ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬೇಕೆ?
ಇದನ್ನು
ಓದಿ, ಈಕ್ಷಣ ದಲ್ಲೇ ನೀನು ಶಾಂತಿ ಮತ್ತು
ಆನಂದ ಪಡೆಯುವುದು ಹೇಗೆ ಎಂದು ತಿಳಿಯಲು....
ಬಾಲ್ಯದಲ್ಲಿ
ನೀನು ನೋಡಿದ್ದೆಲ್ಲ ಸೌಂದರ್ಯ. ನಿನಗೆ ಕಂಡಿದ್ದೆಲ್ಲ ಆಶ್ವರ್ಯ. ಆ ದಿನದಲ್ಲಿ ಸಂತೋಷಕ್ಕೆ
ಮತ್ತು ಶಾಂತಿಗೆ ಕೊರತೆಯೇ ಇಲ್ಲ, ಅವು ಆನಂದದ ಪರಕಾಷ್ಠೆಯ
ದಿನಗಳು. ಆದರೆ ಈಗ ನೀನು ಆ ಎಲ್ಲಾ ಸೌಂದರ್ಯ ಮತ್ತು ಆಶ್ಚರ್ಯ ಸಿಗುತ್ತಿಲ್ಲ, ಸಂತೋಷ ಮತ್ತು ಶಾಂತಿಯಿಂದ ಸಂಪೂರ್ಣ ವಂಚಿತನಾಗಿರುವೆ.
ಆನಂದಕ್ಕಿಲ್ಲಿದೆ
”ಟೋಲ್” ಅವರ ಸರಳ ಉಪಾಯ:
ಎಕ್ಹಾರ್ಟ್ ಟೋಲ್ ಅವರು ಪವರ್ ಆಪ್ನೌ (Power of Now) ಪುಸ್ತಕದಲ್ಲಿ ಹೀಗೆ ಹೇಳಿರುವರು...
ಮಾನಸಿಕ
ಅಸಮತೋಲನ ಮತ್ತು ಅಶಾಂತಿಗೆ ಮುಖ್ಯ ಕಾರಣ ಎಲ್ಲಾ ಕಳೆದುಹೋದ
ಘಟನೆಗಳ ಮರು ಸಂಗ್ರಹ ಮತ್ತು
ಅತಿಯಾದ ಅದರ ಬಗೆಗಿನ ಯೋಚನೆ.
ಇಲ್ಲಾ ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಮತ್ತು ಭಯ. ಹಾಗೂ ವರ್ತಮಾನದ(ಈಕ್ಷಣದ/ಈದಿನದ) ನಿರಾಕರಣೆಯಿಂದ ಉಂಟಾಗುತ್ತದೆ.
ಅಶಾಂತಿ,
ಆತಂಕ, ಉದ್ವೇಗ, ಒತ್ತಡ, ಚಿಂತೆ - ಎಲ್ಲಾ ರೀತಿಯ ಭಯ - ಭವಿಷ್ಯದ ಬಗೆಗಿನ
ಅತಿಯಾದ ಚಿಂತೆಯ ಕಾರಣದಿಂದ ಉಂಟಾಗುತ್ತದೆ ಮತ್ತು ಇವರು ವರ್ತಮಾನ ದಲ್ಲಿ
ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.
ಅಪರಾಧ
ಭಾವನೆ, ವಿಷಾದ, ಅಸಮಾಧಾನ, ಕುಂದುಕೊರತೆಗಳ ಚಿಂತೆ, ದುಃಖ, ಕಹಿ, ಖಿನ್ನತೆ, ಮತ್ತು
ಎಲ್ಲಾ ರೀತಿಯ ದ್ವೇಷಭಾವ, ಅಸೂಯೆ, ಅತಿಯಾದ
ಗತಕಾಲದ ಚಿಂತೆಯಿಂದ ಉಂಟಾಗುತ್ತವೆ ಮತ್ತು ಇವರು ವರ್ತಮಾನ ದಲ್ಲಿ
ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.
ಕಾರಣ
ನಿನ್ನ ಮನಸ್ಸು ಇಲ್ಲಿ ಇಲ್ಲ. ಅದು ಕಳೆದು ಹೋದ
ಕಾಲದ ಬಗ್ಗೆ ಕೊರಗುತ್ತಿದೆ, ಇಲ್ಲಾ ಮುಂದೆ ಏನಾಗುವುದೇ ಎನ್ನುವ ಭಯದಲ್ಲಿ ಚಿಂತಿಸುತ್ತಲಿದೆ.
ಬಾಲ್ಯದ
ನಿನ್ನ ಆ ಸಂತೋಷಕ್ಕೆ ಮೂಲ
ಕಾರಣ, ನೀನು ಇದ್ದಲ್ಲಿಯೇ ನಿನ್ನ
ಮನಸ್ಸು ಇರುತ್ತಿತ್ತು.
ಒಮ್ಮೆ
ನಿನ್ನ ಮನಸನ್ನು ಇಲ್ಲಿ, ಈಕ್ಷಣ ದಲ್ಲಿ ಇಟ್ಟು ನೋಡು, ಆಗ ನೀನಿರುವಲ್ಲೇ ಸ್ವರ್ಗ
ಕಾಣುವುದು.
ಆಗ
ನೀನು ನೋಡುವ ಬೀದಿ ಬದಿಯ ಹೂವುಗಳೇ
ಕಂಗೊಳಿಸುವವು. ನೀನು ನೋಡುವ ಮರ
ಗಿಡದಲ್ಲಿ ಪ್ರಕೃತಿ ಮಾತೆಯ ಹಸಿರು, ಜೀವ ತುಂಬಿದಂತೆ ಕಾಣುವುದು.
ಪಕ್ಷಿಯ ಕೂಗು ನಿನ್ನ ಮೈ
ಮರೆಸುವುದು, ನೀರಿನ ಜುಳು ಜುಳು ಶಬ್ದ
ನಿನ್ನಲಿ ಜೀವ ಶಕ್ತಿಯ ಪ್ರೇರೇಪಿಸುವಿದು.
ನೀನು
ಈಗ ಬರಿ, ಹಣ, ಅಧಿಕಾರ,
ಹಂಕಾರದ ಮಧದಲ್ಲಿ, ಇಹದ ಸೌಂದರ್ಯ ಮತ್ತು
ಸ್ವರ್ಗವನ್ನು ಕಾಣುಲಾಗುತ್ತಿಲ್ಲ.
ಮಕ್ಕಳು ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಡುವರು, ಚಿಟ್ಟೆ ಕಂಡರೆ, ಚಿಟ್ಟೆಯ ಹಿಂದೆ ಹೋಡುವರು. ಅವರು ಎಲ್ಲದರಲ್ಲೂ ಆ ಆಶ್ಚರ್ಯ ಮತ್ತು ಸೌಂದರ್ಯ ನೋಡಲು ಮುಖ್ಯ ಕಾರಣ ಅವರ ಮನಸು ಮತ್ತು ಅವರ ದೇಹದ ಜ್ಯೋತೆ ಇದೆ ಎಂದರೆ, ಎರೆಡು ಒಂದೇ ಜಾಗದಲ್ಲಿ ಇವೆ.
ಆದರೆ
ನಿನ್ನ ದೇಹ ಇಲ್ಲಿದೆ, ನಿನ್ನ
ಮನಸ್ಸು ಎಲ್ಲೋ ಇದೆ. ನೀನು ಒಂದು
5 ನಿಮಿಷ ನೀನಿರುವಲ್ಲಿಯೇ ನಿನ್ನ ಮನಸು ಇಟ್ಟು ನೋಡು.
ನೀನು
ನೋಡುವ ಪ್ರತಿ ನೋಟದಲ್ಲಿಯೂ ಸ್ವರ್ಗ ವನ್ನು ಕಾಣಲು ಸಾಧ್ಯ, ನೀನು ರೋಗದಿಂದ ಬಳಲುತ್ತಿದ್ದರು,
ನಿನ್ನ ಮನಸ್ಸನ್ನು ನೀನು ಇರುವಲ್ಲಿಯೇ ಇಟ್ಟು
ಕೊಂಡರೆ, ಆ ರೋಗದ ನೋವು
ಸಹ ಮಾಯ ಆಗುವುದು. ಏಕೆಂದರೆ
ರೋಗದ ನೋವಿಗಿಂತ, ನಿನಗೆ ಏನಾಗುವುದೋ ಎನ್ನುವ
ಭವಿಶ್ಯದ ಭಯ ಹೆಚ್ಚು
ನೋವು ಕೊಡುತ್ತಿರುತ್ತದೆ.
ರಾಷ್ಟ್ರ
ಕವಿ ಕುವೆಂಪು ಅವರ ಜೀವನದ ಸತ್ಯ:
ಕುವೆಂಪು
ಅವರು ಹೇಳಿದ ಹಾಗೆ, ನೀನು ಆಕಾಶವನ್ನು ನೋಡಿದರೆ
ನಿನ್ನ ಮೈ ನೀಲಿಗಟ್ಟು ವಂತೆ
ನೋಡು ಎಂದು. ಹಾಗೆಂದರೆ
ನಿನ್ನ ಮೈ ನೀಲಿ ಬಣ್ಣ
ಆಗುವಂತೆ ಎಂದು ಅರ್ಥ ಅಲ್ಲ,
ನೀನು ಆಕಾಶವನ್ನು ನೋಡುವಾಗ ಭೂಥಕಾಲ ಮತ್ತು ಭವಿಷ್ಯತ್ ಕಾಲದಲ್ಲಿ ಇರದೇ ವರ್ತಮಾನ ದಲ್ಲಿ
ಇದ್ದು ನೋಡು. ಎಂದರೆ ಎಲ್ಲಾ ಚಿಂತೆಗಳನ್ನು ಪಕ್ಕಕ್ಕೆ ಇಟ್ಟು ಆಕಾಶವನ್ನು ನೋಡು.
ಮತ್ತೆ
ನಿನ್ನ ನೋಟದಲ್ಲಿ ಹೋಲಿಕೆ, ಮೇಲು, ಕೀಳು ಇಲ್ಲದಿರಲಿ, ನೋಡುವ
ನೋಟದಲ್ಲೇ ನಿನ್ನ ಮೈ ಮನಸು ಎಲ್ಲವೂ
ಮಗ್ನವಾಗಿರಲಿ. ಆಗ ಆ ನೋಟ
100%. ಆ ನೋಟ ಒಂದು ಮಗುವಿನ
ನೋಟಕ್ಕೆ ಸಮವಾಗುವುದು.
ಅಂಥಾ
ಮನಸಿಂದ ನೀನು ಆಕಾಶ ನೋಡಿದರೆ,
"ಆಗ ನೀನು ಬೇರೆ ಆಕಾಶ
ಬೇರೆ ಆಗಲು ಸಾಧ್ಯವಿಲ್ಲ", ನೀನೇ ಆಕಾಶ
ಹಾಗಿಬಿಡುವೆ, ಆಕಾಶವೇ ನೀನಾಗುವುದು. ಈಗ ನೀನು ಮತ್ತೆ
ಆ ಕುವೆಂಪು ರವರ ಸಾಲನ್ನು ಒಮ್ಮೆ
ಓದು..."ನೀನು ಆಕಾಶವನ್ನು ನೋಡಿದರೆ
ನಿನ್ನ ಮೈ ನೀಲಿಗಟ್ಟು ವಂತೆ
ನೋಡು"
ಕುವೆಂಪು
ಅವರು ಹೀಗೆ ಹೇಳುವರು, ಕುಂಬಳಕಾಯಿ
ಹೂವು ಬಹಳ ಸುಂದರ ಎಂದು.
ಹೌದು ನೀನು ನೋಡುವ ನೋಟದಲ್ಲಿ
100% ಒಳಗೊಡರೆ, ಆಗ ಯಾವು ಹೂವಲ್ಲಾದರು
ಸೌಂದರ್ಯ ಸಿಗಲು ಸಾಧ್ಯ.
ನೀನು ಮನಸ್ಸನ್ನು ಅಥವಾ ಯೋಚನೆಯನ್ನು ನೋಡುವ ನೋಟಕ್ಕೆ ಮಿಶ್ರಣ ಮಾಡಿದರೆ, ಆಗ ಅದು ರೋಸ್ ಇಲ್ಲ, ಕಮಲದ ಹೂವಿಗೆ ಹೋಲಿಸಿ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎನ್ನುವುದು. ನೀನು ನಿನ್ನ ಹೋಲಿಸುವ ಮನಸ್ಸನ್ನು ದೂರ ಮಾಡಿ ಸಂಪೂರ್ಣ ಮಜ್ಞತೆ ಯಲ್ಲಿ ನೋಡಿದರೆ, ರಸ್ತೆ ಬಡಿಯಲ್ಲಿ ಕಾಣುವ ಪ್ರತಿ ಹೂವಲ್ಲಿ ಮಹಾ ಸೌಂದರ್ಯ ನೋಡಲು ಸಾದ್ಯ. ಆದರೆ ನೆನಪಿರಲಿ, ನೀನು ನೋಡುವಾಗ ನೀನೆೇ ಆ ಹೂವಾಗಬೇಕು. ಹೇಗೆಂದರೆ: ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು ಎಂದ ಹಾಗೆ.
ಭಯ
ಮತ್ತು ಚಿಂತೆಯ ಪರಿಣಾಮಗಳು:
ಅತಿಯಾದ
ಚಿಂತೆ ನಿನ್ನನ್ನು ಸುಮ್ಮನೆ ಕೊರಗಿಸುವುದೇ ಹೊರತು, ಅದರಿಂದ ಯಾವ ಪ್ರಯೋಜನವಿಲ್ಲ. ಎಲ್ಲಾ
ನೋವು ಕೊಡುವ ಮತ್ತು ಭಯಪಡಿಸುವ, ಚಿಂತೆಗಳಿಂದ ಹೊರಬಂದು, ವಾಸ್ತವದಲ್ಲಿ ಇರುವುದನ್ನ ಕಲಿಯಬೇಕು. ಆಗ ನೀನು ಇದ್ದಲ್ಲಿಯೇ
ಸ್ವರ್ಗ್ ಕಾಣುವುದು.
ಜೀವನದಲ್ಲಿ ಎಲ್ಲವೂ ನೀನು ಅಂದುಕೊಂಡು ಹಾಗೆ ನಡೆಯವುದಿಲ್ಲ, ಅವು ಹೇಗೆ ಆದರೂ ಅದನ್ನು ದೈವ ಕೃಪೆ ಎಂದು ಭಾವಿಸುವುದು ಕಲಿತರೆ, ಆಗ ನೀನು ದುಃಖ ಪಡಲು ಸಾಧ್ಯವಿಲ್ಲ.
ಮುಖ್ಯವಾಗಿ,
ವರ್ತಮಾನದಲ್ಲಿ ಮೈ ಮತ್ತು ಮನಸ್ಸನ್ನು
ಇಟ್ಟು ಬದುಕಲು ಪ್ರಾರಂಭಿಸಿ. ಆಗ ನೀನು ತಿನ್ನುವ ಪ್ರತೀ ತುತ್ತ ನಿಮಗೆ ರಸಗವಳ ಆಗುವುದು, ನೀವು ಮುಟ್ಟುವ ಪ್ರತಿ
ವಸ್ತು ಸುಂದರಾವಾಗಿ ಕಾಣುವುದು, ನೀನು ಕುಡಿಯುವ ಮತ್ತು
ಸ್ನಾನ ಮಾಡುವ ನೀರು ನಿನಗೆ ಜೀವದ
ಚಿಲುಮೆಯ ಪರಿಚಯ ಮಾಡಿಸುವುದು.
ಹೆಚ್ಚು
ಹೆಚ್ಚು ಚಿಂತೆ ಮಾಡಿ ಯಾರು ಯಾವ
ಪರಿಹಾರ ಪಡೆದ ಉದಾಹರಣೆ ಎಲ್ಲಾ,
ಆದರೆ ಹೆಚ್ಚು ಹೆಚ್ಚು ಚಿಂತಿಸಿ ಮತ್ತು ಕೊರಗಿ, ರೋಗ ಗ್ರಸ್ತರಾದ, ಹುಚ್ಚರಾದ
ಉದಾಹರಣೆಗಳು ಹೇರಳವಾಗಿ ಇವೆ.
ಭಯ ಮತ್ತು ಚಿಂತೆ ಆರೋಗ್ಯದಮೇಲೆ ಹೇಗೆ ಪರಿಣಾಮ ಬೀರುವವು
ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ:
ಆನಂದದ ಕೀಲಿಕೈ:
ನೀನು ತಿನ್ನುವಾಗ
ನಿನ್ನ ಗಮನ ತಿನ್ನುವುದರಮೇಲೆ ಇರಲಿ
ನೀನು ನಡೆಯುವಾಗ
ನಿನ್ನ ಗಮನ ನಿನ್ನ ಹೆಜ್ಜೆಗಳ ಮೇಲೆ ಇರಲಿ
ನೀನು ಕೆಲಸ ಮಾಡುವಾಗ
ನಿಮ್ಮ ಧ್ಯಾನ ಕೆಲಸದ ಮೇಲೆ ಇರಲಿ
ನೀನು ಮಾಡುವ ಯಾವುದೇ ಕೆಲಸ ಇರಲಿ ನಿನ್ನ ಧ್ಯಾನ ಅದರ ಮೇಲೆ ಇರಲಿ
ಕೆಲಸವೇ ಇಲ್ಲದಿರುವಾಗ
ನಿನ್ನ ಧ್ಯಾನ ಉಸಿರಾಟದ ಮೇಲೆ ಇರಲಿ
ನೀನು ಹೊಮ್ಮೆ ಪರೀಕ್ಷಿಸಿ ನೋಡು: ನೀನು ಮೈ ಮತ್ತು ಮನಸು ಕೊಟ್ಟು ಒಂದು ಕೆಲಸದಲ್ಲಿ ತೊಡಗಿದ್ದಾಗ ಹಸಿವು ಆಗುವುದಿಲ್ಲ ಮತ್ತು ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ, ಆ ದಿನ ನಿನಗೆ ಆನಂದ ಮತ್ತು ಸಂತೋಷದ ದಿನವಾಗಿರುತ್ತದೆ.
ಕೆಲವಾರು ಮಹಾ
ಸಾದು ಸ್ವಾಮೀಜಿಗಳು ಸದಾ ಅಷ್ಟು ಖುಷಿ, ಸಂತೋಷ ಮತ್ತು ಶಾಂತಿ ಯಿಂದ ಇರಲು ಮುಖ್ಯ ಕಾರಣ, ಅವರು ಒಂದು
ಸದಾ ಮನಸ್ಸನ್ನು ಉಸಿರಾಟದ ಮೇಲೆ ಇರಿಸಿರುವರು, ಇಲ್ಲ ಅವರು ಮಾಡುವ ಪೂಜೆ, ಕೆಲಸದ ಮೇಲೆ ಇಟ್ಟಿರುವರು.
ಮಗುವಿನಂತೆ ಆಕ್ಷಣದಲ್ಲಿ ಮೈ ಮತ್ತು ಮನಸ್ಸನ್ನು ಕೊಟ್ಟು ಬದುಕುವುದನ್ನು ಕಲೆಯಿರಿ. ಶಾಂತಿ ಮತ್ತು ಆನಂದದ ಜೀವನ ನಿಮ್ಮದಾಗಾಲಿ ಎಂದು ಆಶಿಸುವ, ನಿಮ್ಮ ಪ್ರೀತಿಯ- ಜಿಸಿವಿ.