ಆರೋಗ್ಯದ ಗುಟ್ಟು
ಭಯ, ಸಿಟ್ಟು, ಟೆನ್ಷನ್ ಹೇಗೆ ನಿಮ್ಮ ರೋಗ
ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಎಂದು ಒಮ್ಮೆ ವೀಕ್ಷಿಸೋಣ..
ನಮ್ಮ ದೇಹದಲ್ಲಿ ಲಕ್ಷಾಂತರ ಜೀವ ಕೋಶಗಳು ಪ್ರತಿ
ದಿನವೂ ಸಾಯುತ್ತವೆ, ಅವುಗಳ ಸಂಖ್ಯೆಯನ್ನು ಸರಿತೂಗಿಸಲು, ಲಕ್ಷಾಂತರ ಹೊಸ ಜೀವ ಕೋಶಗಳು
ಸೃಷ್ಟಿಯಾಗುತ್ತವೆ.
ಈ ಹೊಸ ಜೀವ ಕೋಶಗಳನ್ನು
ನಮ್ಮ ದೇಹದಲ್ಲಿ DNA(Gene) ಗಳು ಸೃಷ್ಟಿಸುತ್ತವೆ. ಈ
DNA ಒಟ್ಟು ಸಮೂಹವನ್ನು ಕ್ರೋಮೋಸೋಮ್ ಎಂದು ಕರೆಯುತ್ತಾರೆ, ಇಂತಹ
ಕ್ರೋಮೋಸೋಮ್ ಒಂದು ಗುಂಪು ನಮ್ಮ
ದೇಹದ ಪ್ರತಿಯೊಂದು ಜೀವಕೋಶದಲ್ಲಿ ಅಡಗಿರುತ್ತದೆ.
ನಾವು ಶಾಂತಿ, ಸಮಾಧಾನವಾದ ಭಾವನೆ ಹೊಂದಿದ್ದರೆ, ನಮ್ಮ ದೇಹದಲ್ಲಿ ಹೊಸ
ಜೀವ ಕೋಶಗಳ ಸೃಷ್ಟಿ ಸರಾಗವಾಗಿ ಹಗಲು ಮತ್ತು ರಾತ್ರಿ
ನಡೆಯುತ್ತಿರುತ್ತದೆ.
ಒಂದುವೇಳೆ ನಮ್ಮನ್ನು ಒಂದು ಹುಲಿ ಅಥವಾ
ಸಿಂಹವು ಬೆನ್ನತ್ತಿದಾಗ, ನಾವು ಭಯದಿಂದ ಓಡಲು
ಯತ್ನಿಸುತ್ತೇವೆ, ಆ ಸಮಯದಲ್ಲಿ ನಮ್ಮ
ಹೊಸ ಜೀವ ಕೋಶಗಳ ಸೃಷ್ಟಿ
ನಿಂತು ಹೋಗುತ್ತದೆ, ನಮ್ಮ ದೇಹದಲ್ಲಿನ ಪ್ರತಿಯೊಂದು
DNA ಭಾಗವು ಇತರೇ ರಸಾಯನಗಳನ್ನು ಸೃಷ್ಟಿಸಿ,
ನಮ್ಮನ್ನು ಆ ಭಯದಿಂದ ಪಾರುಮಾಡಲು
ಸಹಾಯವಾಗುತ್ತದೆ. ಆಗ ಹೊಸ ಜೀವ
ಕೋಶಗಳ ಸೃಷ್ಟಿ ಸಂಪೂರ್ಣವಾಗಿ ನಿಂತಿರುತ್ತದೆ.
ಮೇಲಿನ ಉದಾಹಣೆ, ಕೇವಲ ಕೆಲವೇ ನಿಮಿಷ
ನಡೆಯುವುದರಿಂದ, ನಮ್ಮ ದೇಹ ಯಥಾಸ್ತಿತಿಗೆ
ಮರಳಿ, ದೇಹದಲ್ಲಿ ಹೊಸ ಜೀವ ಕೋಶಗಳ
ಸೃಷ್ಟಿ ಮುಂದುವರೆಯುತ್ತದೆ. ಒಂದು ವೇಳೆ ನೀವು
ಯಾವುದೋ ಉದ್ಯೋಗ, ವ್ಯವಹಾರ, ರೋಗ, ಸಂಸಾರದ ಭಯದಲ್ಲಿ
ಸದಾ ಅದನ್ನೇ ಯೋಚಿಸುತ್ತಿದ್ದರೆ, ಆಗ ನೀವು ಅನೇಕ
ಸಮಯದವರೆಗೆ, ಹೊಸ ಜೀವ ಕೋಶಗಳ
ಸೃಷ್ಟಿಗೆ ಬ್ರೇಕ್ (break) ಹಾಕುತ್ತೀರಾ, ನಮ್ಮ ದೇಹದಲ್ಲಿ ಪ್ರತಿದಿನವೂ
ಸಾಯುವ ಮತ್ತು ಸೃಷ್ಟಿ ಯಾಗುವ ಜೀವ ಕೋಶಗಳ ನಿಯಮ
ತಪ್ಪುತ್ತದೆ.
ಯಾವಾಗ ನಮ್ಮ ದೇಹದಲ್ಲಿ ಹೊಸ
ಜೀವ ಕೋಶಗಳ ಸಂಖ್ಯೆ ಕಡಿಮೆ ಆಗುವುದೋ, ಆಗ ನಮ್ಮ ದೇಹದ
ರೋನಿರೋಧಕ ಶಕ್ತಿ ಕಡಮೆಯಾಗುತ್ತದೆ, ಆಗಾ ಯಾವುದೇ ಹೊರಗಿನಿಂದ
ಬರುವ ವೈರಸ್ ಅಥವಾ ಬ್ಯಾಕ್ಟೀರಿಯ ನಮ್ಮನ್ನು
ಸುಲಭವಾಗಿ ಸೇರಿ ಬಾದಿಸುವ ಕೆಲಸ
ಮಾಡುತ್ತದೆ, ಒಂದು ವೇಳೆ ನಮ್ಮ
ದೇಹವು ತುಂಬಾ ಶಾಂತಿ ಮತ್ತು ಸಮಾಧಾನದಲ್ಲಿ ಇದ್ದರೆ, ದೇಹಕ್ಕೆ ಬೇಕಾದ ಹೊಸ ಜೀವ ಕೋಶಗಳ
ಸೃಷ್ಟಿಯಾಗಿ, ರೋಗ ನಿರೋಧಕ ಶಕ್ತಿ
ಹೆಚ್ಚುತ್ತದೆ, ಹೊರಗಿನ ಬ್ಯಾಕ್ಟೀರಿಯ ಅಥವಾ ವೈರಸ್ ಸುಲಭವಾಗಿ
ದೇಹವನ್ನು ಪ್ರವೇಶಿಸಲು ಬಿಡುವುದಿಲ್ಲ.
ಉದಾಹರಣೆ:
ಸೊಳ್ಳೆ ಬತ್ತಿ ಹುರಿಯುತ್ತಿದ್ದರೆ, ಸೊಳ್ಳೆಗಳು ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ, ಒಂದು ವೇಳೆ ಸೊಳ್ಳೆ
ಬತ್ತಿ ಹುರಿಯುವುದು ನಿಂತರೆ, ಸೊಳ್ಳೆಗಳು ನಿಮ್ಮ ಮನೆಗೆ ದಾಳಿ ಮಾಡುತ್ತವೆ. ಅದೇ ರೀತಿ, ನಾವು ಸಿಟ್ಟು, ಟೆನ್ಷನ್, ಭಯ ಮತ್ತು
ಕೋಪಗೊಂಡ ವೇಳೆ, ನಮ್ಮ ಹೊಸ ಜೀವ
ಕೋಶಗಳು ಸೃಷ್ಟಿಯಾಗದೆ, ನಮ್ಮ ದೇಹದಲ್ಲಿ ರೋಗ
ನಿರೋಧಕ ಶಕ್ತಿ ಕ್ಷೀಣಿಸುತ್ತದೆ.
ನೀವು ಕೆಲವರನ್ನು ನೋಡಿರುತ್ತೀರಿ, ಅವರು ಹೇಳುತ್ತಾರೆ, ನನಗೆ
ಮಳೆ, ಚೆಳಿ, ಗಾಳಿ ಏನೂ ಮಾಡುವುದಿಲ್ಲ,
ನಾನೂ ಎಲ್ಲವನ್ನೂ ತಿನ್ನುತ್ತೇನೆ, ಎಲ್ಲಾ ನೀರನ್ನು ಕುಡಿಯುತ್ತೇನೆ, ನನಗೆ ಏನು ಆಗುವುದಿಲ್ಲ
ಎಂದು. ಅವರು ಆರೋಗ್ಯವಾಗಿ ಇರಲು
ಕಾರಣವೇ, ಭಯವನ್ನು ತೊರೆದು, ದೈರ್ಯ, ಶಾಂತಿ ಮತ್ತು ಸಮಾಧಾನದಿಂದ
ಜೀವಿಸುವುದು. ಆಗ ಅವರಲ್ಲಿ ಹೊಸ
ಜೀವ ಕೋಶಗಳ ಸೃಷ್ಟಿ ಸದಾ ನಡೆಯುವುದು, ಹಾಗಾಗಿ
ಅವರಲ್ಲಿ, ವಿಪರೀತವಾದ ರೋಗ ನಿರೋಧಕ ಶಕ್ತಿ
ಇರುತ್ತದೆ.
ಯಾವಾಗಲೂ ಭಯ ಪಡುವ ಜನರು
ಸದಾ ಮಿನೇರೆಲ್ ವಾಟರ್ bislari etc ಕುಡಿದರು, ಅವರು ರೋಗದಿಂದ ಬಳಲುತ್ತಿರುತ್ತಾರೆ,
ಇದಕ್ಕೆ ಕಾರಣ ಅವರಲ್ಲಿ ಇರುವ
ವಿಪರೀತವಾದ ಭಯ.
ಇನ್ನು ಒಂದು ಉದಾರಣೆ: ಕೆಲವರನ್ನು
ನೋಡಿರುತ್ತೀರಿ, ವಯಸ್ಸು 80 ದಾಟಿದ್ದರು,
ಒಂದೇ ಒಂದು ಕಾಯಿಲೆ ಅಥವಾ
ಟ್ಯಾಬ್ಲೆಟ್ (tablet) ಇಲ್ಲದೆ
ಆರೋಗ್ಯ ದಿಂದ ಇರುತ್ತಾರೆ. ಇದಕ್ಕೆ
ಕಾರಣ ಅವರು ಸಿಟ್ಟು, ಟೆನ್ಷನ್, ಭಯ ಮತ್ತು
ಕೋಪವನ್ನು ಬಿಟ್ಟು ಸಾಮರಸ್ಯ ವಾಗಿ ಜೀವಿಸುತ್ತಿರುವ ರೀತಿ.
ಆದರೆ ಈಗಿನ ಕಾಲದಲ್ಲಿ ಎಲ್ಲರೂ
ಆಸೆಯ ಬೆನ್ನು ಏರಿ, ಅದು ಸಿಗದೆ,
ಬಹಳಷ್ಟು ಸಿಟ್ಟು, ಟೆನ್ಷನ್, ಭಯ ಮತ್ತು ಕೋಪಬರಿತ ಜೀವನ ನಡೆಸುತ್ತಿದ್ದಾರೆ. ಹಾಗಾಗಿಯೇ, ವಯಸ್ಸು 30 ಅಥವಾ 40 ರಲ್ಲಿ 2 ರಿಂದ 3 ಕಾಯಿಲೆ ಬಂದು, ಮನೆಯಲ್ಲೇ ಒಂದು ಮಿನಿ ಮೆಡಿಕಲ್
ಸ್ಟೋರ್ ಇಟ್ಟಿರುತ್ತಾರೆ.
ನೀವು, ನಿಮ್ಮ ಜೀವನವನ್ನು, ಶಾಂತಿ, ಸಮಾಧಾನವಾಗಿ ನಡೆಸಲು ಇಚ್ಛಿಸಿದರೆ, ರೋಗರಹಿತ ಜೀವನ ನಿಮ್ಮದಾಗಲು ಬಯಸಿದರೆ,
ಆಕಾಶಕ್ಕೆ ಏಣಿ ಹಾಕುವ ಕೆಲಸವನ್ನು
ಬಿಟ್ಟು, ಭಯ ಪಡದೆ ಇರುವುದರಲ್ಲಿ
ಸ್ವರ್ಗವನ್ನು ಕಾಣುವುದನ್ನು ಕಲಿಯಿರಿ.
ನಾನು ಮೇಲೆ ಹೇಳಿರುವ ಎಲ್ಲಾ
ವಿಷಯಗಳು ವೈಜ್ಞಾನಿಕ ವಿಷಯಗಳು, ವಿಶ್ವದ ಮಹನೀಯರು ಮಾಡಿರುವ ಮಹಾ ಅನ್ವೇಷಣೆಗಳ ಭಾಗವಾಗಿದ್ದು,
ಅದನ್ನು ಪರೀಕ್ಷಿಸಿ ಒಳಿತನ್ನು ಕಂಡವರು ಲಕ್ಷಾಂತರ ಜನರು ಇದ್ದಾರೆ.
ನೀವು ನಿಮ್ಮ ಜೀವನಲ್ಲಿ ಎಷ್ಟು ಸಿಟ್ಟು, ಟೆನ್ಷನ್, ಭಯ ಮತ್ತು ಕೋಪ
ಕಡಿಮೆ ಮಾಡಿಕೊಂಡರೆ, ಅಷ್ಟು ನಿಮ್ಮ ಆರೋಗ್ಯ ಸುಧಾರಿಸುವುದು.
ಕೆಲವರನ್ನು ನೋಡಿರಬಹುದು, ಒಂದು ಕಾಯಿಲೆ ಬಂದಾಗ,
ಅದಕ್ಕೆ ಭಯಗೊಂಡು, ಸದಾ ಅದೇ ಯೋಚಿಸಿ,
ಮತ್ತೆ ಇನ್ನೂ ಹಲವು ಕಾಯಿಲೆಗಳನ್ನು ಬರಮಾಡಿ
ಕೊಳ್ಳುವರು. ಇದಕ್ಕೆ ಮೂಲ ಕಾರಣ, ಅವರು
ಸದಾ ಭಯಗೊಂಡು, ತಮ್ಮ ದೇಹದಲ್ಲಿ ಹೊಸ
ಜೀವ ಕೋಶಗಳ ಸೃಷ್ಟಿ ಸಂಪೂರ್ಣವಾಗಿ ನಿಲ್ಲಿಸುವರು. ಇದರಿಂದ ಅವರ ದೇಹ ಹೆಚ್ಚು
ಹೆಚ್ಚು ರೋಗ ನಿರೋಧಕ ಶಕ್ತಿ
ಕಳೆದುಕೊಳ್ಳುವುದು, ಅವರ ದೇಹ ರೋಗಗಳ
ಗೂಡಾಗಿ ಪರಿಣಮಿಸುವುದು.
ನಿಮ್ಮ ದೇಹ ಮತ್ತು ಮನಸ್ಸನ್ನು
ಸದಾ ಶಾಂತಿ ಮತ್ತು ಸಮಾಧಾನವಾಗಿ ಇಟ್ಟುಕೊಳ್ಳಿ, ನೀವು ಟೆನ್ಷನ್, ಗಾಬರಿ,
ಕೋಪ, ಭಯ, ಮತ್ತು ಆತಂಕ
ಪಡುವಾಗ, ನಿಮ್ಮ ದೇಹದಲ್ಲಿ ಸಮತೋಲನ ಸ್ಥಿತಿ ಹದಗೆಟ್ಟು, ನಿಮ್ಮ ರೋಗ ನಿರೋಧಕ ಶಕ್ತಿ
ಕುಗ್ಗುತ್ತದೆ.
(Keep your mind and body, cool, calm and peaceful. If you get stress,
fear and anger, you distrubs the homogeneous state of the body. That further
distrubs immune system in the body).
ಅಕ್ಕಮಹಾದೇವಿಯವರ ವಚನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ವಿವೇಕಾನಂದರ ವಾಕ್ಯ ಸರಿಯಾಗಿ ಗ್ರಹಿಸಿ, ಇವರು ನಮ್ಮ ದೇಶದ
ಮೂಲ ವಿಜ್ಞಾನಿಗಳು, ಅವರ ಮಾತನ್ನು ಈಗ
ನಾವು ವೈಜ್ಞಾನಿಕವಾಗಿಯೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ನಿಮ್ಮ ಮೇಲೆ ನಂಬಿಕೆ ಇಡಿ
- ಎಲ್ಲಾ ಶಕ್ತಿ ನಿಮ್ಮಲ್ಲಿದೆ. ನೀವು ದೃಢವಾಗಿ ನಿರಾಕರಿಸಿದರೆ
ಹಾವಿನ ವಿಷ ಕೂಡ ಶಕ್ತಿಹೀನವಾಗುತ್ತದೆ.-
ಸ್ವಾಮಿ ವಿವೇಕಾನಂದ.
ನಾಳೆ
ಬರುವುದು ಇಂದೇಬರಲಿ,
ಇಂದು
ಬರುವುದು ಈಗಲೇ ಬರಲಿ
ಆಗ ಈಗ ಎನ್ನದಿರು ಚೆನ್ನ
ಮಲ್ಲಿಕಾರ್ಜುನ
- ಅಕ್ಕ
ಮಹಾದೇವಿ
ಯಾವುದಕ್ಕೂ ಅಂಜದಿರು, ಅದ್ಬುತ ಕಾರ್ಯವನ್ನೆಸಗುವೆ, ಭೀತಿಯೆ ಪ್ರಪಂಚದ ಎಲ್ಲಾ ದುಃಖಗಳಿಗೆ ಮಹತ್ ಕಾರಣ, ನಿರ್ಭೀತಿಯು
ಕ್ಷಣಮಾತ್ರದಲ್ಲಿ ಸ್ವರ್ಗವನ್ನ ಸಾಧಿಸಿ ಕೊಡಬಲ್ಲದು. ಭಯರಹಿತನಾಗಿ ಮುನ್ನಡೆ. - ಸ್ವಾಮಿ ವಿವೇಕಾನಂದ.
ನಾಯಿ
ಮರಿಗಳ ಬೊಗಳುವಿಕೆ ಯಿಂದ ಅಪ್ರತಿಭರಾಗ ಬೇಡಿ,
ಸಿಡಿಲ ಗರ್ಜನೆಯು ನಿಮ್ಮನ್ನು ಅಂಜಿಸದಿರಲಿ. - ಸ್ವಾಮಿ ವಿವೇಕಾನಂದ.
ಇವರ ಕೆಚ್ಚೆದೆಯ ಮಾತುಗಳು ನಿಮ್ಮಲ್ಲಿ ದೈರ್ಯ ಮತ್ತು ಸಹನೆ ತರಲಿ, ಶಾಂತಿ
ಸಮಾಧಾನದ ಜೀವನ ನಿಮ್ಮದಾಗಲಿ.
ಶಾಂತಿ ಮತ್ತು ನೆಮ್ಮದಿ ಜೀವನ ನಡೆಸುವುದು
ಹೇಗೆ?
ಅದು ಬಹಳ ಸುಲಭ, ನೀವು
ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಮನಸ್ಸು ನಮ್ಮ ಉಸಿರಾಟ ಕ್ರಿಯೆಯನ್ನು
ಕುದುರೆಯ ರೀತಿ ಬಳಸಿ ಯಾವಾಗಲೂ
ಸುತ್ತುತ್ತಿರುತ್ತದೆ. ನೀವು ನಿಮ್ಮ ಮನಸನ್ನು ಉಸಿರಾಟದ ಕ್ರಿಯೆಯಲ್ಲಿ ತೊಡಗಿಸಿ, ಆಗ ಮನಸ್ಸು ಬೇರೆಡೆ
ಹೋಗುವುದಿಲ್ಲ, ಬರಿ ನಿಮ್ಮ ಉಸಿರಾಟವನ್ನು
ಆಲಿಸುತ್ತಾ ಇರುತ್ತದೆ. ಮನಸ್ಸು ಮತ್ತೆ ಬೇರೆ ಯೋಚನೆ ಮಾಡಲು
ಅಥವಾ ಬೇರೆಡೆ ಹೋಗಲು ಯತ್ನಿಸಿದಾಗ, ಮತ್ತೆ ಮನಸನ್ನು ಉಸಿರಾಟದ ಕಡೆ ಮಗ್ನಮಾಡಿ. ಹೀಗೆ
ಮಾಡುತ್ತ ಮಾಡುತ್ತ ನಿಮ್ಮ ಮನಸ್ಸು ನಿಮ್ಮ ವಶವಾಗುವುದು. ಆಗ, ಒತ್ತಡ, ಭಯ,
ಸಿಟ್ಟು, ಆತಂಕ, ಮತ್ತು ಭ್ರಾಂತಿ ದೂರವಾಗಿ, ಶಾಂತಿ ಮತ್ತು ನೆಮ್ಮದಿ ನಿಮ್ಮದಾಗುವುದು. ಈ ಉಸಿರಾಟ ಆಲಿಸುವ ಕ್ರಿಯೆ ನೀವು ಹೆಚ್ಚು ಹೆಚ್ಚು
ಮಾಡಿದಷ್ಟು, ನಿಮ್ಮ ಆರೋಗ್ಯ ವೃದ್ಧಿಸುತ್ತ ಹೋಗುತ್ತದೆ.
ನೀವು ದೀರ್ಘ ಉಸಿರಾಟ ಮಾಡುವುದನ್ನು ಅಭ್ಯಾಸ ಮಾಡಿ, ನೀವು ಉಸಿರಾಡುವಾಗ ಹೊಟ್ಟೆ ಭಾಗಾವು ಉಬ್ಬುವುದು ಮತ್ತು ತಗ್ಗುವುದು ನಡೆಯುತ್ತಿದ್ದರೆ, ಅದು ದೀರ್ಘ ಉಸಿರಾಟ,
ಬರಿ ನೀವು ಉಸಿರು ಎದೆಯ ಭಾಗ ಮಾತ್ರ ಆಡುತ್ತಿದ್ದರೆ ಅಥವಾ ಅದು ಬಹಳ
ವೇಗವಾಗಿ ಉಸಿರಾಡುತ್ತಿದ್ದರೆ, ನೀವು ಯಾವುದೋ ಕೋಪ,
ತಾಪಾ, ಭಯ, ಆತಂಕ, ಟೆನ್ಷನ್
ನಲ್ಲಿ ಇದ್ದೀರಿ ಎಂದು ಅರ್ಥ.
ನಿವು ಪ್ರತಿ ಉಸಿರೂ ತೆಗೆದು ಕೊಂಡಾಗ ಹೊಟ್ಟೆ ಉಬ್ಬುವುದು ಮತ್ತು ಉಸಿರು ಬಿಟ್ಟಾಗ ಹೊಟ್ಟೆ ತಗ್ಗುವುದು, ಮತ್ತು ಈ ಪ್ರಕ್ರಿಯೆ ನಿಧಾನವಾಗಿ
ಜರಗುತ್ತಿದ್ದರೆ. ನೀವು ಬಹಳ ಕಾಲ
ಆರೋಗ್ಯವಾಗಿ ಜೀವಿಸುವಿರಿ.
ಉದಾಹಣೆಗಾಗಿ: ಇಲಿ ಮತ್ತು ಜಿರಾಫೆ ಉಸಿರಾಟ ಬಹಳ ಅಲ್ಪ ಕಾಲ
ಇರುವುದು, ಈ ಪ್ರಾಣಿಗಳು ದೀರ್ಘ
ಕಾಲ ಉಸಿರಾಟ ನಡೆಸದ ಕಾರಣ ಬೇಗ ಸಾಯುತ್ತವೆ.
ಆದರೆ ಆನೆ ದೀರ್ಘ ಉಸಿರಾಟ
ನಡೆಸುತ್ತದೆ, ಈಗಾಗಿ ಅದು ದೀರ್ಘ ಕಾಲ
ಜೀವಿಸುವುದು.
ದೀರ್ಘ ಕಾಲ ಜೀವಿಸಲು, ದೀರ್ಘ ಉಸಿರಟ ನಡೆಸಿ. ಶಾಂತಿ ಮತ್ತು ನೆಮ್ಮದಿ ಜೀವನ ನಡೆಸಲು ಮನಸನ್ನು ಉಸಿರಾಟ ಕ್ರಿಯೆ ಆಲಿಸುವುದರಲ್ಲಿ ತೊಡಗಿಸಿ. ನಮ್ಮ ಎಲ್ಲಾ ಭಯ,
ಸಿಟ್ಟು, ಟೆನ್ಷನ್, ಆತಂಕಗಳಿಗೆ ಮುಖ್ಯ ಕಾರಣ ಮನಸ್ಸು ಅದು
ಸದಾ ಏನೇನೋ ನೆನೆದು ನಮ್ಮ ನೆಮ್ಮದಿಗೆ ಭಂಗತರುತ್ತದೆ. ಹಾಗಾಗಿ ಮನಸ್ಸನ್ನು ಉಸಿರಾಟದಲ್ಲಿ ಮಗ್ನಗೊಳಿಸಿ, ಆಗ ಶಾಂತಿಯ ಜೀವನ
ನಿಮ್ಮದಾಗತ್ತದೆ.
ಹಾಗು ದಿನನಿತ್ಯ ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಕೊಳ್ಳುವುದು
ತುಂಬಾ ಒಳ್ಳೆಯ ಅಭ್ಯಾಸ, ಆಗ ಮನಸ್ಸು ಅಲ್ಲಿ
ಇಲ್ಲಿ ಹೋಗದೆ, ಚಿಂತೆಗಳನ್ನು ಬಿಟ್ಟು ಕೆಲಸದಲ್ಲಿ ತೊಡಗಿಕೊಳ್ಳುವುದು.
ನಾನು ಮೇಲೆ ವಿವರಿಸಿರುವ ಜೀವ
ಕೋಶಗಳ ವೈಜ್ಞಾನಿಕ ಅಧ್ಯಯನ ಮತ್ತು ಅದರ ವಿವರಗಳಿಗೆ ಕೆಳಗೆ
ನಮೂದಿಸಿರುವ ಮಹಾನ್ ವೈದ್ಯ ಮತ್ತು ವಿಜ್ಞಾನಿಗಳ ರೀಸರ್ಚ್ ಅನ್ನು ಓದಿ ಅಥವಾ ಅವರ
ವಿಡಿಯೋ ನೋಡಿ.
ಆಸೆಗೆ ಮಿತಿ ಇರಲಿ, ಜೀವನದಲ್ಲಿ ಪ್ರೀತಿ ಇರಲಿ, ಸಹನೆ ಮತ್ತು ಶಾಂತಿ ಸದಾ ನಿಮ್ಮೊಂದಿಗೆ ಇರಲಿ, ಆರೋಗ್ಯವಂತ ಜೀವನ ನಿಮ್ಮದಾಗಲಿ. - ನಿಮ್ಮ ವಿಷ್ಣು
ಡಾಕ್ಟರ್, ಜೋ ದಿಸ್ಪೆಂಜ
Dr. Joe
Dispanza
ಡಾಕ್ಟರ್, ಬ್ರೂಸ್ ಲಿಲ್ಪ್ತನ್
Dr. Bruce
Lipton
ಡಾಕ್ಟರ್, ಬಿ ಎಂ ಹೆಗ್ಡೆ
Dr. B M
Hegde
ಡಾಕ್ಟರ್, ಅಲನ್ ಮಂದೆಲ್
Dr. Alan
Mandell
- VIRUS A, B, OR C...DON'T SWEAT IT! (Dr Alan Mandell, DC) [Fear makes immune system weaker]
- PUMP UP YOUR BRAINS HAPPY HORMONES IN SECONDS - Dr Mandell, DC
ಉಸಿರಾಟ ಮತ್ತು ಅದರ ಉಪಯೋಗ:
Sundar Balasubramanian | TEDxCharleston
ಹಾಗೂ ಕೆಳಗಿನ ನನ್ನ
2 ಹೆಲ್ತ್ ಆರ್ಟಿಕಲ್ಸ್ ಅನ್ನು ಓದಿ:
ಲೇಖಕರು : ವಿಷ್ಣುವರ್ಧನ
ಜಿ ಸಿ
ಕೆರೆಯ
ನೀರನ್ನು ಕೆರೆಗೆ ಚೆಲ್ಲಿ
ಲೇಖಕ ಹಕ್ಕುತ್ಯಾಗ:
ನಾನು ಸ್ಥಿರ ಮತ್ತು ಸಂಪೂರ್ಣ
ರೋಬೋಟ್ ಅಲ್ಲ, ನಾನು ಸಾಮಾನ್ಯ ಮನುಷ್ಯ ಮತ್ತು ನನ್ನ ಬ್ಲಾಗ್ ಅಥವಾ ಲೇಖನ ವಿರೋಧಾಭಾಸವಾಗಿರುತ್ತದೆ, ನಿರ್ದೇಶಕರು ಅನೇಕ ಚಲನಚಿತ್ರಗಳಿಗೆ
ಒಂದೇ ವಿಷಯದ ಬಗ್ಗೆ ಅಥವಾ ವಿಭಿನ್ನ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಾರೆ. ನಾನು
ನದಿಯಂತೆ ಹರಿಯುತ್ತೇನೆ, ನಾನು ನಿಜವಾಗಿಯೂ ಮರಳು, ಕಲ್ಲು, ಮರಗಳು, ಮನೆ ಇತ್ಯಾದಿಗಳನ್ನು ಹುಡುಕುವುದಿಲ್ಲ.
ಸಾಗರವನ್ನು ತಲುಪುವುದು ಮೂಲ ಉದ್ದೇಶ, ಸಾಗರ ತಲುಪುವ
ಮುನ್ನ ದಾರಿಯಲ್ಲಿ ಕೆಲವರಿಗೆ ಉಪಯೋಗವಾಗುವದು ನನ್ನ ಗುರಿ. ನನ್ನ ಲೇಖನದ ಯಾವುದೇ ವಿಧಾನಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು
ತಜ್ಞರ ಸಲಹೆಯನ್ನು ಸಂಪರ್ಕಿಸಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ
ಯೋಗಕ್ಷೇಮಕ್ಕಾಗಿ ನಿಮ್ಮ ಅನ್ವೇಷಣೆಯಲ್ಲಿ ನಿಮಗೆ ಸಹಾಯ ಮಾಡಲು ಸಾಮಾನ್ಯ ಮಾಹಿತಿಯನ್ನು ನೀಡುವುದು
ನನ್ನ ಉದ್ದೇಶವಾಗಿದೆ.