ಮರೆಮಾಚಿ ಹೆಚ್ಚುಕಾಲ ಬದುಕಿದರು, ನೀವು ಇನ್ನೂ ಹೆಚ್ಚು ನೋವು ಮತ್ತು ದುಃಖ ಅನುಭವಿಸುವಿರೇ ಹೊರತು, ಅದಕ್ಕಿಂತಲೂ ಮಿಗಿಲಾದದ್ದು ಏನು ಸಿಗುವುದಿಲ್ಲ.

ಯಾರೊಬ್ಬರ ಮಾತು ಅಥವಾ ಹಾವಭಾವ ನಿಮ್ಮನ್ನು ಕೆರಳಿಸುತ್ತದೆ ಎಂದರೆ ನೀವು ಅಹಂಕಾರದ ಅಧೀನದಲ್ಲಿ ಇದ್ದೀರಿ ಎಂದು ಅರ್ಥ. ಅಹಂಕಾರ ಇದ್ದವರಲ್ಲಿ ಸ್ವಾತಂತ್ರ್ಯ ಮತ್ತು ಆನಂದದ ಜೀವನ ಇರಲು ಸಾದ್ಯವಿಲ್ಲ.

ಯಾರೊಬ್ಬರ ಮೇಲಿನ ಪ್ರೀತಿ ನಿಮ್ಮನ್ನು ಸುಳ್ಳು, ಅಸತ್ಯ ಆಡುವಂತೆ ಅಥವಾ ಇತರರನ್ನು ದ್ವೇಷ ಮಾಡುವಂತೆ ಮಾಡಿದೆ ಎಂದರೆ, ನೀವು ಮಮಕಾರದ ಅಧೀನದಲ್ಲಿ ಇದ್ದೀರಿ ಎಂದು ಅರ್ಥ. ಮಮಕಾರದಲ್ಲಿ ಇದ್ದವರು ಸಹ ಸ್ವಾತಂತ್ರ್ಯ ಮತ್ತು ಆನಂದದಲ್ಲಿ ಜೀವಿಸಲು ಸಾದ್ಯವಿಲ್ಲ.

ನಿಜ, ದ್ವೇಷ, ಅಸೂಯೆ, ಸಿಟ್ಟು, ಸಹಜವಾಗಿ ಆಯಾ ಸಂದರ್ಭಕ್ಕೆ ಬರಬೇಕು. ಆದರೆ, ಅದೇ ಜೀವನ ಆಗಬಾರದು. ಊಟಕ್ಕೆ ಉಪ್ಪಿನಕಾಯಿ ಬೇಕು, ಆದರೆ ಉಪ್ಪಿನ ಕಾಯಿಯೇ ಊಟ ಆಗಬಾರದು. ಇದನ್ನು ನಾನು ಇಲ್ಲಿ ಒತ್ತಿ ಹೇಳಲು ಕಾರಣ; ನಾನು ಈ ದ್ವೇಷ, ಅಸೂಯೆ, ಸಿಟ್ಟಿನಿಂದ ನನ್ನ ಆರೋಗ್ಯ ತುಂಬಾ ಹಾಳು ಮಾಡಿಕೊಂಡು, ನಂತರ ಧ್ಯಾನ, ಸೂರ್ಯ ನಮಸ್ಕಾರ, ವಾಕ್,  ಯೋಗದ ಮೂಲಕ ಚೇತರಿಸಿ ಕೊಂಡಿದ್ದೇನೆ. ನನ್ನ ರೀತಿಯ ತೊಂದರೆ ಇತರರಿಗೆ ಬಾರದಿರಲಿ ಎಂದು ಇಲ್ಲಿ ಹೇಳುತ್ತಿದ್ದೇನೆ.

ಸಂತ ಕಬೀರರು ಹೀಗೆ ಹೇಳುತ್ತಾರೆ...

1.
ತೀರ್ಥಯಾತ್ರೆಗೆ ಫಲ ಒಂದು.
ಸಾಧು ಸಂಘಕೆ ನಾಲ್ಕು.
ಸದ್ಗುರು ಸಂಘಕೆ ಅನೇಕ ಫಲ.


"ಗುರುವಿನ  ಅವಶ್ಯಕತೆ ಮತ್ತು ಅದರ ಲಾಭದ ಬಗ್ಗೆ".

2.
ಕೆಡುಕರನು ನಾ ಹುಡುಕುತ ಹೋರಟೆ
ಕೆಡುಕರಾರು ಸಿಗಲಿಲ್ಲ.
ನನ್ನಯ ಮನವನು ನಾನೆ ನೋಡೆ.
ನನಗಿಂತ ಕೆಡುಕರಿಲ್ಲ.


"ಅನ್ಯರ ವಿಮರ್ಶೆ ಬಿಟ್ಟು, ಆತ್ಮ ವಿಮರ್ಶೆ ಮಾಡುವ ಬಗ್ಗೆ"

3.
ರಾತ್ರಿ ಕಳೆಯಿತು ನಿದ್ದೆಯಲೀ
ದಿನ ಕಳೆಯಿತು ಊಟದಲಿ
ರತ್ನದಂತ ಈ ನರ ಜನ್ಮ
ಮೂರೂ ಕಾಸಿಗೆ ಹೋಯಿತು.


"84 ಲಕ್ಷ ಜೀವರಾಶಿಯಾಗಿ ಹುಟ್ಟಿದ ಮೇಲೆ ಸಿಕ್ಕ ಅಪರೂಪದ ಈ ಮನುಷ್ಯ ಜನ್ಮವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಬಗ್ಗೆ"

4.
ಗ್ರಂಥ ಗ್ರಂಥ ಗಳನ್ನು ಓಡಿದವನು
ಪಂಡಿತನಲ್ಲ ಖಂಡಿತ
ಪ್ರೇಮವೆಂಬ ಎರಡಕ್ಷರವನು
ಅರಿತವನೆ ಪಂಡಿತ.


"ಪ್ರೀತಿಯ ಶಕ್ತಿ ಮತ್ತು ಮಹತ್ವದ ಬಗ್ಗೆ"

ಋಷಿ, ಮುನಿ, ಬುದ್ಧ, ಮಹಾವೀರರ ಕೆಲವು ಸೂತ್ರಗಳ ಪಾಲನೆ, ನನ್ನಲ್ಲಿ ಅಲ್ಪ ಮಟ್ಟಿಗಿನ ಸ್ವಾತಂತ್ರ್ಯ, ಆನಂದ ಮತ್ತು ಶಾಂತಿಯನ್ನು ತಂದಿದೆ. ನಿಜವಲ್ಲದ ತೋರಿಕೆ, ಶಾಶ್ವತವಲ್ಲದ ಶ್ರೀಮಂತಿಕೆ, ಬಿಟ್ಟು ಕೇವಲ ಕೆಲವು ದಿನ ಆಧ್ಯಾತ್ಮದ ಸಾಧನೆ ಮಾಡಿನೋಡಿ. ಆದ್ಯಾತ್ಮ ಎನ್ನುವ ಹಣ್ಣಿನ ಸಿಪ್ಪೆಯೆ ಅತ್ಯಂತ ರುಚಿಯಾಗಿದೆ, ಅದರ ಹಣ್ಣು ಹೇಗಿರಬಹುದು ನೀವೇ ಊಹಿಸಿ!

ಧ್ಯಾನ, ನಾಮ ಜಪ, ಯಜ್ಞ, ಹೋಮ, ಪೂಜೆ, ಪ್ರಾರ್ಥನೆ, ನಿಮಗೆ ಕೆಲವೇ ದಿನದಲ್ಲಿ ಆ ಆದ್ಯಾತ್ಮ ಎನ್ನುವ ಹಣ್ಣಿನ ಸಿಪ್ಪೆಯೆ ರುಚಿಯನ್ನು ತೋರಿಸಬಲ್ಲವು. ನಿಮ್ಮಲ್ಲಿ ಇನ್ನೂ ಸ್ವಲ್ಪ ಶ್ರದ್ದೆ, ಭಕ್ತಿ ಮತ್ತು ಸಾಧನೆ ಇದ್ದರೆ, ಆ ಹಣ್ಣಿನ ರುಚಿಯನ್ನು ಸಹ ತೋರಿಸಬಲ್ಲವು.

ನೆನಪಿರಲಿ, ಎಷ್ಟುಕಾಲ ಬಾಳುತ್ತೇವೆ ಎನ್ನುವುದು ಮುಖ್ಯವಲ್ಲ, ಹೇಗೆ ಬಾಳುತ್ತೇವೆ ಅಥವಾ ಹೇಗೆ ಬಾಳಿದ್ದೆವು ಎನ್ನುವುದು ಮುಖ್ಯ.

ಸೂಚನೆ: ಹಿಂದಿನ ಕಾಲದಲ್ಲಿ ಋಷಿಗಳು, ರಾಜರು, ಇತರ ಸಾಮಾನ್ಯ ಜನರು ಸಾಮಾಜಿಕ ಸಂಸಾರದಲ್ಲಿ ಇದ್ದರು. ಆದರೂ ಅವರಲ್ಲಿ ಬಹಳಷ್ಟು ಜನ ಆ ನಿಜವಾದ ಸ್ವಾತಂತ್ರ್ಯ ಮತ್ತು ನಿಜವಾದ ಆನಂದದ ಜೀವನ ನಡೆಸುತ್ತಿದ್ದರು.

ದಿನವೂ ಸ್ವಲ್ಪ ಕಾಲ ಆಧ್ಯಾತ್ಮದ ಸಾಧನೆ ಮಾಡುತ್ತಾ ಮತ್ತು ನಿಮ್ಮ ದೈಹಿಕ ಆರೋಗ್ಯ ಕಡೆ ಗಮನ ಕೊಡುತ್ತಾ ಜೀವಿಸಿ.

ನಿಮಗೆ ಆ ಆಧ್ಯಾತ್ಮದ ರುಚಿಯಾದ ಹಣ್ಣಿನ ಸಲಾಡ್ ತಿನ್ನುವ ಇಚ್ಚೆ ಇದ್ದರೆ? ನಿಮಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇದ್ದರೆ ಕೆಳಗೆ ಹೇಳಿದ ಪುಸ್ತಕಗಳನ್ನು ಓದಿ...👇

The Power of Now
[A Guide To Spiritual Enlightenment]
By: Eckhart Tolle

Awareness
[The key to living in balance]
By: Osho

Courage
[The Joy of Living Dangerously]
By: Osho

Change your thoughts Change your life
By: Dr. Wayne W. Dyer.

Sri Ramana Gita
Source: Ramana Maharshi

ನಿಮಗೆ ಪುಸ್ತಕ ಕೊಂಡು ಓದಲು ಆಗದೆ ಇದ್ದರೂ ಚಿಂತಿಸ ಬೇಡಿ, ದಿನವೂ ಧ್ಯಾನದ ಅಭ್ಯಾಸ ಮಾಡಿ, ಧ್ಯಾನ ಆ ವಿಶ್ವದ ಉನ್ನತ ಜ್ಞಾನವನ್ನು ನಿಮಗೆ ನಿಮ್ಮ ಅಂತಃಪ್ರಜ್ಞೆಯ ಮೂಲಕ ತಂದು ಕೊಡುತ್ತದೆ.

ಧ್ಯಾನ ವಿಶ್ವದ ಡೇಟಾಬೇಸ್ ಅನ್ನು ನಿಮ್ಮ ಮೆದುಳಿಗೆ ಕನೆಕ್ಟ್ ಮಾಡುವ ಸಾಧನ.

ಸಂತ ಕಬೀರ ವಾಣಿಗಳನ್ನು ಕೇಳಲು...👇

https://youtu.be/POAMEh7rgmY?si=B2m7p9hP8rH-FBZr


ಧನ್ಯವಾದಗಳು

ಇಂತಿ ನಿಮ್ಮ

ಜಿ ಸಿ ವಿ 🙏💐💮
Visit My YouTube channel: @gcvkannada

Sunday, December 24, 2023

ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ - Tiruvannamalai Giri Pradakshina


ತಿರುವಣ್ಣಾಮಲೈ ನಲ್ಲಿ ಇರುವ ಅಗ್ನಿ ಲಿಂಗದ ದರ್ಶನ ಮತ್ತು ಗಿರಿ ಪ್ರದಕ್ಷಿಣೆ


ತಿರುವಣ್ಣಾಮಲೈ ನಲ್ಲಿ ಇರುವ ಅಗ್ನಿ ಲಿಂಗದ ದರ್ಶನ ಮತ್ತು ಗಿರಿ ಪ್ರದಕ್ಷಿಣೆ ನಿಮ್ಮ ಜನ್ಮ ಜನ್ಮಾಂತರದ ಕರ್ಮಗಳನ್ನು ಸುಡಲು ಸಹಾಯ ಮಾಡುತ್ತದೆ. ಇದನ್ನು ನಾನು ಪ್ರಾಯೋಗಿಕವಾಗಿ ಮಾಡಿ, ಅನುಭವಿಸಿ ಹೇಳುತ್ತಿದ್ದೇನೆ. ನಾನು ಓದಿರುವುದು BSc, MCA ಹಾಗು ಪ್ರಾಧ್ಯಾಪನಾಗಿ ಮತ್ತು ಸಾಫ್ಟ್ ವೆರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ ಮತ್ತು ವಿದೇಶಗಳಿಗೂ ಸಹ ಹೋಗಿ ಬಂದಿದ್ದೇನೆ. ನಾನು ಯಾವುದನ್ನಾದರೂ ಪರೀಕ್ಷೆ ಮಾಡಿ ನಂಬುವ ಮನುಷ್ಯ, ನಾನು ಪರೀಕ್ಷೆ ಮಾಡಿ ಅದರಿಂದ ಫಲ ನೀಡಿದ ಮೇಲೆಯೇ, ನಾನು ಕಂಡ ಸತ್ಯ ಮತ್ತು ಅದನ್ನು ಪಡೆಯುವ ಮಾರ್ಗದ ಬಗ್ಗೆ ಹೇಳುತ್ತಿದ್ದೇನೆ. 

ಸಾದ್ಯವಾದರೆ, ನೀವು ಪ್ರಯತ್ನಿಸಿ, ತಿರುವಣ್ಣಾಮಲೈ ನಲ್ಲಿ ಇರುವ ಅಗ್ನಿ ಲಿಂಗದ ದರ್ಶನ ಮತ್ತು ಗಿರಿ ಪ್ರದಕ್ಷಿಣೆ ನಿಮ್ಮ ಜೀವದಲ್ಲಿ ಮಹಾ ಬದಲಾವಣೆ ತರಬಲ್ಲದು. 

ತಿರುವಣ್ಣಾಮಲೈ ಗಿರಿ ಪ್ರದಕ್ಷಿಣ - Tiruvannamalai Giri Pradakshina

Sunday, November 19, 2023

ದಿನಕ್ಕೆ ಒಂದು ಊಟ ಮಾಡುವುದರಿಂದ ಆಗುವ 23 ಆರೋಗ್ಯ ಲಾಭಗಳು!

 

ದಿನಕ್ಕೆ ಒಂದು ಊಟ ಮಾಡುವುದರಿಂದ ಆಗುವ  23 ಆರೋಗ್ಯ ಲಾಭಗಳು!



ಸೂಚನೆ:

1. ನೀವು ಯಾವುದೇ ಆಹಾರ ಪದಾರ್ಥದದಲ್ಲಿ ಅಥವಾ ಆಹಾರ ಸೇವನೆ ಮಾಡುವ ಸಮಯದಲ್ಲಿ ಬದಲಾವಣೆ ಮಾಡುವಾಗ, ಒಮ್ಮೆಗೆ ಮಾಡುವುದು ಅಷ್ಟು ಒಳ್ಳೆಯದಲ್ಲ, ಅದನ್ನು ನಿಧಾನವಾಗಿ, ಹಂತ ಹಂತವಾಗಿ ಬದಲಾವಣೆ ಮಾಡಬೇಕು, ಒಮ್ಮೆಗೆ ಬದಲಾವಣೆ ಮಾಡಿದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ನಿಮಗೆ ಅದರಿಂದ ನಷ್ಟವೇ ಹೆಚ್ಚು.

2. ನೀವು ವ್ಯಾಯಾಮ ಅಥವಾ ದೈಹಿಕ ಕೆಲಸ ಮಾಡಲು ಇಚ್ಛಿಸಿದರೆ, ಒಮ್ಮೆಗೆ ನಿಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಬೇಡಿ, ಒಮ್ಮೆಗೆ ಹೆಚ್ಚು ವ್ಯಾಯಾಮ ಅಥವಾ ದೈಹಿಕ ಶ್ರಮದ ಕೆಲಸ ಮಾಡುವುದು ಅಷ್ಟು ಒಳ್ಳೆಯದಲ್ಲ, ಅದನ್ನು ನಿಧಾನವಾಗಿ, ಹಂತ ಹಂತವಾಗಿ ಅಭ್ಯಾಸ ಮಾಡಬೇಕು, ಒಮ್ಮೆಗೆ ಹೆಚ್ಚು ಅಭ್ಯಾಸ ಮಾಡಿದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ನಿಮಗೆ ಅದರಿಂದ ನಷ್ಟವೇ ಹೆಚ್ಚು.

3. ಧ್ಯಾನ, ಜಪ ಅಥವಾ ಮಂತ್ರ ಪಠಣ ಮಾಡುವುದು ಸಹ ಒಮ್ಮೆಗೆ ಹೆಚ್ಚು ಮಾಡದೆ, ನಿದಾನವಾಗಿ ಹಂತ ಹಂತವಾಗಿ ಅಭ್ಯಾಸವನ್ನು ಹೆಚ್ಚು  ಮಾಡಬೇಕು. ಆಗ, ಧ್ಯಾನ, ಜಪ ಮತ್ತು ಮಾತ್ರ ಪಠಣ ಸಿದ್ಧಿಸುತ್ತವೆ.

1. ಇದು ಹಣವನ್ನು ಉಳಿಸುತ್ತದೆ. (ಧಾನ್ಯಗಳು, ತರಕಾರಿಗಳು ಮತ್ತು ಅನಿಲ/ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ)

2. ಸಮಯವನ್ನು ಉಳಿಸುತ್ತದೆ. (ತಿನ್ನುವ/ಅಡುಗೆ ಮಾಡುವ/ತೊಳೆಯುವ ಸಮಯವನ್ನು ಉಳಿಸುತ್ತದೆ)

3. ಜೀರ್ಣಕ್ರಿಯೆಯ ಕಾರ್ಯವಿಧಾನವು ಸುಧಾರಿಸುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ. (ಇದು ಪಿತ್ತಕೋಶ (ಗಾಲ್ ಬ್ಲಾಡರ್), ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್), ಹೊಟ್ಟೆ ಮತ್ತು ಕರುಳಿಗೆ ವಿಶ್ರಾಂತಿ ನೀಡುತ್ತದೆ)

4. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

5. ಆಟೋಫ್ಯಾಜಿ ಸಿಸ್ಟಮ್ ಸ್ವಿಚ್ ಆನ್ ಮಾಡುತ್ತದೆ. (ಇದು ಜಂಕ್ ಪ್ರೋಟೀನ್, ಟ್ಯೂಮರ್, ಕ್ಯಾನ್ಸರ್ ಕೋಶಗಳನ್ನು ರಿಸೈಕಲ್ ಮಾಡುತ್ತದೆ ಮತ್ತು ಹೊಸ ಅಂಗಾಂಶಗಳನ್ನು ಸೃಷ್ಟಿಸುತ್ತದೆ. ಹಾಗು ವೈರಸ್, ಶಿಲೀಂಧ್ರ, ಅಚ್ಚು, ಕ್ಯಾಂಡಿಡಾ ಮಾದರಿಯ ಸೂಕ್ಷ್ಮಜೀವಿಗಳನ್ನು ರಿಸೈಕಲ್ ಮಾಡುತ್ತದೆ, ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ)

6. ಆಯುಷ್ಯ ಹೆಚ್ಚಿಸುತ್ತದೆ. (ಇದು ವಯಸ್ಸಾಗುವಿಕೆ ಕ್ರಿಯೆಯನ್ನು ನಿಧಾನವಾಗಿಸುತ್ತದೆ).

7. ಹಸಿವು ಅಭ್ಯಾಸದಿಂದ ಸಮಸ್ಯೆಯಾಗುವುದಿಲ್ಲ. ( ಅಭ್ಯಾಸ ಆರಂಭಿಸಿದ ಕೆಲವು ದಿನಗಳ ನಂತರ)

8. ಬಾಯಿ ಚಪಲ ಕಡಿಮೆಯಾಗುತ್ತದೆ (ಇದು ಸಕ್ಕರೆ, ಕಾರ್ಬೋಹೈಡ್ರೇಟ್ಗಳು, ಕಾಫಿ, ಚಾಕೊಲೇಟ್ ಚಪಲ ನಿಲ್ಲಿಸುತ್ತದೆ.)

9. ಚರ್ಮದ ಆರೋಗ್ಯ ಮತ್ತು ಗುಣಮಟ್ಟ ಸುಧಾರಿಸುತ್ತದೆ. (ಚರ್ಮದ ಆರೋಗ್ಯ ಸುಧಾರಿಸಿ ಹೊಸ ಹೊಳಪನ್ನು ಕೊಡುತ್ತದೆ)

10. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. (ಇದು ಆಟೋಫ್ಯಾಜಿ ಯಾಂತ್ರಿಕತೆಯಿಂದ ಬರುವ ಲಾಭ)

11. ಮನಸ್ಥಿತಿ ಮತ್ತು ಮೂಡ್ ಅನ್ನು ಸುಧಾರಿಸುತ್ತದೆ. (ಮೂಡ್ ​​ಡಿಸಾರ್ಡರ್ ಗೆ ಹೆಚ್ಚಿದ ರಕ್ತದ ಸಕ್ಕರೆಯ ಪ್ರಮಾಣವೇ ಕಾರಣ)

12. ಮೆದುಳಿನ ಕಾರ್ಯವು ಸುಧಾರಿಸುತ್ತದೆ (ಇದು ಬುದ್ಧಿಮಾಂದ್ಯತೆ, ಆಲ್ಝೈಮರ್ಸ್, ಪಾರ್ಕಿನ್ಸನ್, ಗಮನ ಅಸ್ವಸ್ಥತೆ ಮತ್ತು ಮುಂತಾದವುಗಳಿಂದ ಪಾರಾಗಲು ಸಹಾಯ ಮಾಡುತ್ತದೆ)

13. ಉರಿಯೂತವನ್ನು ಕಡಿಮೆ ಮಾಡುತ್ತದೆ (ಅಲರ್ಜಿ, ಮಧುಮೇಹ, ಕೊಬ್ಬಿನ ಯಕೃತ್ತು (ಫ್ಯಾಟಿ ಲಿವರ್), ಹೃದ್ರೋಗ, ಸಂಧಿವಾತ (ಆರ್ಥರೈಟಿಸ್), ಕರುಳಿನ ಕಾಯಿಲೆ, ಸ್ಥೂಲಕಾಯತೆ, ಇವುಗಳನ್ನು ಕಡಿಮೆ ಮಾಡಿ, ವಾಸಿಮಾಡುತ್ತದೆ)

14. ರಕ್ತದೊತ್ತಡವನ್ನು ನಾರ್ಮಲ್ ಮಾಡುತ್ತದೆ. (ಇದರಿಂದ ಇನ್ಸುಲಿನ್ ಮಟ್ಟವು ಕಡಿಮೆಯಾಗುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವು ಹಿಮ್ಮುಖವಾಗುತ್ತದೆ. ಇದು ಕಡಿಮೆ / ಅಧಿಕ ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ.)

15. ಹೃದ್ರೋಗವನ್ನು ರಿವರ್ಸ್ ಮಾಡುತ್ತದೆ. (ಅಪಧಮನಿಗಳ ಅರೋಗ್ಯ ಸುಧಾರಣೆ ಮಾಡುತ್ತದೆ)

16. ಬುದ್ಧಿಮಾಂದ್ಯತೆಯಲ್ಲಿ ಸುಧಾರಣೆ ತರುತ್ತದೆ.

17. ಮಧುಮೇಹ ವಾಸಿಮಾಡುತ್ತದೆ. (ಇದು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಹೈಪೋ ಗ್ಲೈಸೆಮಿಯಾ ಮತ್ತು ಕಡಿಮೆ ರಕ್ತದ ಗ್ಲೂಕೋಸ್ ಸ್ಥಿತಿಗೆ ಬರಲು ಸಹ ಸಹಾಯ ಮಾಡುತ್ತದೆ)

18. ಕೊಬ್ಬಿನ ಯಕೃತ್ತನ್ನು (ಫ್ಯಾಟಿ ಲಿವರ್) ಗುಣಪಡಿಸುತ್ತದೆ. (ಇದು ಕೊಬ್ಬಿನ ಯಕೃತ್ತಿನ ಸ್ಥಿತಿಯನ್ನು ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಹಿಂತಿರುಗಿಸುತ್ತದೆ)

19. ಕೊಬ್ಬನ್ನು ಸುಡುತ್ತದೆ (ಇದು ದೇಹದಿಂದ ಎಲ್ಲಾ ಅನಗತ್ಯ ಕೊಬ್ಬನ್ನು ಸುಡುತ್ತದೆ)

20. ಇದು ನಿಮ್ಮಲ್ಲಿ ಶಿಸ್ತನ್ನು ತರುತ್ತದೆ ಮತ್ತು ಇಚ್ಛಾಶಕ್ತಿಯನ್ನು ವೃದ್ಧಿ ಮಾಡುತ್ತದೆ.

21. ಮಸ್ಸೆಲ್ ಸಾಂದ್ರತೆ ಮತ್ತು ಸ್ನಾಯುವಿನ ಶರೀರಶಾಸ್ತ್ರ/ಡೈನಾಮಿಕ್ಸ್ ಸುಧಾರಿಸುತ್ತದೆ. (ಇದು ಬೆಳವಣಿಗೆಯ ಹಾರ್ಮೋನ್ ಅನ್ನು ಸುಧಾರಿಸುತ್ತದೆ)

22. ಚಯಾಪಚಯ (ಮೆಟಾಬಾಲಿಕ್) ಸಮಸ್ಯೆಗಳನ್ನು ಪರಿಹರಿಸುತ್ತದೆ. (ಚಯಾಪಚಯ ವೇಗವರ್ಧನೆಗೆ ಸಹಾಯ ಮಾಡುತ್ತದೆ)

23. ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. (ಇದರಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಾಗುತ್ತದೆ)

ಈ ಅಭ್ಯಾಸದಿಂದ - ಮೆದುಳಿನ ಗೆಡ್ಡೆ, ಕ್ಯಾನ್ಸರ್, ಮಧುಮೇಹ, ಥೈರಾಯ್ಡ್, ರಕ್ತದೊತ್ತಡ, ಸ್ಥೂಲಕಾಯತೆ, ಇತ್ಯಾದಿ. ಹಾಗು ತುರಿಕೆ, ಅಲರ್ಜಿ, ಬಡಿತ, ಉಸಿರಾಟದ ತೊಂದರೆ, ನಿದ್ರಾಹೀನತೆ, ಎಲ್ಲಾ ರೀತಿಯ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳಂತಹ ಎಲ್ಲಾ ವಿಧವಾದ ಖಾಯಿಲೆಗಳನ್ನು ಗುಣಪಡಿಸುತ್ತದೆ.

ನಿಮಗೆ ನಿಮ್ಮ ದೇಹ ಸಂಪೂರ್ಣವಾಗಿ ರಿಸೈಕಲ್ ಆಗಿ, ರಿಫ್ರೆಶ್ ಆಗಿದ್ದೇನೆ ಎಂದು ಭಾವಿಸುವವರೆಗೆ ದಿನಕ್ಕೆ ಒಂದು ಊಟವನ್ನು ಅಭ್ಯಾಸ ಮಾಡಿ.

 ಇದರ ಬಗ್ಗೆ ಮತ್ತುಷ್ಟು ಮಾಹಿತಿ ತಿಳಿಯಲು, ಕೆಳಗೆ ಕೊಟ್ಟಿರುವ ಹಿಂದಿ ಮತ್ತು ಇಂಗ್ಲಿಷ್ ವಿಡಿಯೋ ನೋಡಿ...  

Hindi:
https://youtu.be/MG_ur3dq6FQ?si=vOfxDebAMQ2bwWCs


English:
https://youtu.be/xVppzWCG4qw?si=6c_2iZL-UaX30h9b


ಧನ್ಯವಾದಗಳು 

ಜಿ ಸಿ ವಿ  


ಲೇಖಕ ಹಕ್ಕು ನಿರಾಕರಣೆ:

ಯಾವುದೇ ವಿಧಾನಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ತಜ್ಞರ ಸಲಹೆಯನ್ನು ಸಂಪರ್ಕಿಸಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ. ಆರೋಗ್ಯ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ನಿಮ್ಮ ಅನ್ವೇಷಣೆಯಲ್ಲಿ ನಿಮಗೆ ಸಹಾಯ ಮಾಡಲು ಸಾಮಾನ್ಯ ಸ್ವಭಾವದ ಮಾಹಿತಿಯನ್ನು ನೀಡುವುದು ಲೇಖಕರ ಉದ್ದೇಶವಾಗಿದೆ.