Showing posts with label Relax. Show all posts
Showing posts with label Relax. Show all posts

Friday, July 1, 2022

ಆರೋಗ್ಯ ಆಫ್ಫಾರ್ಮೆಷನ್

 

ಆರೋಗ್ಯ ಆಫ್ಫಾರ್ಮೆಷನ್

 

ನಮಸ್ಕಾರ ಸ್ನೇಹಿತರೆ, ನಾನು ಇಲ್ಲಿ ಕೊಟ್ಟಿರುವ ಆರೋಗ್ಯದ ಆಫ್ಫಾರ್ಮಶನ್ ಗಳು, ತುಂಬಾ ಪರಿಣಾಮ ಕಾರಿ ಮತ್ತು ಪ್ರಾಯೋಗಿಕವಾಗಿ ವಿಶ್ವದಲ್ಲಿ ಆಫ್ಫಾರ್ಮಶನ್ ಮೂಲಕ ಆರೋಗ್ಯ ಸುಧಾರಣೆಗೆ ಅನುಸರಿಸುವ ಉತ್ತಮ ಪದ್ಧತಿಗಳು.

 ನೀವು ಸಂಪೂರ್ಣ ದೇಹದ ಆರೋಗ್ಯ ಬಯಸುವುದಾದರೆ ನಾನು ಇಲ್ಲಿ ಕೊಟ್ಟಿರುವ ಎಲ್ಲಾ ಆಫ್ಫಾರ್ಮಶನ್ ಗಳನ್ನ ಒಂದು ಹಾಳೆಯಲ್ಲಿ ಬರೆದುಕೊಂಡು ದಿನವೂ ಹೇಳಿಕೊಳ್ಳಿ ಅಥವಾ ಈ ವಿಡಿಯೋ ಕೇಳುತ್ತಾ ಮನದಲ್ಲಿ ಆಫ್ಫಾರ್ಮಶನ್ ಹೇಳಿಕೊಂಡು ಅಭ್ಯಾಸ ಮಾಡಿ. ಅಥವಾ ನನ್ನ ಯು ಟ್ಯೂಬ್ ವಿಡಿಯೋ ಆರೋಗ್ಯದ ಅಫಾರ್ಮೇಶನ್ ಧ್ಯಾನ ಎನ್ನುವ ವಿಡಿಯೋ ಕೇಳುತ್ತಾ ಅಭ್ಯಾಸ ಮಾಡಿ.

 ನಿಮ್ಮಲ್ಲಿ ದೇಹದ ಯಾವುದಾದರೂ ಒಂದು ಅಂಗಾಂಗಕ್ಕೆ ಸಂಬಂದಿಸಿದ ಅನಾರೋಗ್ಯ ಸಮಸ್ಯೆ ಇದ್ದರೆ, ನೀವು ಆ ಅಂಗಾಂಗಕ್ಕೆ ಸಂಬಂದಿಸಿದ ಆಫ್ಫಾರ್ಮಶನ್ ಗಳನ್ನು ಮಾತ್ರ ಪೇಪರ್ ನಲ್ಲಿ ಬರೆದು ಕೊಂಡು ಅಭ್ಯಾಸ ಮಾಡಿ.

 ನಿಮ್ಮಆಫ್ಫಾರ್ಮಶನ್ ಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು, ನಾನು ಹೇಳುವ ವಿಧಾವನ್ನು ಅನುಸರಿಸಿ ಅಭ್ಯಾಸ ಮಾಡಿ.

 ನಿಮ್ಮ ಆಫ್ಫಾರ್ಮಶನ್ ಬೇಗ ನಿಮಗೆ ಫಲಿತಾಂಶ ಕೊಡಬೇಕೆಂದರೆ ನಿಮಗೆ ನಿಮ್ಮ ಮೇಲೆ ಸಂಪೂರ್ಣವಾದ ನಂಬಿಕೆ ಇರಬೇಕು. ನಿಮಗೆ ನಿಮ್ಮ ಆತ್ಮದ ಶಕ್ತಿಯ ಮೇಲೆ ಮತ್ತು ಆ ಪರಮಾತ್ಮನ ಮೇಲೆ ಸಂಪೂರ್ಣವಾದ ವಿಸ್ವಾಸ ಇರಬೇಕು.

 ಮತ್ತು ಈ  ಆಫ್ಫಾರ್ಮಶನ್ ಗಳನ್ನ, ನೀವು ದಿನವೂ ನಾನು ಹೇಳಿದ ಸಮಯದಲ್ಲಿ, ಹೇಳಿದ ವಿಧಾನವನ್ನು ಅನುಸರಿಸಿ ತಪ್ಪದೆ ಅಭ್ಯಾಸ ಮಾಡಬೇಕು. 

 ಅಭ್ಯಾಸ ಮಾಡುವಾಗ ನೀವು, ಪ್ರತಿ ಒಂದು ಸಮಯದಲ್ಲಿ, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಹೇಳಿಕೊಳ್ಳಬೇಕು.

 ನೀವು ಪ್ರತಿ ಬಾರಿ ಮನದಲ್ಲಿ ಹೇಳಿಕೊಳ್ಳುವಾಗ, ಅದನ್ನು ಪೂರ್ಣ ವಿಸ್ವಾಸಾದದಿಂದ ನಿಮ್ಮ ಹೃದಯದಲ್ಲಿ ಭಾವಿಸಬೇಕು. ನೀವು ಆಫ್ಫಾರ್ಮಶನ್ ಹೇಳಿಕೊಳ್ಳುವಾಗ ಎಷ್ಟು ಮನದಲ್ಲಿ ಫೀಲ್ ಆಗುವಿರೋ ಅಷ್ಟು ಪರಿಣಾಮ ಕಾರಿಯಾಗಿ ಅದು ನಿಮಗೆ ರಿಸಲ್ಟ್ ಕೊಡುತ್ತದೆ. 

 ಒಂದುವೇಳೆ ನಿಮಗೆ ಸಮಯ ಇದ್ದರೆ ಅಥವಾ ಬೇಗ ಗುಣವಾಗಲು ಬಯಸಿದರೆ, ದಿನದಲ್ಲಿ ೫ ಅಥವಾ ೬ ಸಮಯದಲ್ಲಿಈ ಆಫ್ಫಾರ್ಮಶನ್ ಗಳನ್ನ ಅಭ್ಯಾಸ ಮಾಡಿ.

 ಬೆಳಿಗ್ಗೆ ಎದ್ದ ಕೊಡಲೇ, ನೀವು ಹಾಸಿಗೆಯಿಂದ ಕೆಳಗೆ ಇಳಿಯುವುದಕ್ಕೂ ಮೊದಲೇ, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ಮತ್ತೆ ನೀವು ಸ್ನಾನ ಮಾಡುವ ಸಮಯದಲ್ಲಿ, ನೀರನ್ನು ನಿಮ್ಮ ದೇಹದ ಮೇಲೆ ಹಾಕಿಕೊಳ್ಳುತ್ತಾ ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ಮತ್ತೆ ರಾತ್ರಿ ನೀವು ಮಲಗುವುದಕ್ಕೂ ಮುನ್ನ, ಎಂದರೆ ನೀವು ನಿದ್ದೆಗೆ ಹೋಗುವ ೧೦ ನಿಮಿಷದ ಮೊದಲು, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ನಾನು ಹೇಳಿದ ಈ ಮೂರು ಸಮಯಗಳಲ್ಲಿ ನಿಮ್ಮ ಆಫ್ಫಾರ್ಮಶನ್ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಏಕೆ ಮತ್ತು ಹೇಗೆ ಎನ್ನುವದನ್ನ ನಾನು ಮುಂದಿನ ದಿನಗಳಲ್ಲಿ ವೈಜ್ಞಾನಿಕ ಕಾರಣಗಳೊಂದಿಗೆ ವಿವರಿಸುತ್ತೇನೆ.

 ಮಿತ್ರರೇ ಈಗ ನಾವು ಆರೋಗ್ಯದ ಮತ್ತು ದೇಹದ ಅಂಗಾಂಗಳಿಗೆ ಸಂಬಂದಿಸಿದ ಆಫ್ಫಾರ್ಮಶನ್ ಗಳನ್ನ ಒಂದೊಂದಾಗಿ ನೋಡೋಣ...

 ಮುಖ

ನಾನು ಹೇಗಿದ್ದೇನೋ ಹಾಗೆಯೆ ನನ್ನನ್ನು ನಾನು ಪ್ರೀತಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ನಾನು ಅದ್ಭುತವಾದ ವ್ಯಕ್ತಿ.

 ತಲೆ

ನನ್ನಲ್ಲಿ ಶಾಂತಿ, ಪ್ರೀತಿ, ಸಂತೋಷ, ಮತ್ತು ವಿಶ್ರಾಂತಿ ತುಂಬಿವೆ. ನಾನು ಜೀವನದ ಜ್ಯೋತೆ ಹಾಯಾಗಿ ನದಿಯ ರೀತಿ ಪ್ರಯಾಣ ಮಾಡುತ್ತೇನೆ ಮತ್ತು ಜೀವನವು ಸುಲಭವಾಗಿ ನನ್ನ ಮೂಲಕ ನದಿಯ ಹಾಗೆ  ಹರಿಯುತ್ತಿದೆ.

 ಕಿವಿಗಳು

ದ್ವನಿ ದೇವರ ವಾಣಿ. ನಾನು ದೇವರ ವಾಣಿಯನ್ನು ಕೇಳುತ್ತೇನೆ. ನಾನು ಜೀವನದ ಸಂತೋಷವನ್ನು ಹಾಯಾಗಿ ಕೇಳುತ್ತೇನೆ. ದ್ವನಿ  ಜೀವನದ ಒಂದು  ಭಾಗ, ನಾನು ಪ್ರೀತಿಯಿಂದ ಎಲ್ಲವನ್ನು ಕೇಳುತ್ತೇನೆ.

 ಬಾಯಿ

ನಾನು ಪ್ರೀತಿಯಿಂದ ಇದ್ದೇನೆ. ನಾನೊಬ್ಬ ನಿರ್ಣಾಯಕ ವ್ಯಕ್ತಿ. ನಾನು ಎಲ್ಲವನ್ನು ಅನುಸರಿಸುತ್ತೇನೆ. ನಾನು ಹೊಸ ಆಲೋಚನೆಗಳು ಮತ್ತು ಹೊಸ ಪರಿಕಲ್ಪನೆಗಳನ್ನು ಸ್ವಾಗತಿಸುತ್ತೇನೆ.

 ಮೆದುಳು

ನಾನು ಜೀವನದಲ್ಲಿ ಎಲ್ಲರೊಂದಿಗೆ ಒಂದಾಗಿದ್ದೇನೆ. ನನ್ನ ಶಾಂತಿಯನ್ನು ಕದಡುವ ಶಕ್ತಿ ಯಾರಿಗೂ ಇಲ್ಲ. ನಾನು ಹಳೆಯ ನಂಬಿಕೆಗಳನ್ನು ನಿರಾಕರಿಸುತ್ತೇನೆ.  ನನ್ನ ಜೀವನ ಶಾಂತಿ ಮತ್ತು ಸಾಮರಸ್ಯವಾಗಿದೆ.

 ಕಣ್ಣುಗಳು

ನಾನು ಸ್ವತಂತ್ರವಾಗಿ ಇದ್ದೇನೆ.  ನಾನು ಮುಕ್ತವಾಗಿ ಮುಂದೆ ನೋಡುತ್ತೇನೆ ಏಕೆಂದರೆ ಜೀವನವು ಶಾಶ್ವತವಾಗಿದೆ ಮತ್ತು ಸಂತೋಷದಿಂದ ತುಂಬಿದೆ. ನಾನು ನನ್ನ ಪ್ರೀತಿಯ ಕಣ್ಣುಗಳಿಂದ ಅದನ್ನು ನೋಡುತ್ತೇನೆ. ಯಾರೂ ನನ್ನನ್ನು ಎಂದಿಗೂ ನೋಯಿಸಲಾರರು. ನಾನು ಎಲ್ಲವನ್ನು ತುಂಬಾ ಖುಷಿ ಮತ್ತು ಪ್ರೀತಿ ಯಿಂದ ನೋಡುತ್ತೇನೆ. 

 ಗಂಟಲು

ನಾನು ಹಾಯಾಗಿ ಮಾತನಾಡಬಲ್ಲೆ. ನಾನು ನನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತೇನೆ. ನಾನು ಸೃಜನಶೀಲ ವ್ಯಕ್ತಿ. ನಾನು ಪ್ರೀತಿಯಿಂದ ಮಾತನಾಡುತ್ತೇನೆ.

 ಕುತ್ತಿಗೆ

ನಾನು ಹೊಂದಿಕೊಳ್ಳುವ ವ್ಯಕ್ತಿ. ನಾನು ಇತರರ ಭಾವನೆ ಮತ್ತು ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇನೆ. ನನ್ನ ಜೀವನ ಶಾಂತಿ ಮತ್ತು ಸುರಕ್ಷಿತವಾಗಿ ಇದೆ.

 ಶ್ವಾಸಕೋಶಗಳು

ಜೀವನದ ಉಸಿರು ನನ್ನ ಮೂಲಕ ಸುಲಭವಾಗಿ ಹರಿಯುತ್ತಿದೆ. ಶಾಂತಿ ತುಂಬಿದೆ. ಯಾರೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನನ್ನ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಸ್ವತಂತ್ರವಾಗಿದ್ದೇನೆ. ನಾನು ಜೀವನವನ್ನು ಸರಿತೂಗಿಸಬಲ್ಲೆ.

 ಹೃದಯ

ನನ್ನಲ್ಲಿ ಸಂತೋಷ, ಪ್ರೀತಿ, ಶಾಂತಿ ತುಂಬಿದೆ. ನಾನು ಜೀವನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನ ಹೃದಯ ಮತ್ತೆ ಆನಂದ ಮತ್ತು ಸಂತೋಷ ದಿಂದ ತುಂಬಿದೆ.

 ಭುಜಗಳು

ನಾನು ಕೋಪವನ್ನು ನನ್ನಿಂದ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತೇನೆ. ನನ್ನಲ್ಲಿ ಪ್ರೀತಿ ಮತ್ತು ವಿಶ್ರಾಂತಿ ಹೆಚ್ಚಾಗುತ್ತಿದೆ. ನನ್ನ ಜೀವನ ಸಂತೋಷ ಮತ್ತು ಮುಕ್ತವಾಗಿದೆ; ನಾನು ಸ್ವೀಕರಿಸುವ ಎಲ್ಲವೂ ಒಳ್ಳೆಯದೇ.

 ಕೈಗಳು

ನಾನು ಎಲ್ಲಾ ವಿಚಾರಗಳನ್ನು ಪ್ರೀತಿಯಿಂದ ಮತ್ತು ಸುಲಭವಾಗಿ ನಿಭಾಯಿಸುತ್ತೇನೆ.

 ಕೈ ಬೆರಳುಗಳು

ನಾನು ಹಾಯಾಗಿ ವಿಶ್ರಾಂತಿ ಪಡೆಯುತ್ತೇನೆ.  ನನ್ನ ಜೀವನದ ಬುದ್ಧಿವಂತಿಕೆ ಎಲ್ಲವನ್ನು ನೋಡಿಕೊಳ್ಳುವ ಮತ್ತು ನಿಭಾಯಿಸುವ ಶಕ್ತಿ ಹೊಂದಿದೆ.  ನನ್ನಲ್ಲಿ ಶಾಂತಿ, ಪ್ರೀತಿ, ಹಿತವಾದ ವಾತಾವರಣವಿದೆ.  ನನ್ನ ಕೌಟುಂಬಿಕ ಜೀವನ ಆನಂದಮಯವಾಗಿದೆ. 

 ಲಿವರ್

ನಾನು ಇನ್ನು ಮುಂದೆ, ನನಗೆ ಅಗತ್ಯವಿಲ್ಲದ ಎಲ್ಲವನ್ನೂ ನಾನು ಬಿಟ್ಟು ಬಿಡುತ್ತೇನೆ. ನನ್ನ ಪ್ರಜ್ಞೆಯು ಈಗ ಶುದ್ಧವಾಗಿದೆ ಮತ್ತು ನನ್ನ ಪರಿಕಲ್ಪನೆಗಳು ಹೊಸತನದೊಂದಿಗೆ ಕಂಗೊಳಿಸುತ್ತಿವೆ.  ನನ್ನಲ್ಲಿ ಶಾಂತಿ, ಪ್ರೀತಿ ಮತ್ತು ಸಂತೋಷ ತುಂಬಿದೆ.

 ಹೊಟ್ಟೆ

ನಾನು ಹೊಸ ಆಲೋಚನೆಗಳನ್ನು ಸುಲಭವಾಗಿ ಸಂಯೋಜಿಸುತ್ತೇನೆ. ನನ್ನನ್ನು ನಾನು  ಒಪ್ಪುತ್ತೇನೆ ಮತ್ತು ಪ್ರೀತಿಸುತ್ತೇನೆ.  ಯಾವುದೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನಾನು ಶಾಂತವಾಗಿದ್ದೇನೆ. ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ.

 ದೊಡ್ಡ ಕರುಳುಗಳು

ನಾನು ಸ್ವತಂತ್ರವಾಗಿ ಇದ್ದೇನೆ; ನಾನು ಹಿಂದಿನ ಎಲ್ಲಾ ನೆನಪುಗಳನ್ನು ಬಿಡುಗಡೆ ಮಾಡುತ್ತೇನೆ. ನನ್ನ ಜೀವನವು ಈಗ ಸುಲಭವಾಗಿ ನದಿಯ ರೀತಿ ಹರಿಯುತ್ತಿದೆ. ನಾನು ಎಲ್ಲಾ ಒತ್ತಡ ಮತ್ತು ಭಾರಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಈ ಕ್ಷಣಗಳು ಸಂತೋಷ ಮತ್ತು ಆನಂದ ದಿಂದ ತುಂಬಿವೆ.

 ಮೂತ್ರಪಿಂಡಗಳು (Kidneys)

ನಾನು ಹಳೆಯ ಸರಿಯಲ್ಲದ ನೆನಪುಗಳನ್ನು ಬಿಡುಗಡೆ ಮಾಡಿದ್ದೇನೆ. ನಾನು ಎಲ್ಲಾಕಡೆ  ಒಳ್ಳೆಯದನ್ನು ಮಾತ್ರ ಹುಡುಕುತ್ತೇನೆ. ಜೀವನ ಸರಿಯಾದ ಕ್ರಮದಲ್ಲಿ ಸಾಗುತ್ತಿದೆ. ನಾನು ಸಂಪೂರ್ಣನಾಗಿದ್ದೇನೆ.

 ಮೂತ್ರ ಕೋಶ (Kidneys)

ನಾನು ಹಳೆಯದನ್ನು ಬಿಡುಗಡೆ ಮಾಡುತ್ತೇನೆ ಮತ್ತು ಹೊಸದನ್ನು ಸ್ವಾಗತಿಸುತ್ತೇನೆ.

 ಪೆಲ್ವಿಸ್

ಆಕಾರಗಳು  ಮತ್ತು ಸಂಪರ್ಕಗಳು  ಬದಲಾಗಬಹುದು ಆದರೆ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ದೇಹದ ಎಲ್ಲಾ ಬದಲಾವಣೆಗಳಲ್ಲಿ ನಾನು ಸಮತೋಲನದಲ್ಲಿದ್ದೇನೆ. ನಾನು ನನ್ನ ದೇಹವನ್ನು ಪ್ರೀತಿಯಿಂದ ಆಶೀರ್ವದಿಸುತ್ತೇನೆ. ನನ್ನ ದೇಹದ ಎಲ್ಲಾ ಭಾಗಗಳು ಸುಂದರವಾಗಿವೆ.

 ಹಿಪ್

ನಾನು ನನ್ನ ಜೀವನದ ಶಕ್ತಿ, ಬೆಂಬಲ ಮತ್ತು ಸಮರ್ಥನೆಯೊಂದಿಗೆ ಸಂತೋಷದಿಂದ ಮುನ್ನಡೆಯುತ್ತೇನೆ. ನಾನು ಇನ್ನು ಹೆಚ್ಚು ಒಳತಿನೆಡೆಗೆ ಮುನ್ನಡೆಯುತ್ತಿದ್ದೇನೆ. ನಾನು ಇತರರನ್ನು ಅವರಂತೆಯೇ ಇರಲು ಬಿಡುತ್ತೇನೆ ಮತ್ತು ನಾನು ಸ್ವತಂತ್ರವಾಗಿದ್ದೇನೆ. ನನ್ನ ಜೀವನ ಸಮತೋನವಾಗಿ ಮುಂದುವರೆಯುತ್ತಿದೆ. 

 ಜನನಾಂಗಗಳು

ನನ್ನಲ್ಲಿ ಶಕ್ತಿ ಇದೆ, ನನ್ನ ಲೈಂಗಿಕ ಅಂಗಾಂಗಳು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿವೆ,  ನಾನು ಅವನ್ನು ಸುಲಭವಾಗಿ ಮತ್ತು ಸಂತೋಷದಿಂದ ಕಾರ್ಯನಿರ್ವಹಿಸಲು ಅನುಮತಿಸುತ್ತೇನೆ. ನನ್ನ ಲೈಂಗಿಕತೆಯನ್ನು ನಾನು ಪ್ರೀತಿಯಿಂದ ಮತ್ತು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನಲ್ಲಿ ಯಾವುದೇ ಬೇಸರವಾಗಲಿ ಮತ್ತು ಅಪರಾಧ ಭಾವನೆಯಾಗಲಿ ಇಲ್ಲ.

 ಮೊಣಕಾಲು

ನನ್ನಲ್ಲಿ ಕ್ಷಮೆ, ಸಹನೆ, ಸಹಾನುಭೂತಿ ತುಂಬಿವೆ. ನಾನು ಹಿಂಜರಿಕೆಯಿಲ್ಲದೆ ಮುನ್ನಡೆಯುತ್ತೇನೆ. ನಾನು ಈಗಿನ ಸ್ಥಿತಿಗತಿಗೆ ಅನುಸಾರವಾಗಿ ಬದಲಾಗುವ ಸ್ನೇಹ ಮತ್ತು ಪ್ರೀತಿಯ ಭಾವವನ್ನು ಹೊಂದಿದ್ದೇನೆ.

 ಚರ್ಮ

ನಾನು ಒಳ್ಳೆಯ ರೀತಿಯಲ್ಲಿ ಎಲ್ಲರನ್ನು ಗಮನ ಸೆಳೆಯುತ್ತೇನೆ. ನಾನು ಸುರಕ್ಷಿತವಾಗಿದ್ದೇನೆ. ನನ್ನ ವ್ಯಕ್ತಿತ್ವಕ್ಕೆ ಯಾವ ಭಯವು ಇಲ್ಲ. ನಾನು ಸಮಾಧಾನದಲ್ಲಿದ್ದೇನೆ. ಜಗತ್ತು ಸುರಕ್ಷಿತ ಮತ್ತು ಸ್ನೇಹಪರವಾಗಿದೆ. ನಾನು ಎಲ್ಲಾ ಕೋಪ ಮತ್ತು ಅಸಮಾಧಾನವನ್ನು ಬಿಡುಗಡೆ ಮಾಡುತ್ತೇನೆ. ನನಗೆ ಏನು ಬೇಕೋ ಅದು ಯಾವಾಗಲೂ ನನ್ನಲ್ಲಿಗೆ ಬರುತ್ತದೆ. ನಾನು ನನ್ನಲ್ಲಿನ  ಒಳ್ಳೆಯತನವನ್ನು ಹಾಯಾಗಿ ಸ್ವೀಕರಿಸುತ್ತೇನೆ. ನಾನು ನನ್ನ ಜೀವನದಲ್ಲಿ ಬರುವ ಎಲ್ಲಾ ಸಣ್ಣ ವಿಷಯಗಳೊಂದಿಗೆ ಶಾಂತಿಯುತವಾಗಿರುತ್ತೇನೆ.

 ಬೆನ್ನು

ಜೀವನ ನನ್ನನ್ನು ಬೆಂಬಲಿಸುತ್ತಿದೆ. ನಾನು ವಿಶ್ವವನ್ನು ನಂಬುತ್ತೇನೆ. ನಾನು ಪ್ರೀತಿ ಮತ್ತು ವಿಶ್ವಾಸವನ್ನು ಮುಕ್ತವಾಗಿ ನೀಡುತ್ತೇನೆ. ನಾನು ಧೈರ್ಯಶಾಲಿ ಮತ್ತು ಸ್ವತಂತ್ರ. ಜೀವನ ಚೆನ್ನಾಗಿದೆ. ನಾನು ಪ್ರೀತಿಯಿಂದ ಮುಂದುವರೆಯುತ್ತಿದ್ದೇನೆ. ಆ ದೈವದ ಸಪೋರ್ಟ್ ನನಗೆ ಇದೆ.

 ಗ್ರಂಥಿಗಳು

ನಾನು ಸಂಪೂರ್ಣ ಸಮತೋಲನದಲ್ಲಿದ್ದೇನೆ. ನನ್ನ ದೇಹದ ಅಂಗಾಂಗಳ ವ್ಯವಸ್ಥೆಯು ಕ್ರಮಬದ್ಧವಾಗಿದೆ. ನಾನು ಜೀವನವನ್ನು ಪ್ರೀತಿಸುತ್ತೇನೆ ಮತ್ತು ಮುಕ್ತವಾಗಿ ಸ್ವೀಕಾರ ಮಾಡುತ್ತೇನೆ. ನಾನು ಸೃಜನಶೀಲ ವ್ಯಕ್ತಿ.

ಪಾದಗಳು

ನಾನು ಸತ್ಯದಲ್ಲಿ ನಿಲ್ಲುತ್ತೇನೆ. ನಾನು ಸಂತೋಷದಿಂದ ಮುನ್ನಡೆಯುತ್ತೇನೆ. ನನಗೆ ಆಧ್ಯಾತ್ಮಿಕ ತಿಳುವಳಿಕೆ ಇದೆ. ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತೇನೆ.

 ಒಂದು ವಿಶೇಷ ಸೂಚನೆ ಮಿತ್ರರೇ,

ನೀವು ಈ ಅಫ್ರಾಮ್ಷನ್ ಮಾಡುವಾಗ ಒಂದುವೇಳೆ ಯಾವುದಾದರೂ ಮೆಡಿಕೇಷನ್ ನಲ್ಲಿ ಇದ್ದಾರೆ ಅದನ್ನು ನಿಲ್ಲಿಸ ಬೀಡಿ, ನಿಮಗೆ ಈ ಆಫ್ರ್ಮ್ಯಾಟಿವ್ನ್ ಮಾಡಿ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದ ಮೇಲೆ ವೈದ್ಯರ ಸಲಹೆಯ ಮೇರೆಗೆ ಬೇಕಾದರೆ ಆ ಮೆಡಿಕೇಷನ ಅನ್ನು ನಿಲ್ಲಿಸ ಬಹುದು. 

 ನೀವು ಈ ಆಫ್ಫಾರ್ಮಶನ್ ಗಳನ್ನ 30 ರಿಂದ 60 ದಿನ, ಒಂದು ದಿನವೂ ತಪ್ಪಿಸದೇ ನಾನು ಹೇಳಿದ ಆ ಮೂರು ಸಮಯದಲ್ಲಿ ಅಭ್ಯಾಸ ಮಾಡಿದರೆ, ನೀವು ನಿಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆ ಗಮನಿಸಬಲ್ಲಿರಿ.  ನಿಮಗೆ ಇದರ ಅಭ್ಯಾಸ ದಿಂದ ಆರೋಗ್ಯ ಸುಧಾರಣೆಯಾದರೆ, ದಯವಿಟ್ಟು ಈ ವಿಡಿಯೋ ಲಿಂಕ್ ಅನ್ನು ಇತರರಿಗೂ ಶೇರ್ ಮಾಡಿ, ಅವರಿಗೆ ಆರೋಗ್ಯ ಕರುಣಿಸಿದ ಸ್ವಲ್ಪವಾದರೂ ಪುಣ್ಯ ನಿಮಗೂ ಬರುತ್ತದೆ.

 ನೀವು ಈ ಅಫರ್ಮಶನ್ ದಿನಕ್ಕೆ 3 ಬಾರಿ ಹೇಳಿಕೊಂಳ್ಳುವುದರಿಂದಲೇ  ನಿಮ್ಮ ಆರೋಗ್ಯ ಸಮಸ್ಯಗೆ ಪರಿಹಾರ ಪಡೆಯಬಹುದು. ನಿಮಗೆ ಮತ್ತೆ ಬೇರೆ ರೀತಿಯ ಆರೋಗ್ಯ ಸಮಸ್ಯೆ ಬರದೇ ಶಾಶ್ವತ ಪರಿಹಾರ ಪಡೆಯಲು ನೀವು ಬಯಸಿದರೆ. ಕನಿಷ್ಠ ದಿನಕ್ಕೆ ಒಂದು ಗಂಟೆ ಆರೋಗ್ಯದ ಧ್ಯಾನ ಅಥವಾ ಇನ್ನಾವುದೇ ದ್ಯಾನ ಮಾಡುವ ಅಭ್ಯಾಸ ಮಾಡಿಕೊಂಡರೆ. ನೀವು ಬದುಕಿರುವ ವರೆಗು ಪೂರ್ಣ ಆರೋಗ್ಯ ದಿಂದ ಜೀವಿಸುವ ಸಾದ್ಯತೆ ಹೆಚ್ಚುಇದೆ ಮಿತ್ರರೇ.

ಹಾಗಾಗಿ, ನೀವು ನನ್ನ ಸಂಕಲ್ಪ ಧ್ಯಾನ ಅಥವಾ ಆರೋಗ್ಯ ಧ್ಯಾನದ ವಿಡಿಯೋ ನೋಡಿ ಕನಿಷ್ಟ ದಿನಕ್ಕೆ ಒಂದು ಗಂಟೆ ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.

 ಇದು ನನ್ನ ಯು ಟ್ಯೂಬ್ ಲಿಂಕ್:

https://youtube.com/channel/UCgDZumB4pM3kfqNjuLj2x3w

 ಮುಖ್ಯ ಸೂಚನೆ: ಬರೀ ಸಂಕಲ್ಪಗಳನ್ನು ಅಥವಾ ಅಫರ್ಮಶನ್  ಮಾಡಿಯೇ ನೀವು ಇಚ್ಚಿಸಿದ್ದನ್ನ ಪಡೆಯಬಹುದು, ಆದರೆ ಬಂದ ಆ ಆರೋಗ್ಯ ಅಥವಾ ಸಂಪತ್ತನ್ನು ಕಾಪಾಡಿಕೊಳ್ಳಲು ದಿನವೂ ಧ್ಯಾನ ಮಾಡುವುದು ತುಂಬಾ ಮುಖ್ಯ. ಧ್ಯಾನಕ್ಕೆ ಕರ್ಮವನ್ನು ಸುಡುವ ಶಕ್ತಿ ಇದೆ.

 ನೀವು ಆರೋಗ್ಯ ಪಡೆಯಲು ಧ್ಯಾನ ಮಾಡಲು ಇಚ್ಚಿಸಿದರೆ ನನ್ನ ಆರೋಗ್ಯದ ಅಫರ್ಮಶನ್  ಧ್ಯಾನ ಮತ್ತು  ಆರೋಗ್ಯದ ಸಂಕಲ್ಪ ಧ್ಯಾನ ಎರೆಡು ವಿಡಿಯೋಗಳನ್ನ ಅನುಸರಿಸಿ ಅವು ತುಂಬಾ ಪರಿಣಾಮಕಾರಿ ದ್ಯಾನಗಳು, ಅದರಲ್ಲಿ ನಿಮಗೆ ಇಷ್ಟವಾದ ಧ್ಯಾನವನ್ನು ದಿನಕ್ಕೆ ಕನಿಷ್ಠ ಎರೆಡು ಬಾರಿ ಮಾಡಿ.

 ನೀವು ಸಂಪತ್ತಿನ ಧ್ಯಾನ ಮಾಡಲು ಇಚ್ಚಿಸಿದರೆ ನನ್ನ ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನವನ್ನು ದಿನಕ್ಕೆ ಎರೆಡು ಬಾರಿ ಅಭ್ಯಾಸ ಮಾಡಿ.

ನೀವು ಈ ಅಫರ್ಮೇಶನ್ ಗಳನ್ನೂ ಓದಿಕೊಂಡು ಮಾಡಲು ಅಥವಾ ಬರೆದು ಕೊಳ್ಳಲು, ನಾನು ಈ ವಿಡಿಯೋ ಡೆಸ್ಕ್ರಿಪ್ಶೇನ್ ನಲ್ಲಿ ಕೊಟ್ಟಿರುವ ನನ್ನ ಬ್ಲಾಗ್ ಲಿಂಕ್ ಅನ್ನು ಕ್ಲಿಕ್ ಮಾಡಿ...

ಆರೋಗ್ಯದ ಸಂಕಲ್ಪ ಧ್ಯಾನ:

https://youtu.be/gMbHWJJoV_g

ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನ:

https://youtu.be/WGKHrg7az_E


ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇

http://askvishnudotcom.blogspot.com/2018/04/why-you-get-disease.html?m=1


 ಧನ್ಯವಾದಗಳು ಸ್ನೇಹಿತರೆ

 ಇಂತಿ ನಿಮ್ಮ

 ಜಿ ಸಿ ವಿ

 

Monday, February 1, 2021

ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬೇಕೆ?

 

ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬೇಕೆ?

ಇದನ್ನು ಓದಿ, ಈಕ್ಷಣ ದಲ್ಲೇ ನೀನು ಶಾಂತಿ ಮತ್ತು ಆನಂದ ಪಡೆಯುವುದು ಹೇಗೆ ಎಂದು ತಿಳಿಯಲು....

ಬಾಲ್ಯದಲ್ಲಿ ನೀನು ನೋಡಿದ್ದೆಲ್ಲ ಸೌಂದರ್ಯ. ನಿನಗೆ ಕಂಡಿದ್ದೆಲ್ಲ ಆಶ್ವರ್ಯ. ಆ ದಿನದಲ್ಲಿ ಸಂತೋಷಕ್ಕೆ ಮತ್ತು ಶಾಂತಿಗೆ ಕೊರತೆಯೇ ಇಲ್ಲ, ಅವು ಆನಂದದ ಪರಕಾಷ್ಠೆಯ ದಿನಗಳು. ಆದರೆ ಈಗ ನೀನು ಆ ಎಲ್ಲಾ ಸೌಂದರ್ಯ ಮತ್ತು ಆಶ್ಚರ್ಯ ಸಿಗುತ್ತಿಲ್ಲ, ಸಂತೋಷ ಮತ್ತು ಶಾಂತಿಯಿಂದ ಸಂಪೂರ್ಣ ವಂಚಿತನಾಗಿರುವೆ.

ಆನಂದಕ್ಕಿಲ್ಲಿದೆ ”ಟೋಲ್” ಅವರ ಸರಳ ಉಪಾಯ:

ಎಕ್ಹಾರ್ಟ್ ಟೋಲ್ ಅವರು ಪವರ್ ಆಪ್ನೌ (Power of Now) ಪುಸ್ತಕದಲ್ಲಿ ಹೀಗೆ ಹೇಳಿರುವರು...

ಮಾನಸಿಕ ಅಸಮತೋಲನ ಮತ್ತು ಅಶಾಂತಿಗೆ ಮುಖ್ಯ ಕಾರಣ ಎಲ್ಲಾ ಕಳೆದುಹೋದ ಘಟನೆಗಳ ಮರು ಸಂಗ್ರಹ ಮತ್ತು ಅತಿಯಾದ ಅದರ ಬಗೆಗಿನ ಯೋಚನೆ. ಇಲ್ಲಾ ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಮತ್ತು ಭಯ. ಹಾಗೂ ವರ್ತಮಾನದ(ಈಕ್ಷಣದ/ಈದಿನದ) ನಿರಾಕರಣೆಯಿಂದ ಉಂಟಾಗುತ್ತದೆ.

ಅಶಾಂತಿ, ಆತಂಕ, ಉದ್ವೇಗ, ಒತ್ತಡ, ಚಿಂತೆ - ಎಲ್ಲಾ ರೀತಿಯ ಭಯ - ಭವಿಷ್ಯದ ಬಗೆಗಿನ ಅತಿಯಾದ ಚಿಂತೆಯ ಕಾರಣದಿಂದ ಉಂಟಾಗುತ್ತದೆ ಮತ್ತು ಇವರು ವರ್ತಮಾನ ದಲ್ಲಿ ಇಲ್ಲದಿರುವುದು ಇದಕ್ಕೆ  ಮುಖ್ಯ ಕಾರಣ.

ಅಪರಾಧ ಭಾವನೆ, ವಿಷಾದ, ಅಸಮಾಧಾನ, ಕುಂದುಕೊರತೆಗಳ ಚಿಂತೆ, ದುಃಖ, ಕಹಿ, ಖಿನ್ನತೆ, ಮತ್ತು ಎಲ್ಲಾ ರೀತಿಯ ದ್ವೇಷಭಾವ, ಅಸೂಯೆ,  ಅತಿಯಾದ ಗತಕಾಲದ ಚಿಂತೆಯಿಂದ ಉಂಟಾಗುತ್ತವೆ ಮತ್ತು ಇವರು ವರ್ತಮಾನ ದಲ್ಲಿ ಇಲ್ಲದಿರುವುದು ಇದಕ್ಕೆ  ಮುಖ್ಯ ಕಾರಣ.

ಕಾರಣ ನಿನ್ನ ಮನಸ್ಸು ಇಲ್ಲಿ ಇಲ್ಲ. ಅದು ಕಳೆದು ಹೋದ ಕಾಲದ ಬಗ್ಗೆ ಕೊರಗುತ್ತಿದೆ, ಇಲ್ಲಾ ಮುಂದೆ ಏನಾಗುವುದೇ ಎನ್ನುವ ಭಯದಲ್ಲಿ ಚಿಂತಿಸುತ್ತಲಿದೆ.

ಬಾಲ್ಯದ ನಿನ್ನ ಆ ಸಂತೋಷಕ್ಕೆ ಮೂಲ ಕಾರಣ, ನೀನು ಇದ್ದಲ್ಲಿಯೇ ನಿನ್ನ ಮನಸ್ಸು ಇರುತ್ತಿತ್ತು.

ಒಮ್ಮೆ ನಿನ್ನ ಮನಸನ್ನು ಇಲ್ಲಿ, ಈಕ್ಷಣ ದಲ್ಲಿ ಇಟ್ಟು ನೋಡು, ಆಗ ನೀನಿರುವಲ್ಲೇ ಸ್ವರ್ಗ ಕಾಣುವುದು.

ಆಗ ನೀನು ನೋಡುವ ಬೀದಿ ಬದಿಯ ಹೂವುಗಳೇ ಕಂಗೊಳಿಸುವವು. ನೀನು ನೋಡುವ ಮರ ಗಿಡದಲ್ಲಿ ಪ್ರಕೃತಿ ಮಾತೆಯ ಹಸಿರು, ಜೀವ ತುಂಬಿದಂತೆ ಕಾಣುವುದು. ಪಕ್ಷಿಯ ಕೂಗು ನಿನ್ನ ಮೈ ಮರೆಸುವುದು, ನೀರಿನ ಜುಳು ಜುಳು ಶಬ್ದ ನಿನ್ನಲಿ ಜೀವ ಶಕ್ತಿಯ ಪ್ರೇರೇಪಿಸುವಿದು.

ನೀನು ಈಗ ಬರಿ, ಹಣ, ಅಧಿಕಾರ, ಹಂಕಾರದ ಮಧದಲ್ಲಿ, ಇಹದ ಸೌಂದರ್ಯ ಮತ್ತು ಸ್ವರ್ಗವನ್ನು ಕಾಣುಲಾಗುತ್ತಿಲ್ಲ.

ಮಕ್ಕಳು ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಡುವರು, ಚಿಟ್ಟೆ ಕಂಡರೆ, ಚಿಟ್ಟೆಯ ಹಿಂದೆ ಹೋಡುವರು. ಅವರು ಎಲ್ಲದರಲ್ಲೂ ಆ ಆಶ್ಚರ್ಯ ಮತ್ತು ಸೌಂದರ್ಯ ನೋಡಲು ಮುಖ್ಯ ಕಾರಣ ಅವರ ಮನಸು ಮತ್ತು ಅವರ ದೇಹದ ಜ್ಯೋತೆ ಇದೆ ಎಂದರೆ,  ಎರೆಡು ಒಂದೇ ಜಾಗದಲ್ಲಿ ಇವೆ.

ಆದರೆ ನಿನ್ನ ದೇಹ ಇಲ್ಲಿದೆ, ನಿನ್ನ ಮನಸ್ಸು ಎಲ್ಲೋ ಇದೆ. ನೀನು ಒಂದು 5 ನಿಮಿಷ ನೀನಿರುವಲ್ಲಿಯೇ ನಿನ್ನ ಮನಸು ಇಟ್ಟು ನೋಡು.

ನೀನು ನೋಡುವ ಪ್ರತಿ ನೋಟದಲ್ಲಿಯೂ ಸ್ವರ್ಗ ವನ್ನು ಕಾಣಲು ಸಾಧ್ಯ, ನೀನು ರೋಗದಿಂದ ಬಳಲುತ್ತಿದ್ದರು, ನಿನ್ನ ಮನಸ್ಸನ್ನು ನೀನು ಇರುವಲ್ಲಿಯೇ ಇಟ್ಟು ಕೊಂಡರೆ, ಆ ರೋಗದ ನೋವು ಸಹ ಮಾಯ ಆಗುವುದು. ಏಕೆಂದರೆ ರೋಗದ ನೋವಿಗಿಂತ, ನಿನಗೆ ಏನಾಗುವುದೋ ಎನ್ನುವ ಭವಿಶ್ಯದ ಭಯ ಹೆಚ್ಚು ನೋವು ಕೊಡುತ್ತಿರುತ್ತದೆ.

ರಾಷ್ಟ್ರ ಕವಿ ಕುವೆಂಪು ಅವರ ಜೀವನದ ಸತ್ಯ:

ಕುವೆಂಪು ಅವರು ಹೇಳಿದ ಹಾಗೆ, ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು ಎಂದು.  ಹಾಗೆಂದರೆ ನಿನ್ನ ಮೈ ನೀಲಿ ಬಣ್ಣ ಆಗುವಂತೆ ಎಂದು ಅರ್ಥ ಅಲ್ಲ, ನೀನು ಆಕಾಶವನ್ನು ನೋಡುವಾಗ ಭೂಥಕಾಲ ಮತ್ತು ಭವಿಷ್ಯತ್ ಕಾಲದಲ್ಲಿ ಇರದೇ ವರ್ತಮಾನ ದಲ್ಲಿ ಇದ್ದು ನೋಡು. ಎಂದರೆ ಎಲ್ಲಾ ಚಿಂತೆಗಳನ್ನು ಪಕ್ಕಕ್ಕೆ ಇಟ್ಟು ಆಕಾಶವನ್ನು ನೋಡು.

ಮತ್ತೆ ನಿನ್ನ ನೋಟದಲ್ಲಿ ಹೋಲಿಕೆ, ಮೇಲು, ಕೀಳು ಇಲ್ಲದಿರಲಿ, ನೋಡುವ ನೋಟದಲ್ಲೇ ನಿನ್ನ ಮೈ ಮನಸು ಎಲ್ಲವೂ ಮಗ್ನವಾಗಿರಲಿ. ಆಗ ಆ ನೋಟ 100%. ಆ ನೋಟ ಒಂದು ಮಗುವಿನ ನೋಟಕ್ಕೆ ಸಮವಾಗುವುದು.

ಅಂಥಾ ಮನಸಿಂದ ನೀನು ಆಕಾಶ ನೋಡಿದರೆ, "ಆಗ ನೀನು ಬೇರೆ ಆಕಾಶ ಬೇರೆ ಆಗಲು ಸಾಧ್ಯವಿಲ್ಲ", ನೀನೇ ಆಕಾಶ ಹಾಗಿಬಿಡುವೆ, ಆಕಾಶವೇ ನೀನಾಗುವುದು. ಈಗ ನೀನು ಮತ್ತೆ ಆ ಕುವೆಂಪು ರವರ ಸಾಲನ್ನು ಒಮ್ಮೆ ಓದು..."ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು"

ಕುವೆಂಪು ಅವರು ಹೀಗೆ ಹೇಳುವರು, ಕುಂಬಳಕಾಯಿ ಹೂವು ಬಹಳ ಸುಂದರ ಎಂದು. ಹೌದು ನೀನು ನೋಡುವ ನೋಟದಲ್ಲಿ 100% ಒಳಗೊಡರೆ, ಆಗ ಯಾವು ಹೂವಲ್ಲಾದರು ಸೌಂದರ್ಯ ಸಿಗಲು ಸಾಧ್ಯ.

ನೀನು ಮನಸ್ಸನ್ನು ಅಥವಾ ಯೋಚನೆಯನ್ನು ನೋಡುವ ನೋಟಕ್ಕೆ ಮಿಶ್ರಣ ಮಾಡಿದರೆ, ಆಗ ಅದು ರೋಸ್ ಇಲ್ಲ, ಕಮಲದ ಹೂವಿಗೆ ಹೋಲಿಸಿ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎನ್ನುವುದು. ನೀನು ನಿನ್ನ ಹೋಲಿಸುವ ಮನಸ್ಸನ್ನು ದೂರ ಮಾಡಿ ಸಂಪೂರ್ಣ ಮಜ್ಞತೆ ಯಲ್ಲಿ ನೋಡಿದರೆ, ರಸ್ತೆ ಬಡಿಯಲ್ಲಿ ಕಾಣುವ ಪ್ರತಿ ಹೂವಲ್ಲಿ ಮಹಾ ಸೌಂದರ್ಯ ನೋಡಲು ಸಾದ್ಯ. ಆದರೆ ನೆನಪಿರಲಿ, ನೀನು ನೋಡುವಾಗ ನೀನೆೇ ಆ ಹೂವಾಗಬೇಕು. ಹೇಗೆಂದರೆ: ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು ಎಂದ ಹಾಗೆ.

ಭಯ ಮತ್ತು ಚಿಂತೆಯ ಪರಿಣಾಮಗಳು:

ಅತಿಯಾದ ಚಿಂತೆ ನಿನ್ನನ್ನು ಸುಮ್ಮನೆ ಕೊರಗಿಸುವುದೇ ಹೊರತು, ಅದರಿಂದ ಯಾವ ಪ್ರಯೋಜನವಿಲ್ಲ. ಎಲ್ಲಾ ನೋವು ಕೊಡುವ ಮತ್ತು ಭಯಪಡಿಸುವ, ಚಿಂತೆಗಳಿಂದ ಹೊರಬಂದು, ವಾಸ್ತವದಲ್ಲಿ ಇರುವುದನ್ನ ಕಲಿಯಬೇಕು. ಆಗ ನೀನು ಇದ್ದಲ್ಲಿಯೇ ಸ್ವರ್ಗ್ ಕಾಣುವುದು.

ಜೀವನದಲ್ಲಿ ಎಲ್ಲವೂ ನೀನು ಅಂದುಕೊಂಡು ಹಾಗೆ ನಡೆಯವುದಿಲ್ಲ, ಅವು ಹೇಗೆ ಆದರೂ ಅದನ್ನು ದೈವ ಕೃಪೆ ಎಂದು ಭಾವಿಸುವುದು ಕಲಿತರೆ, ಆಗ ನೀನು ದುಃಖ ಪಡಲು ಸಾಧ್ಯವಿಲ್ಲ.

ಮುಖ್ಯವಾಗಿ, ವರ್ತಮಾನದಲ್ಲಿ ಮೈ ಮತ್ತು ಮನಸ್ಸನ್ನು ಇಟ್ಟು ಬದುಕಲು ಪ್ರಾರಂಭಿಸಿ. ಆಗ ನೀನು ತಿನ್ನುವ ಪ್ರತೀ ತುತ್ತ ನಿಮಗೆ ರಸಗವಳ ಆಗುವುದು, ನೀವು ಮುಟ್ಟುವ ಪ್ರತಿ ವಸ್ತು ಸುಂದರಾವಾಗಿ ಕಾಣುವುದು, ನೀನು ಕುಡಿಯುವ ಮತ್ತು ಸ್ನಾನ ಮಾಡುವ ನೀರು ನಿನಗೆ ಜೀವದ ಚಿಲುಮೆಯ ಪರಿಚಯ ಮಾಡಿಸುವುದು.

ಹೆಚ್ಚು ಹೆಚ್ಚು ಚಿಂತೆ ಮಾಡಿ ಯಾರು ಯಾವ ಪರಿಹಾರ ಪಡೆದ ಉದಾಹರಣೆ ಎಲ್ಲಾ, ಆದರೆ ಹೆಚ್ಚು ಹೆಚ್ಚು ಚಿಂತಿಸಿ ಮತ್ತು ಕೊರಗಿ, ರೋಗ ಗ್ರಸ್ತರಾದ, ಹುಚ್ಚರಾದ ಉದಾಹರಣೆಗಳು ಹೇರಳವಾಗಿ ಇವೆ.

ಭಯ ಮತ್ತು ಚಿಂತೆ ಆರೋಗ್ಯದಮೇಲೆ ಹೇಗೆ ಪರಿಣಾಮ ಬೀರುವವು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ: ಆರೋಗ್ಯದ ಗುಟ್ಟು

ಆನಂದದ ಕೀಲಿಕೈ:

ನೀನು ತಿನ್ನುವಾಗ ನಿನ್ನ ಗಮನ ತಿನ್ನುವುದರಮೇಲೆ ಇರಲಿ

ನೀನು ನಡೆಯುವಾಗ ನಿನ್ನ ಗಮನ ನಿನ್ನ ಹೆಜ್ಜೆಗಳ ಮೇಲೆ ಇರಲಿ

ನೀನು ಕೆಲಸ ಮಾಡುವಾಗ ನಿಮ್ಮ ಧ್ಯಾನ ಕೆಲಸದ ಮೇಲೆ ಇರಲಿ

ನೀನು ಮಾಡುವ ಯಾವುದೇ ಕೆಲಸ ಇರಲಿ ನಿನ್ನ ಧ್ಯಾನ ಅದರ ಮೇಲೆ ಇರಲಿ

ಕೆಲಸವೇ ಇಲ್ಲದಿರುವಾಗ ನಿನ್ನ ಧ್ಯಾನ ಉಸಿರಾಟದ ಮೇಲೆ ಇರಲಿ

ನೀನು ಹೊಮ್ಮೆ ಪರೀಕ್ಷಿಸಿ ನೋಡು: ನೀನು ಮೈ ಮತ್ತು ಮನಸು ಕೊಟ್ಟು ಒಂದು ಕೆಲಸದಲ್ಲಿ ತೊಡಗಿದ್ದಾಗ ಹಸಿವು ಆಗುವುದಿಲ್ಲ ಮತ್ತು ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ, ಆ ದಿನ ನಿನಗೆ ಆನಂದ ಮತ್ತು ಸಂತೋಷದ ದಿನವಾಗಿರುತ್ತದೆ.

ಅದೇ ನೀನು ಯಾವುದೊ ಚಿತೆಯಲ್ಲಿ ಬರಿ ಅರ್ಧ ದಿನ ಕೆಲಸ ಮಾಡಿದರು ನೀನು ಸಾಕಷ್ಟು ಧಣಿಯುವೆ ಕಾರಣ, ನಿನ್ನ ಮೈ ಕೆಲಸದಲ್ಲಿ ಮನಸು ಬೇರೆ ಯಾವುದೊ ಚಿಂತೆಯಲ್ಲಿ ಇರುವುದೇ ಇದಕ್ಕೆ ಮುಖ್ಯ ಕಾರಣ.

ಕೆಲವಾರು ಮಹಾ ಸಾದು ಸ್ವಾಮೀಜಿಗಳು ಸದಾ ಅಷ್ಟು ಖುಷಿ, ಸಂತೋಷ ಮತ್ತು ಶಾಂತಿ ಯಿಂದ ಇರಲು ಮುಖ್ಯ ಕಾರಣ, ಅವರು ಒಂದು ಸದಾ ಮನಸ್ಸನ್ನು ಉಸಿರಾಟದ ಮೇಲೆ ಇರಿಸಿರುವರು, ಇಲ್ಲ ಅವರು ಮಾಡುವ ಪೂಜೆ, ಕೆಲಸದ ಮೇಲೆ ಇಟ್ಟಿರುವರು.

ಮಗುವಿನಂತೆ ಆಕ್ಷಣದಲ್ಲಿ ಮೈ ಮತ್ತು ಮನಸ್ಸನ್ನು ಕೊಟ್ಟು ಬದುಕುವುದನ್ನು ಕಲೆಯಿರಿ. ಶಾಂತಿ ಮತ್ತು ಆನಂದದ ಜೀವನ ನಿಮ್ಮದಾಗಾಲಿ ಎಂದು ಆಶಿಸುವ, ನಿಮ್ಮ ಪ್ರೀತಿಯ- ಜಿಸಿವಿ.



ಲೇಖಕರು :  ವಿಷ್ಣುವರ್ಧನ ಜಿ ಸಿ


ಕೆರೆಯ ನೀರನ್ನು ಕೆರೆಗೆ ಚೆಲ್ಲಿ

ಲೇಖಕ ಹಕ್ಕುತ್ಯಾಗ:

ನಾನು ಸ್ಥಿರ ಮತ್ತು ಸಂಪೂರ್ಣ ರೋಬೋಟ್ ಅಲ್ಲ, ನಾನು ಸಾಮಾನ್ಯ ಮನುಷ್ಯ ಮತ್ತು ನನ್ನ ಬ್ಲಾಗ್ ಅಥವಾ  ಲೇಖನ ವಿರೋಧಾಭಾಸವಾಗಿರುತ್ತದೆ, ನಿರ್ದೇಶಕರು ಅನೇಕ ಚಲನಚಿತ್ರಗಳಿಗೆ ಒಂದೇ ವಿಷಯದ ಬಗ್ಗೆ ಅಥವಾ ವಿಭಿನ್ನ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಾರೆ. ನಾನು ನದಿಯಂತೆ ಹರಿಯುತ್ತೇನೆ, ನಾನು ನಿಜವಾಗಿಯೂ ಮರಳು, ಕಲ್ಲು, ಮರಗಳು, ಮನೆ ಇತ್ಯಾದಿಗಳನ್ನು ಹುಡುಕುವುದಿಲ್ಲ. ಸಾಗರವನ್ನು ತಲುಪುವುದು  ಮೂಲ ಉದ್ದೇಶ, ಸಾಗರ ತಲುಪುವ ಮುನ್ನ ದಾರಿಯಲ್ಲಿ ಕೆಲವರಿಗೆ ಉಪಯೋಗವಾಗುವದು ನನ್ನ ಗುರಿ. ನನ್ನ ಲೇಖನದ  ಯಾವುದೇ ವಿಧಾನಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ತಜ್ಞರ ಸಲಹೆಯನ್ನು ಸಂಪರ್ಕಿಸಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ನಿಮ್ಮ ಅನ್ವೇಷಣೆಯಲ್ಲಿ ನಿಮಗೆ ಸಹಾಯ ಮಾಡಲು ಸಾಮಾನ್ಯ ಮಾಹಿತಿಯನ್ನು ನೀಡುವುದು ನನ್ನ ಉದ್ದೇಶವಾಗಿದೆ. 

Wednesday, August 19, 2020

 ನಾನು ನನ್ನ ಹೆಸರು ಮಾಡಬೇಕು ಎನ್ನುವವರು ಒಮ್ಮೆ ಓದಿ...

ಜಗತ್ತು ರೈಲ್ವೆ ನಿಲ್ದಾಣದಲ್ಲಿ ವೈಟಿಂಗ್ ರೂಮ್ ಇದ್ದಂತೆ,   ಎಂಬುದು  ಸಾಮಾನ್ಯ ನಂಬಿಕೆ; ಅದು ನಿಮ್ಮ ಮನೆಯಲ್ಲ. ನೀವು ಶಾಶ್ವತವಾಗಿ ವೈಟಿಂಗ್ ರೂಮ್ ನಲ್ಲಿ  ಉಳಿಯಲು ಹೋಗುವುದಿಲ್ಲ. ವೈಟಿಂಗ್ ರೂಮ್ ನಲ್ಲಿ ಯಾವುದೂ ನಿಮಗೆ ಸೇರಿಲ್ಲ-ಪೀಠೋಪಕರಣಗಳು, ಗೋಡೆಯ ಮೇಲಿನ ವರ್ಣಚಿತ್ರಗಳು. . . - ನೀವು ವರ್ಣಚಿತ್ರವನ್ನು ನೋಡುತ್ತೀರಿ, ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತೀರಿ, ನೀವು ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತೀರಿ - ಆದರೆ ಯಾವುದೂ ನಿಮಗೆ ಸೇರಿಲ್ಲ. ನೀವು ಕೆಲವು ನಿಮಿಷಗಳ ಕಾಲ, ಅಥವಾ ಕೆಲವು ಗಂಟೆಗಳ ಕಾಲ ಇರುವಿರಿ, ನಂತರ ನೀವು ಹೋಗುತ್ತೀರಿ.

ಹೌದು,  ವೈಟಿಂಗ್ ರೂಮ್ಗೆ ನಿಮ್ಮೊಂದಿಗೆ ಏನು ತಂದಿದ್ದೀರಿ, ಅದನ್ನೇ ನೀವು ತೆಗೆದುಕೊಂಡು ಹೋಗುತ್ತೀರಿ; ನೀವು ಜಗತ್ತಿಗೆ ಏನು ತಂದಿದ್ದೀರಿ?  ಅದೇ ನಿಮ್ಮದು. ಕಾಯುವ ಸಮಯ ಸೆಕೆಂಡುಗಳು, ನಿಮಿಷಗಳು, ಗಂಟೆಗಳು, ದಿನಗಳಲ್ಲಿ ಇರಬಹುದು, ಅದು ವರ್ಷಗಳಲ್ಲಿರಬಹುದು; ಆದರೆ ನೀವು ಏಳು ಗಂಟೆ ಅಥವಾ ಎಪ್ಪತ್ತು ವರ್ಷ ಇರುವಿರೋ ಗೊತ್ತಿಲ್ಲ. ನೀವು ಹೋಗಲೇ ಬೇಕು. 

 ಎಪ್ಪತ್ತು ವರ್ಷಗಳಲ್ಲಿ, ನೀವು ಕೇವಲ ವೈಟಿಂಗ್ ರೂಮ್ ನಲ್ಲಿದ್ದೀರಿ ಎಂಬುದನ್ನು ಮರೆಯಬಹುದು. ಬಹುಶಃ ನೀವು ಮಾಲೀಕರಾಗಿದ್ದೀರಿ ಎಂದು ನೀವು ಯೋಚಿಸಲು ಪ್ರಾರಂಭಿಸಬಹುದು, ನಿಮ್ಮ ಹೆಸರನ್ನು ವೈಟಿಂಗ್ ರೂಮ್ನಲ್ಲಿ ಬರೆಯಲು ನೀವು ಪ್ರಾರಂಭಿಸಬಹುದು.

ಜನರಿದ್ದಾರೆ-ನಾನು ಅದನ್ನು ನೋಡಿದ್ದೇನೆ: ಜನರು  ವೈಟಿಂಗ್ ರೂಮ್ ಸ್ನಾನಗೃಹಗಳಲ್ಲಿ ತಮ್ಮ ಹೆಸರುಗಳನ್ನು ಬರೆದಿದ್ದಾರೆ.  ವೈಟಿಂಗ್ ರೂಮ್ ಪೀಠೋಪಕರಣಗಳಲ್ಲಿ ಜನರು ತಮ್ಮ ಹೆಸರನ್ನು ಕೆತ್ತಿದ್ದಾರೆ. ಮತ್ತೆ ಅದೇ  ವೈಟಿಂಗ್ ರೂಮ್ ಗೆ ಬೇರೆಯವರು ಬರುವರು, ಅವರ ನಿಮ್ಮ ಹೆಸರನ್ನು ಹಳಿಸಿ, ಅವರ ಹೆಸರನ್ನು ಕೆತ್ತುವರು. ಇದು ಮೂರ್ಖತನ  ಎಂದು ತೋರುತ್ತದೆ ಅಲ್ಲವೇ, ಆದರೆ ಇದು ಜಗತ್ತಿನಲ್ಲಿ ಎಲ್ಲರೂ ಮಾಡುವ ಕೆಲಸಕ್ಕೆ ಸರಿಯಾಗಿ ಹೋಲುತ್ತದೆ.

ಪ್ರಾಚೀನ ಜೈನ ಗ್ರಂಥಗಳಲ್ಲಿ ಬಹಳ ಮಹತ್ವದ ಕಥೆಯಿದೆ. ಭಾರತದಲ್ಲಿ ಯಾರಾದರೂ ಇಡೀ ಪ್ರಪಂಚ ಆಳಲು ಸಾಧ್ಯವಾದರೆ ಅವರನ್ನು ಚಕ್ರವರ್ತಿ ಎಂದು ಕರೆಯಲಾಗುತ್ತದೆ ಎಂದು ನಂಬಲಾಗಿದೆ. ಪ್ರಾಚೀನ ಭಾರತದಲ್ಲಿ ಇದು ಅನಗತ್ಯ ಹೋರಾಟ ಮತ್ತು ಹಿಂಸಾಚಾರವನ್ನು ತಪ್ಪಿಸುವ ಒಂದು ಮಾರ್ಗವಾಗಿತ್ತು: ಒಂದು ರಥ, ಚಿನ್ನದ ರಥ, ಬಹಳ ಮೌಲ್ಯಯುತವಾದ, ಸುಂದರವಾದ ಮತ್ತು ಬಲವಾದ ಕುದುರೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಚಲಿಸುತ್ತವೆ. ಅದು ಜಗತ್ತನ್ನು ಗೆಲ್ಲುವ ಅತ್ಯುತ್ತಮ ಮಾರ್ಗವಾಗಿತ್ತು. ಆದ್ದರಿಂದ ಪ್ರತಿಯೊಬ್ಬ ರಾಜನಿಗೂ ಚಕ್ರವರ್ತಿ ಆಗಬೇಕೆಂಬ ಆಸೆ ಇತ್ತು.

ಕಥೆಯೆಂದರೆ, ಒಬ್ಬ ಮನುಷ್ಯನು ಚಕ್ರವರ್ತಿ ಆಗಿಬಿಟ್ಟನು - ಮತ್ತು ಸಾವಿರಾರು ವರ್ಷಗಳಲ್ಲಿ ಒಮ್ಮೆ ಮಾತ್ರ ಮನುಷ್ಯನು ಚಕ್ರವರ್ತಿಯಾಗುತ್ತಾನೆ ಎನ್ನುವ ನಂಬಿಕೆ ಅವರದು. ನಾನು ನಿಮಗೆ ಕಥೆಯನ್ನು ಹೇಳಲು ಹೊರಟಿರುವ ಈ ವ್ಯಕ್ತಿ ಚಕ್ರವರ್ತಿ ಆದನು.

ಚಕ್ರವರ್ತಿ ಸಾತ್ತಾಗ ಅವನನ್ನು ಸ್ವರ್ಗದಲ್ಲಿ ಬಹಳ ಸಂತೋಷದಿಂದ ಸ್ವೀಕರಿಸಲಾಗುತ್ತದೆ ಮತ್ತು ಅವನನ್ನು ವಿಶೇಷ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.

ಜೈನ ಪುರಾಣಗಳಲ್ಲಿ, ಸ್ವರ್ಗದಲ್ಲಿ ಹಿಮಾಲಯಕ್ಕೆ ಸಮಾನಾಂತರ ಪರ್ವತವಿದೆ. ಹಿಮಾಲಯವು ಕೇವಲ ಬಂಡೆಗಳು ಮತ್ತು ಭೂಮಿ ಮತ್ತು ಮಂಜುಗಡ್ಡೆಯಿಂದ ಮಾಡಲ್ಪಟ್ಟಿದೆ. ಸ್ವರ್ಗದಲ್ಲಿರುವ ಹಿಮಾಲಯಕ್ಕೆ ಸಮಾನಾಂತರವಾಗಿ ಸುಮೇರು ಎಂದು ಕರೆಯಲಾಗುತ್ತದೆ. ಸುಮೇರು ಎಂದರೆ ಅಂತಿಮ ಪರ್ವತ: ಅದಕ್ಕಿಂತ ಹೆಚ್ಚೇನೂ ಇರಲಾರದು, ಅದಕ್ಕಿಂತ ಉತ್ತಮವಾಗಿ ಏನೂ ಇರಲು ಸಾಧ್ಯವಿಲ್ಲ. ಅದು ಘನ ಬಂಡೆಗಳ ಬದಲಿಗೆ; ಚಿನ್ನ, ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳ ಪರ್ವತ.

ಚಕ್ರವರ್ತಿ ಸತ್ತಾಗ ಅವನನ್ನು ಸುಮೇರು ಪರ್ವತಕ್ಕೆ ಕರೆದೊಯ್ಯಲಾಗುತ್ತದೆ. ಅದು ಅಪರೂಪದ ಅವಕಾಶ; ಅದು ಸಾವಿರಾರು ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ಖಂಡಿತವಾಗಿಯೂ ಈ ವ್ಯಕ್ತಿಯು ಸುಮೇರುನಲ್ಲಿ ತನ್ನ ಹೆಸರನ್ನು ಬರೆಯಲು ಹೊರಟಿದ್ದಾನೆ ಎಂದು ಅಗಾಧವಾಗಿ ಊಹಿಸಿದ್ದನು. ಅದು ಎಲ್ಲಾ ಮಹಾನ್ ವ್ಯಕ್ತಿಗಳ ಅಂತಿಮವಾಗಿದೆ, ಮತ್ತು ಎಲ್ಲಾ ಶ್ರೇಷ್ಠರ ಕ್ಯಾಟಲಾಗ್ ಆಗಿರುತ್ತದೆ. ಈ ಚಕ್ರವರ್ತಿ ಸೂಪರ್‌ಮೆನ್‌ಗಳ ವಂಶಕ್ಕೆ ಸೇರುತ್ತಾನೆ.

ದ್ವಾರಪಾಲಕನು ಅವನ ಹೆಸರನ್ನು ಕೆತ್ತನೆ ಮಾಡಲು ಉಪಕರಣಗಳನ್ನು ಕೊಟ್ಟನು. ಅವರ ಚಕ್ರವರ್ತಿ ಸಾಯುತ್ತಿರುವ ಕಾರಣ ಆತ್ಮಹತ್ಯೆ ಮಾಡಿಕೊಂಡ ತನ್ನ ಕೆಲವು ಜನರನ್ನು ಅವನೊಂದಿಗೆ ಕರೆದೊಯ್ಯಲು ಬಯಸಿದನು – [ಅವರು ಅವನು ಇಲ್ಲದೆ ಬದುಕಲು ಇಷ್ಟ ಪಡದವರು] ಅವನ ಹೆಂಡತಿ, ಪ್ರಧಾನ ಮಂತ್ರಿ, ಕಮಾಂಡರ್ ಇನ್ ಚೀಫ್: ಅವನ ಸುತ್ತ ಇದ್ದ ಎಲ್ಲ ಮಹಾನ್ ವ್ಯಕ್ತಿಗಳು ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರು, ಆದ್ದರಿಂದ ಅವರು ಅವನೊಂದಿಗೆ ಬಂದಿದ್ದರು.

ದ್ವಾರಪಾಲಕನು ತನ್ನ ಹೆಸರನ್ನು ಕೆತ್ತನೆ ಮಾಡಲು ಅವರೆಲ್ಲರೂ ಬರಲಿ ಎಂದು ಚಕ್ರವರ್ತಿ ಬಯಸಿದನು, ಏಕೆಂದರೆ ನೀವು ಏಕಾಂಗಿಯಾಗಿ ಹೋಗಿ ನಿಮ್ಮ ಹೆಸರನ್ನು ಕೆತ್ತಿದರೆ ಮತ್ತು ನೋಡಲು ಯಾರೂ ಇಲ್ಲದಿದ್ದಲ್ಲಿ ಏನಿದೆ ಸಂತೋಷ? -ಆದರೆ ನಿಜವಾದ ಸಂತೋಷವೆಂದರೆ ಇಡೀ ಜಗತ್ತು ನೋಡಬೇಕು.

ದ್ವಾರಪಾಲಕ, "ನೀವು ನನ್ನ ಸಲಹೆಯನ್ನು ಆಲಿಸಿರಿ, ಏಕೆಂದರೆ ಇದು ನನ್ನ ಆನುವಂಶಿಕ ವೃತ್ತಿಯಾಗಿದೆ. ನನ್ನ ತಂದೆ ದ್ವಾರಪಾಲಕ, ತಾತ  ದ್ವಾರಪಾಲಕ; ಶತಮಾನಗಳಿಂದ ನಾವು ಸುಮೇರು ಪರ್ವತಕ್ಕೆ ದ್ವಾರಪಾಲಕರಾಗಿದ್ದೇವೆ. ನನ್ನ ಸಲಹೆಯನ್ನು ಆಲಿಸಿ: ಅವರನ್ನು ನಿಮ್ಮೊಂದಿಗೆ ಕರೆದೊಯ್ಯಬೇಡಿ.  ಇಲ್ಲವಾದರೆ ನೀವು ಪಶ್ಚಾತ್ತಾಪ ಪಡುತ್ತೀರಿ." ಚಕ್ರವರ್ತಿಗೆ ಅರ್ಥವಾಗಲಿಲ್ಲ, ಆದರೂ ಅವನ ಸಲಹೆಯನ್ನು  ಚಕ್ರವರ್ತಿಗೆ ಕೇಳಬೇಕೆನ್ನಿಸಿತು.

 ದ್ವಾರಪಾಲಕನು, "ನೀವು ಇನ್ನೂ ಅವರಿಗೆ ತೋರಿಸಬೇಕು ಎಂದು ಬಯಸಿದರೆ, ಮೊದಲು ನಿಮ್ಮ ಹೆಸರನ್ನು ಕೆತ್ತನೆ ಮಾಡಿ; ನಂತರ ಹಿಂತಿರುಗಿ ಮತ್ತು ನೀವು ಬಯಸಿದರೆ ಅವರನ್ನು ನಿಮ್ಮೊಂದಿಗೆ ಕರೆದೊಯ್ಯಿರಿ. ಆಗ ನಿಮ್ಮ ಮನಸ್ಸನ್ನು ಬದಲಾಯಿಸಲು ಯಾವುದೇ ಅವಕಾಶವಿರುವುದಿಲ್ಲ. ಅವರು ನಿಮ್ಮೊಂದಿಗೆ ಇರುತ್ತಾರೆ. ನೀವು ಒಬ್ಬಂಟಿಯಾಗಿ ಹೋಗಿ."

ಚಕ್ರವರ್ತಿ, "ಅದು ಒಳ್ಳೆಯದು. ನಾನು ಒಬ್ಬಂಟಿಯಾಗಿ ಹೋಗುತ್ತೇನೆ, ನನ್ನ ಹೆಸರನ್ನು ಕೆತ್ತನೆ ಮಾಡುತ್ತೇನೆ, ಹಿಂತಿರುಗಿ, ಮತ್ತು ನಿಮ್ಮೆಲ್ಲರನ್ನೂ ಕರೆದೊಯ್ಯುತ್ತೇನೆ. ಎಂದು ಹೊರಟನು"

ದ್ವಾರಪಾಲಕ ಹೇಳಿದನು. "ನಾನು ಅದಕ್ಕೆ ಸಂಪೂರ್ಣವಾಗಿ ಒಪ್ಪುತ್ತೇನೆ"

ಚಕ್ರವರ್ತಿ ಹೋದನು ಮತ್ತು ಸಮೇರು ಪರ್ವತ ಸಾವಿರಾರು ಸೂರ್ಯನ ರಶ್ಮಿಯಿಂದ ಹೊಳೆಯುತ್ತಿರುವುದನ್ನು ಅವನು ನೋಡಿದನು-ಏಕೆಂದರೆ ಸ್ವರ್ಗದಲ್ಲಿ ಕೇವಲ ಒಂದು ಸೂರ್ಯ ಇರುವಿದಿಲ್ಲ - ಸಾವಿರಾರು ಸೂರ್ಯನನ್ನು ಹೊಂದುವಷ್ಟು ಮತ್ತು ಹಿಮಾಲಯಕ್ಕಿಂತ ದೊಡ್ಡದಾದ ಚಿನ್ನದ ಪರ್ವತ ಅದು! ಅವನಿಗೆ ಒಂದು ಕ್ಷಣ ಕಣ್ಣು ತೆರೆಯಲಾಗಲಿಲ್ಲ, ಅದು ತುಂಬಾ ಹೊಳೆಯುತ್ತಿತ್ತು. ತದನಂತರ ಅವನು ಒಂದು ಜಾಗವನ್ನು, ಸರಿಯಾದ ಜಾಗವನ್ನು ಹುಡುಕಲಾರಂಭಿಸಿದನು, ಆದರೆ ಅವನು ತುಂಬಾ ಗೊಂದಲಕ್ಕೊಳಗಾದ : ಅಲ್ಲಿ ಹೆಸರು ಕೆತ್ತಲು ಸ್ಥಳವಿಲ್ಲ; ಇಡೀ ಪರ್ವತವನ್ನು ಹೆಸರುಗಳಿಂದ ಆಗಲೇ ಕೆತ್ತಲಾಗಿದೆ.

ಅವನ ಕಣ್ಣುಗಳನ್ನು ನಂಬಲಾಗಲಿಲ್ಲ. ಮೊದಲ ಬಾರಿಗೆ ಅವನಿಗೆ ಅರಿವಾಯಿತು. ಇಲ್ಲಿಯವರೆಗೆ ಅವನು ಸಾವಿರಾರು ವರ್ಷಗಳಲ್ಲಿ ಒಮ್ಮೆ ನಡೆಯುವ ಸೂಪರ್‌ಮ್ಯಾನ್ ಎಂದು ಯೋಚಿಸುತ್ತಿದ್ದ. ಆದರೆ ಸಮಯವು ಶಾಶ್ವತ, ಸಾವಿರಾರು ವರ್ಷಗಳಲ್ಲಿ ಆಗಲೇ ಅನೇಕ ಚಕ್ರವರ್ತಿಗಳು ಬಂದು ಹೋಗಿದ್ದಾರೆ. ಆ ದೊಡ್ಡ ಪರ್ವತದ ಮೇಲೆ ಅವನ ಸಣ್ಣ ಹೆಸರನ್ನು ಬರೆಯಲು ಸ್ಥಳವಿಲ್ಲ.

ಅವನು ಹಿಂತಿರುಗಿ ಬಂದನು, ಮತ್ತು ಅವನಿಗೆ ದ್ವಾರಪಾಲಕನ ಸಲಹೆ ಚೆನ್ನಾಗಿದೆ ಎನ್ನಿಸಿತು. ತನ್ನ ಹೆಂಡತಿ ಮತ್ತು ಅವನ ಕಮಾಂಡರ್ ಇನ್ ಚೀಫ್ ಮತ್ತು ಅವನ ಪ್ರಧಾನ ಮಂತ್ರಿ ಮತ್ತು ಇತರ ಆತ್ಮೀಯ ಸ್ನೇಹಿತರನ್ನು ಕರೆದೊಯ್ಯದಿರುವುದು ಸರಿಯಾದ ನಿರ್ಧಾರ ಎಂದು ಅವನು ಅರ್ಥಮಾಡಿಕೊಂಡನು. ಅವರು ಈ ಪರಿಸ್ಥಿತಿಯನ್ನು ನೋಡದಿರುವುದು ಒಳ್ಳೆಯದು. ಏಕೆಂದರೆ, ತಮ್ಮ ಚಕ್ರವರ್ತಿ ಅಪರೂಪದ ಜೀವಿ ಎಂದು ಅವರು ಇನ್ನೂ ನಂಬುತ್ತಿದ್ದಾರೆ.

ಅವನು ದ್ವಾರಪಾಲಕನನ್ನು ಪಕ್ಕಕ್ಕೆ ಕರೆದೊಯ್ದು ಹೇಳಿದನು. -ಆ ಪರ್ವತದಲ್ಲಿ ಸ್ಥಳವಿಲ್ಲ ಎಂದು!

ದ್ವಾರಪಾಲಕ ಹೇಳಿದನು. "ಅದನ್ನೇ ನಾನು ನಿಮಗೆ ಹೇಳುತ್ತಿದ್ದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಕೆಲವು ಹೆಸರುಗಳನ್ನು ಅಳಿಸಿಹಾಕುವುದು ಮತ್ತು ನಿಮ್ಮ ಹೆಸರನ್ನು ಬರೆಯುವುದು. ಅದನ್ನೇ ಎಲ್ಲರೂ ಮಾಡುತ್ತಿದ್ದಾರೆ; ನನ್ನ ಇಡೀ ಜೀವನದಲ್ಲಿ ನಾನು ಇದನ್ನು ನೋಡುತ್ತಿದ್ದೇನೆ. ನನ್ನ ತಂದೆ ಹೇಳುತ್ತಿದ್ದರು, ನಮ್ಮ ತಾತನ ಕಾಲದಲ್ಲೇ ಪರ್ವತದ ಕಾಲಿ ಸ್ಥಳ ನೋಡಿಲ್ಲ ಎಂದು.

"ಚಕ್ರವರ್ತಿಗಳು  ಬಂದಾಗಲೆಲ್ಲಾ ಅವರು ಕೆಲವು ಹೆಸರುಗಳನ್ನು ಅಳಿಸಿ ತಮ್ಮ ಹೆಸರನ್ನು ಬರೆಯಬೇಕಾಗಿತ್ತು. ಆದ್ದರಿಂದ ಇದು ಚಕ್ರವರ್ತಿಗಳ ಸಂಪೂರ್ಣ ಇತಿಹಾಸವಲ್ಲ. ಅನೇಕ ಬಾರಿ ಅದನ್ನು ಅಳಿಸಿಹಾಕಲಾಗಿದೆ, ಹಲವು ಬಾರಿ ಅದನ್ನು ಕೆತ್ತಲಾಗಿದೆ. ನೀವು ನಿಮ್ಮ ಕೆಲಸವನ್ನು ಮಾಡಿ, ತದನಂತರ ನಿಮ್ಮ ಸ್ನೇಹಿತರನ್ನು ಕರೆದು ತೋರಿಸಲು ನೀವು ಬಯಸಿದರೆ ಅವರನ್ನು ಒಳಗೆ ಕರೆತರಬಹುದು.

ಚಕ್ರವರ್ತಿ, "ಇಲ್ಲ, ನಾನು ಅವರಿಗೆ ತೋರಿಸಲು ಬಯಸುವುದಿಲ್ಲ ಮತ್ತು ನನ್ನ ಹೆಸರನ್ನು ಸಹ ಬರೆಯಲು ಬಯಸುವುದಿಲ್ಲ. ಅದಕ್ಕೆ ಅರ್ಥವೇ ಇಲ್ಲ? -ಒಂದು ದಿನ ಯಾರಾದರೂ ಬಂದು ಅದನ್ನು ಅಳಿಸಿಹಾಕುತ್ತಾರೆ.

"ನನ್ನ ಇಡೀ ಜೀವನವು ಸಂಪೂರ್ಣವಾಗಿ ಅರ್ಥಹೀನವಾಗಿದೆ. ಇದು ನನ್ನ ಏಕೈಕ ಆಶಯವಾಗಿತ್ತು, ಸುಮೇರು, ಸ್ವರ್ಗದ ಚಿನ್ನದ ಪರ್ವತವು ನನ್ನ ಹೆಸರನ್ನು ಹೊಂದಲಿದೆ ಎನ್ನುವುದು. ಇದಕ್ಕಾಗಿ ನಾನು ಬದುಕಿದ್ದೇನೆ, ಇದಕ್ಕಾಗಿ ನಾನು ನನ್ನ ಜೀವನವನ್ನು ಸವೆಸಿದ್ದೇನೆ; ಇದಕ್ಕಾಗಿ ಇಡೀ ಜಗತ್ತನ್ನು ಹಿಂಸಿಸಿದೆ. ಬೇರೆ ಯಾರಾದರೂ ನನ್ನ ಹೆಸರನ್ನು ಅಳಿಸುವುದಾದರೆ, ಬರೆಯುವುದರಲ್ಲಿ ಅರ್ಥವೇನಿದೆ? ನಾನು ಅದನ್ನು ಬರೆಯುವುದಿಲ್ಲ ಎಂದ"

ದ್ವಾರಪಾಲಕ ನಕ್ಕನು.

ಚಕ್ರವರ್ತಿ, ನೀವು ಯಾಕೆ ನಗುತ್ತಿದ್ದೀರಿ?

ದ್ವಾರಪಾಲಕ, "ಇದು ವಿಚಿತ್ರವಾದದ್ದು, ಏಕೆಂದರೆ ಇದನ್ನೂ ನಾನು ನನ್ನ ಅಜ್ಜನ ಕಾಲದಿಂದ ಕೇಳುತ್ತಿದ್ದೇನೆ - ಚಕ್ರವರ್ತಿಗಳು ಬರುತ್ತಾರೆ, ಮತ್ತು ಇಡೀ ಕಥೆಯನ್ನು ನೋಡಿ, ಹಿಂದಕ್ಕೆ ಹೋಗುವರು; ಅವರು ತಮ್ಮ ಹೆಸರುಗಳನ್ನು ಬರೆಯುವುದಿಲ್ಲ. ನೀವು ಹೊಸಬರಲ್ಲ: ಯಾರಾದರೂ  ಸ್ವಲ್ಪ ಬುದ್ಧಿವಂತಿಕೆ ಇದ್ದರು ಅವರು ಸಹಾ ಇದೇ ಮಾಡುತ್ತಾರೆ."

ಈ ಇಡೀ ಜಗತ್ತಿನಲ್ಲಿ ನೀವು ಏನು ಗಳಿಸಬಹುದು? ನಿಮ್ಮೊಂದಿಗೆ ಏನು ತೆಗೆದುಕೊಂಡು ಹೋಗಬಹುದು? ನಿಮ್ಮ ಹೆಸರು, ನಿಮ್ಮ ಪ್ರತಿಷ್ಠೆ, ನಿಮ್ಮ ಗೌರವ? ನಿಮ್ಮ ಹಣ, ನಿಮ್ಮ ಶಕ್ತಿ? ನಿಮ್ಮ ಆಸ್ತಿ? ನೀವು ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಲ್ಲವನ್ನೂ ಇಲ್ಲಿಯೇ  ಬಿಡಬೇಕಾಗುತ್ತದೆ. ಮತ್ತು ಆ ಕ್ಷಣದಲ್ಲಿ ನೀವು ಹೊಂದಿದ್ದದ್ದೆಲ್ಲ ನಿಮ್ಮದಲ್ಲ ಎಂದು ನೀವು ಅರ್ಥಮಾಡಿಕೊಳ್ಳುವಿರಿ;

ಆಸ್ತಿ ಮಾಡುವ, ಹೆಸರು ಮಾಡುವ ಕಲ್ಪನೆಯೇ ತಪ್ಪಾಗಿದೆ. ಮತ್ತು ಇದರ ಬರದಲ್ಲಿ ನೀವು ಭ್ರಷ್ಟರಾಗುತ್ತೀರಿ.

ಆಸ್ತಿ ಹೆಚ್ಚಿಸಲು -ಹೆಚ್ಚು ಹಣವನ್ನು ಹೊಂದಲು, ಹೆಚ್ಚಿನ ಶಕ್ತಿಯನ್ನು ಹೊಂದಲು, ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳಲು-ನೀವು ಸುಳ್ಳು ಹೇಳುತ್ತಿದ್ದೀರಿ, ನೀವು ಅಪ್ರಾಮಾಣಿಕರಾಗಿದ್ದೀರಿ. ನೀವು ನೂರಾರು ಮುಖಗಳನ್ನು ಹೊಂದಿದ್ದೀರಿ. ನೀವು ಯಾರಿಗಾದರೂ ಅಥವಾ ನಿಮಗಾಗಿ ಒಂದೇ ಒಂದು  ಕ್ಷಣವೂ ನಿಜವಾಗಿ ಬದುಕುತ್ತಿಲ್ಲ; ನೀವು ಅತಿಯಾದ ಅಸ್ತಿ ಮತ್ತು ಪ್ರತಿಷ್ಠೆಯನ್ನು ಪ್ರಾಮಾಣಿಕತೆ ಮತ್ತು ಸತ್ಯದ ದಾರಿಯಲ್ಲಿ ಮಾಡುಲು ಸಾಧ್ಯವಿಲ್ಲ.

ಆಸ್ತಿ, ಯಶಸ್ಸು, ಖ್ಯಾತಿ ಇಲ್ಲದೆ, ನೀವು ಯಾರು? ನಿಮ್ಮ ಹೆಸರು, ನಿಮ್ಮ ಖ್ಯಾತಿ, ನಿಮ್ಮ ಪ್ರತಿಷ್ಠೆ, ನಿಮ್ಮ ಶಕ್ತಿ ಇವುಗಳನ್ನು ಹೊರತುಪಡಿಸಿ, ನೀವು ಯಾರು? ನಿಮಗೆ ಗೊತ್ತಿಲ್ಲ! ಆದ್ದರಿಂದ ನೀವು ಈ ಆಸ್ತಿ ಅಂತಸ್ತು ಗುರುತಾಗಿ ಮಾಡಿಕೊಂಡಿರುವಿರಿ. ಅದು ನೀವಲ್ಲ. ಅದು ನಿಮ್ಮ ಅಹಂ ಮಾತ್ರ.

ಆದ್ದರಿಂದ ನೀವು ಇಲ್ಲಿ ಮತ್ತು ಅಲ್ಲಿ ಓಡುತ್ತೀರಿ. ನಿಜವಾದ ಜೀವನದ ಅರ್ಥ ತಿಳಿದರೆ ನೀವು ಓಡುವುದು ಬಿಟ್ಟು, ಜೀವಿಸುವುದು ಕಲಿಯುವಿರಿ.

ಜಗತ್ತು ಯಾರನ್ನೂ ನೆನಪಿಟ್ಟುಕೊಳ್ಳುವುದಿಲ್ಲ, ನಿಮ್ಮ ಹೆಸರನ್ನು ಕೆತ್ತನೆ ಮಾಡುವ ಪ್ರಯತ್ನ ಬಿಡಿ, ಯಾರಾದರೂ ನಿಮ್ಮ ಹೆಸರನ್ನು ಅಳಿಸಿಹಾಕುತ್ತಾರೆ ಮತ್ತು ಅವರ ಹೆಸರುಗಳನ್ನು ಬರೆಯುತ್ತಾರೆ!!!

ಸರಳತೆ ಮತ್ತು ದೃಢತೆಯ ಜೀವನವನ್ನು ಕಲಿಯಿರಿ. ಆಗ ಮಾತ್ರ  ನೀವು ಪ್ರೀತಿ, ದಯೆ, ಶಾಂತಿ ಮತ್ತು ಸಂತೋಷದ ಜೀವನ ನಡೆಸಲು ಸಾಧ್ಯ.

ಮೂಲ: ನನ್ನ ಈ ಬ್ಲಾಗ್ / ಅಂಕಣದ ಸಂಪೂರ್ಣ ಬರಹ ಓಶೋ ರವರ ಇಂಗ್ಲಿಷ್ ಪುಸ್ತಕ: Courage (ಕರೇಜ್) ನ ಕಥೆಗಳ ಕನ್ನಡ ಅನುವಾದ ಮಾತ್ರ.  ನೀವು ಜೀವನವನ್ನು ಇನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಬಯಸಿದರೆ, ಈ Courage ಪುಸ್ತಕವನ್ನು ಓದಿ [ಇದು ಆಂಗ್ಲದಲ್ಲಿದೆ], ಅದು ನಿಮ್ಮ ಭಯವನ್ನು ದೂರಮಾಡುವುದು.  

ಲೇಖಕರು :  ವಿಷ್ಣುವರ್ಧನ ಜಿ ಸಿ


ಕೆರೆಯ ನೀರನ್ನು ಕೆರೆಗೆ ಚೆಲ್ಲಿ

ಲೇಖಕ ಹಕ್ಕುತ್ಯಾಗ:

ನಾನು ಸ್ಥಿರ ಮತ್ತು ಸಂಪೂರ್ಣ ರೋಬೋಟ್ ಅಲ್ಲ, ನಾನು ಸಾಮಾನ್ಯ ಮನುಷ್ಯ ಮತ್ತು ನನ್ನ ಬ್ಲಾಗ್ ಅಥವಾ  ಲೇಖನ ವಿರೋಧಾಭಾಸವಾಗಿರುತ್ತದೆ, ನಿರ್ದೇಶಕರು ಅನೇಕ ಚಲನಚಿತ್ರಗಳಿಗೆ ಒಂದೇ ವಿಷಯದ ಬಗ್ಗೆ ಅಥವಾ ವಿಭಿನ್ನ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಾರೆ. ನಾನು ನದಿಯಂತೆ ಹರಿಯುತ್ತೇನೆ, ನಾನು ನಿಜವಾಗಿಯೂ ಮರಳು, ಕಲ್ಲು, ಮರಗಳು, ಮನೆ ಇತ್ಯಾದಿಗಳನ್ನು ಹುಡುಕುವುದಿಲ್ಲ. ಸಾಗರವನ್ನು ತಲುಪುವುದು  ಮೂಲ ಉದ್ದೇಶ, ಸಾಗರ ತಲುಪುವ ಮುನ್ನ ದಾರಿಯಲ್ಲಿ ಕೆಲವರಿಗೆ ಉಪಯೋಗವಾಗುವದು ನನ್ನ ಗುರಿ. ನನ್ನ ಲೇಖನದ  ಯಾವುದೇ ವಿಧಾನಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ತಜ್ಞರ ಸಲಹೆಯನ್ನು ಸಂಪರ್ಕಿಸಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ನಿಮ್ಮ ಅನ್ವೇಷಣೆಯಲ್ಲಿ ನಿಮಗೆ ಸಹಾಯ ಮಾಡಲು ಸಾಮಾನ್ಯ ಮಾಹಿತಿಯನ್ನು ನೀಡುವುದು ನನ್ನ ಉದ್ದೇಶವಾಗಿದೆ.