ಆರೋಗ್ಯ
ಆಫ್ಫಾರ್ಮೆಷನ್
ನಮಸ್ಕಾರ ಸ್ನೇಹಿತರೆ, ನಾನು ಇಲ್ಲಿ ಕೊಟ್ಟಿರುವ
ಆರೋಗ್ಯದ ಆಫ್ಫಾರ್ಮಶನ್ ಗಳು, ತುಂಬಾ ಪರಿಣಾಮ ಕಾರಿ ಮತ್ತು ಪ್ರಾಯೋಗಿಕವಾಗಿ ವಿಶ್ವದಲ್ಲಿ ಆಫ್ಫಾರ್ಮಶನ್
ಮೂಲಕ ಆರೋಗ್ಯ ಸುಧಾರಣೆಗೆ ಅನುಸರಿಸುವ ಉತ್ತಮ ಪದ್ಧತಿಗಳು.
ಮತ್ತು ಈ ಆಫ್ಫಾರ್ಮಶನ್ ಗಳನ್ನ, ನೀವು ದಿನವೂ ನಾನು ಹೇಳಿದ ಸಮಯದಲ್ಲಿ, ಹೇಳಿದ ವಿಧಾನವನ್ನು ಅನುಸರಿಸಿ ತಪ್ಪದೆ ಅಭ್ಯಾಸ ಮಾಡಬೇಕು.
ನಾನು ಹೇಗಿದ್ದೇನೋ ಹಾಗೆಯೆ ನನ್ನನ್ನು ನಾನು
ಪ್ರೀತಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ನಾನು ಅದ್ಭುತವಾದ ವ್ಯಕ್ತಿ.
ನನ್ನಲ್ಲಿ ಶಾಂತಿ, ಪ್ರೀತಿ, ಸಂತೋಷ, ಮತ್ತು
ವಿಶ್ರಾಂತಿ ತುಂಬಿವೆ. ನಾನು ಜೀವನದ ಜ್ಯೋತೆ ಹಾಯಾಗಿ ನದಿಯ ರೀತಿ ಪ್ರಯಾಣ ಮಾಡುತ್ತೇನೆ ಮತ್ತು ಜೀವನವು
ಸುಲಭವಾಗಿ ನನ್ನ ಮೂಲಕ ನದಿಯ ಹಾಗೆ ಹರಿಯುತ್ತಿದೆ.
ದ್ವನಿ ದೇವರ ವಾಣಿ. ನಾನು ದೇವರ ವಾಣಿಯನ್ನು
ಕೇಳುತ್ತೇನೆ. ನಾನು ಜೀವನದ ಸಂತೋಷವನ್ನು ಹಾಯಾಗಿ ಕೇಳುತ್ತೇನೆ. ದ್ವನಿ ಜೀವನದ ಒಂದು
ಭಾಗ, ನಾನು ಪ್ರೀತಿಯಿಂದ ಎಲ್ಲವನ್ನು ಕೇಳುತ್ತೇನೆ.
ನಾನು ಪ್ರೀತಿಯಿಂದ ಇದ್ದೇನೆ. ನಾನೊಬ್ಬ ನಿರ್ಣಾಯಕ
ವ್ಯಕ್ತಿ. ನಾನು ಎಲ್ಲವನ್ನು ಅನುಸರಿಸುತ್ತೇನೆ. ನಾನು ಹೊಸ ಆಲೋಚನೆಗಳು ಮತ್ತು ಹೊಸ ಪರಿಕಲ್ಪನೆಗಳನ್ನು
ಸ್ವಾಗತಿಸುತ್ತೇನೆ.
ಮೆದುಳು
ನಾನು ಜೀವನದಲ್ಲಿ ಎಲ್ಲರೊಂದಿಗೆ ಒಂದಾಗಿದ್ದೇನೆ.
ನನ್ನ ಶಾಂತಿಯನ್ನು ಕದಡುವ ಶಕ್ತಿ ಯಾರಿಗೂ ಇಲ್ಲ. ನಾನು ಹಳೆಯ ನಂಬಿಕೆಗಳನ್ನು ನಿರಾಕರಿಸುತ್ತೇನೆ. ನನ್ನ ಜೀವನ ಶಾಂತಿ ಮತ್ತು ಸಾಮರಸ್ಯವಾಗಿದೆ.
ಕಣ್ಣುಗಳು
ನಾನು ಸ್ವತಂತ್ರವಾಗಿ ಇದ್ದೇನೆ. ನಾನು ಮುಕ್ತವಾಗಿ ಮುಂದೆ ನೋಡುತ್ತೇನೆ ಏಕೆಂದರೆ ಜೀವನವು
ಶಾಶ್ವತವಾಗಿದೆ ಮತ್ತು ಸಂತೋಷದಿಂದ ತುಂಬಿದೆ. ನಾನು ನನ್ನ ಪ್ರೀತಿಯ ಕಣ್ಣುಗಳಿಂದ ಅದನ್ನು ನೋಡುತ್ತೇನೆ.
ಯಾರೂ ನನ್ನನ್ನು ಎಂದಿಗೂ ನೋಯಿಸಲಾರರು. ನಾನು ಎಲ್ಲವನ್ನು ತುಂಬಾ ಖುಷಿ ಮತ್ತು ಪ್ರೀತಿ ಯಿಂದ ನೋಡುತ್ತೇನೆ.
ನಾನು ಹಾಯಾಗಿ ಮಾತನಾಡಬಲ್ಲೆ. ನಾನು ನನ್ನ ಭಾವನೆಗಳನ್ನು
ಮುಕ್ತವಾಗಿ ವ್ಯಕ್ತಪಡಿಸುತ್ತೇನೆ. ನಾನು ಸೃಜನಶೀಲ ವ್ಯಕ್ತಿ. ನಾನು ಪ್ರೀತಿಯಿಂದ ಮಾತನಾಡುತ್ತೇನೆ.
ನಾನು ಹೊಂದಿಕೊಳ್ಳುವ ವ್ಯಕ್ತಿ. ನಾನು ಇತರರ
ಭಾವನೆ ಮತ್ತು ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇನೆ. ನನ್ನ ಜೀವನ ಶಾಂತಿ ಮತ್ತು ಸುರಕ್ಷಿತವಾಗಿ
ಇದೆ.
ಜೀವನದ ಉಸಿರು ನನ್ನ ಮೂಲಕ ಸುಲಭವಾಗಿ ಹರಿಯುತ್ತಿದೆ.
ಶಾಂತಿ ತುಂಬಿದೆ. ಯಾರೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನನ್ನ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು
ನಾನು ಸ್ವತಂತ್ರವಾಗಿದ್ದೇನೆ. ನಾನು ಜೀವನವನ್ನು ಸರಿತೂಗಿಸಬಲ್ಲೆ.
ನನ್ನಲ್ಲಿ ಸಂತೋಷ, ಪ್ರೀತಿ, ಶಾಂತಿ ತುಂಬಿದೆ.
ನಾನು ಜೀವನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನ ಹೃದಯ ಮತ್ತೆ ಆನಂದ ಮತ್ತು ಸಂತೋಷ ದಿಂದ
ತುಂಬಿದೆ.
ನಾನು ಕೋಪವನ್ನು ನನ್ನಿಂದ ಸಂಪೂರ್ಣವಾಗಿ ಬಿಡುಗಡೆ
ಮಾಡುತ್ತೇನೆ. ನನ್ನಲ್ಲಿ ಪ್ರೀತಿ ಮತ್ತು ವಿಶ್ರಾಂತಿ ಹೆಚ್ಚಾಗುತ್ತಿದೆ. ನನ್ನ ಜೀವನ ಸಂತೋಷ ಮತ್ತು
ಮುಕ್ತವಾಗಿದೆ; ನಾನು ಸ್ವೀಕರಿಸುವ ಎಲ್ಲವೂ ಒಳ್ಳೆಯದೇ.
ನಾನು ಎಲ್ಲಾ ವಿಚಾರಗಳನ್ನು ಪ್ರೀತಿಯಿಂದ ಮತ್ತು
ಸುಲಭವಾಗಿ ನಿಭಾಯಿಸುತ್ತೇನೆ.
ನಾನು ಹಾಯಾಗಿ ವಿಶ್ರಾಂತಿ ಪಡೆಯುತ್ತೇನೆ. ನನ್ನ ಜೀವನದ ಬುದ್ಧಿವಂತಿಕೆ ಎಲ್ಲವನ್ನು ನೋಡಿಕೊಳ್ಳುವ
ಮತ್ತು ನಿಭಾಯಿಸುವ ಶಕ್ತಿ ಹೊಂದಿದೆ. ನನ್ನಲ್ಲಿ ಶಾಂತಿ,
ಪ್ರೀತಿ, ಹಿತವಾದ ವಾತಾವರಣವಿದೆ. ನನ್ನ ಕೌಟುಂಬಿಕ
ಜೀವನ ಆನಂದಮಯವಾಗಿದೆ.
ನಾನು ಇನ್ನು ಮುಂದೆ, ನನಗೆ ಅಗತ್ಯವಿಲ್ಲದ ಎಲ್ಲವನ್ನೂ
ನಾನು ಬಿಟ್ಟು ಬಿಡುತ್ತೇನೆ. ನನ್ನ ಪ್ರಜ್ಞೆಯು ಈಗ ಶುದ್ಧವಾಗಿದೆ ಮತ್ತು ನನ್ನ ಪರಿಕಲ್ಪನೆಗಳು ಹೊಸತನದೊಂದಿಗೆ
ಕಂಗೊಳಿಸುತ್ತಿವೆ. ನನ್ನಲ್ಲಿ ಶಾಂತಿ, ಪ್ರೀತಿ ಮತ್ತು
ಸಂತೋಷ ತುಂಬಿದೆ.
ನಾನು ಹೊಸ ಆಲೋಚನೆಗಳನ್ನು ಸುಲಭವಾಗಿ ಸಂಯೋಜಿಸುತ್ತೇನೆ.
ನನ್ನನ್ನು ನಾನು ಒಪ್ಪುತ್ತೇನೆ ಮತ್ತು ಪ್ರೀತಿಸುತ್ತೇನೆ. ಯಾವುದೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನಾನು ಶಾಂತವಾಗಿದ್ದೇನೆ.
ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ.
ನಾನು ಸ್ವತಂತ್ರವಾಗಿ ಇದ್ದೇನೆ; ನಾನು ಹಿಂದಿನ
ಎಲ್ಲಾ ನೆನಪುಗಳನ್ನು ಬಿಡುಗಡೆ ಮಾಡುತ್ತೇನೆ. ನನ್ನ ಜೀವನವು ಈಗ ಸುಲಭವಾಗಿ ನದಿಯ ರೀತಿ ಹರಿಯುತ್ತಿದೆ.
ನಾನು ಎಲ್ಲಾ ಒತ್ತಡ ಮತ್ತು ಭಾರಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಈ ಕ್ಷಣಗಳು ಸಂತೋಷ ಮತ್ತು
ಆನಂದ ದಿಂದ ತುಂಬಿವೆ.
ನಾನು ಹಳೆಯ ಸರಿಯಲ್ಲದ ನೆನಪುಗಳನ್ನು ಬಿಡುಗಡೆ
ಮಾಡಿದ್ದೇನೆ. ನಾನು ಎಲ್ಲಾಕಡೆ ಒಳ್ಳೆಯದನ್ನು ಮಾತ್ರ
ಹುಡುಕುತ್ತೇನೆ. ಜೀವನ ಸರಿಯಾದ ಕ್ರಮದಲ್ಲಿ ಸಾಗುತ್ತಿದೆ. ನಾನು ಸಂಪೂರ್ಣನಾಗಿದ್ದೇನೆ.
ನಾನು ಹಳೆಯದನ್ನು ಬಿಡುಗಡೆ ಮಾಡುತ್ತೇನೆ ಮತ್ತು
ಹೊಸದನ್ನು ಸ್ವಾಗತಿಸುತ್ತೇನೆ.
ಆಕಾರಗಳು ಮತ್ತು ಸಂಪರ್ಕಗಳು ಬದಲಾಗಬಹುದು ಆದರೆ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ದೇಹದ
ಎಲ್ಲಾ ಬದಲಾವಣೆಗಳಲ್ಲಿ ನಾನು ಸಮತೋಲನದಲ್ಲಿದ್ದೇನೆ. ನಾನು ನನ್ನ ದೇಹವನ್ನು ಪ್ರೀತಿಯಿಂದ ಆಶೀರ್ವದಿಸುತ್ತೇನೆ.
ನನ್ನ ದೇಹದ ಎಲ್ಲಾ ಭಾಗಗಳು ಸುಂದರವಾಗಿವೆ.
ನಾನು ನನ್ನ ಜೀವನದ ಶಕ್ತಿ, ಬೆಂಬಲ ಮತ್ತು ಸಮರ್ಥನೆಯೊಂದಿಗೆ
ಸಂತೋಷದಿಂದ ಮುನ್ನಡೆಯುತ್ತೇನೆ. ನಾನು ಇನ್ನು ಹೆಚ್ಚು ಒಳತಿನೆಡೆಗೆ ಮುನ್ನಡೆಯುತ್ತಿದ್ದೇನೆ. ನಾನು
ಇತರರನ್ನು ಅವರಂತೆಯೇ ಇರಲು ಬಿಡುತ್ತೇನೆ ಮತ್ತು ನಾನು ಸ್ವತಂತ್ರವಾಗಿದ್ದೇನೆ. ನನ್ನ ಜೀವನ ಸಮತೋನವಾಗಿ
ಮುಂದುವರೆಯುತ್ತಿದೆ.
ನನ್ನಲ್ಲಿ ಶಕ್ತಿ ಇದೆ, ನನ್ನ ಲೈಂಗಿಕ ಅಂಗಾಂಗಳು
ಸಂಪೂರ್ಣ ಸಾಮರ್ಥ್ಯವನ್ನು ಹೊಂದಿವೆ, ನಾನು ಅವನ್ನು
ಸುಲಭವಾಗಿ ಮತ್ತು ಸಂತೋಷದಿಂದ ಕಾರ್ಯನಿರ್ವಹಿಸಲು ಅನುಮತಿಸುತ್ತೇನೆ. ನನ್ನ ಲೈಂಗಿಕತೆಯನ್ನು ನಾನು
ಪ್ರೀತಿಯಿಂದ ಮತ್ತು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನಲ್ಲಿ ಯಾವುದೇ ಬೇಸರವಾಗಲಿ ಮತ್ತು ಅಪರಾಧ
ಭಾವನೆಯಾಗಲಿ ಇಲ್ಲ.
ಮೊಣಕಾಲು
ನನ್ನಲ್ಲಿ ಕ್ಷಮೆ, ಸಹನೆ, ಸಹಾನುಭೂತಿ ತುಂಬಿವೆ.
ನಾನು ಹಿಂಜರಿಕೆಯಿಲ್ಲದೆ ಮುನ್ನಡೆಯುತ್ತೇನೆ. ನಾನು ಈಗಿನ ಸ್ಥಿತಿಗತಿಗೆ ಅನುಸಾರವಾಗಿ ಬದಲಾಗುವ ಸ್ನೇಹ
ಮತ್ತು ಪ್ರೀತಿಯ ಭಾವವನ್ನು ಹೊಂದಿದ್ದೇನೆ.
ನಾನು ಒಳ್ಳೆಯ ರೀತಿಯಲ್ಲಿ ಎಲ್ಲರನ್ನು ಗಮನ
ಸೆಳೆಯುತ್ತೇನೆ. ನಾನು ಸುರಕ್ಷಿತವಾಗಿದ್ದೇನೆ. ನನ್ನ ವ್ಯಕ್ತಿತ್ವಕ್ಕೆ ಯಾವ ಭಯವು ಇಲ್ಲ. ನಾನು ಸಮಾಧಾನದಲ್ಲಿದ್ದೇನೆ.
ಜಗತ್ತು ಸುರಕ್ಷಿತ ಮತ್ತು ಸ್ನೇಹಪರವಾಗಿದೆ. ನಾನು ಎಲ್ಲಾ ಕೋಪ ಮತ್ತು ಅಸಮಾಧಾನವನ್ನು ಬಿಡುಗಡೆ ಮಾಡುತ್ತೇನೆ.
ನನಗೆ ಏನು ಬೇಕೋ ಅದು ಯಾವಾಗಲೂ ನನ್ನಲ್ಲಿಗೆ ಬರುತ್ತದೆ. ನಾನು ನನ್ನಲ್ಲಿನ ಒಳ್ಳೆಯತನವನ್ನು ಹಾಯಾಗಿ ಸ್ವೀಕರಿಸುತ್ತೇನೆ. ನಾನು ನನ್ನ
ಜೀವನದಲ್ಲಿ ಬರುವ ಎಲ್ಲಾ ಸಣ್ಣ ವಿಷಯಗಳೊಂದಿಗೆ ಶಾಂತಿಯುತವಾಗಿರುತ್ತೇನೆ.
ಜೀವನ ನನ್ನನ್ನು ಬೆಂಬಲಿಸುತ್ತಿದೆ. ನಾನು ವಿಶ್ವವನ್ನು
ನಂಬುತ್ತೇನೆ. ನಾನು ಪ್ರೀತಿ ಮತ್ತು ವಿಶ್ವಾಸವನ್ನು ಮುಕ್ತವಾಗಿ ನೀಡುತ್ತೇನೆ. ನಾನು ಧೈರ್ಯಶಾಲಿ
ಮತ್ತು ಸ್ವತಂತ್ರ. ಜೀವನ ಚೆನ್ನಾಗಿದೆ. ನಾನು ಪ್ರೀತಿಯಿಂದ ಮುಂದುವರೆಯುತ್ತಿದ್ದೇನೆ. ಆ ದೈವದ ಸಪೋರ್ಟ್
ನನಗೆ ಇದೆ.
ಗ್ರಂಥಿಗಳು
ನಾನು ಸಂಪೂರ್ಣ ಸಮತೋಲನದಲ್ಲಿದ್ದೇನೆ. ನನ್ನ
ದೇಹದ ಅಂಗಾಂಗಳ ವ್ಯವಸ್ಥೆಯು ಕ್ರಮಬದ್ಧವಾಗಿದೆ. ನಾನು ಜೀವನವನ್ನು ಪ್ರೀತಿಸುತ್ತೇನೆ ಮತ್ತು ಮುಕ್ತವಾಗಿ
ಸ್ವೀಕಾರ ಮಾಡುತ್ತೇನೆ. ನಾನು ಸೃಜನಶೀಲ ವ್ಯಕ್ತಿ.
ಪಾದಗಳು
ನಾನು ಸತ್ಯದಲ್ಲಿ ನಿಲ್ಲುತ್ತೇನೆ. ನಾನು ಸಂತೋಷದಿಂದ
ಮುನ್ನಡೆಯುತ್ತೇನೆ. ನನಗೆ ಆಧ್ಯಾತ್ಮಿಕ ತಿಳುವಳಿಕೆ ಇದೆ. ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತೇನೆ.
ನೀವು ಈ ಅಫ್ರಾಮ್ಷನ್ ಮಾಡುವಾಗ ಒಂದುವೇಳೆ ಯಾವುದಾದರೂ
ಮೆಡಿಕೇಷನ್ ನಲ್ಲಿ ಇದ್ದಾರೆ ಅದನ್ನು ನಿಲ್ಲಿಸ ಬೀಡಿ, ನಿಮಗೆ ಈ ಆಫ್ರ್ಮ್ಯಾಟಿವ್ನ್ ಮಾಡಿ ಆರೋಗ್ಯದಲ್ಲಿ
ಬದಲಾವಣೆ ಕಂಡುಬಂದ ಮೇಲೆ ವೈದ್ಯರ ಸಲಹೆಯ ಮೇರೆಗೆ ಬೇಕಾದರೆ ಆ ಮೆಡಿಕೇಷನ ಅನ್ನು ನಿಲ್ಲಿಸ ಬಹುದು.
ಹಾಗಾಗಿ, ನೀವು ನನ್ನ ಸಂಕಲ್ಪ ಧ್ಯಾನ ಅಥವಾ
ಆರೋಗ್ಯ ಧ್ಯಾನದ ವಿಡಿಯೋ ನೋಡಿ ಕನಿಷ್ಟ ದಿನಕ್ಕೆ ಒಂದು ಗಂಟೆ ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.
https://youtube.com/channel/
ನೀವು ಈ ಅಫರ್ಮೇಶನ್ ಗಳನ್ನೂ ಓದಿಕೊಂಡು ಮಾಡಲು ಅಥವಾ ಬರೆದು ಕೊಳ್ಳಲು, ನಾನು ಈ ವಿಡಿಯೋ ಡೆಸ್ಕ್ರಿಪ್ಶೇನ್ ನಲ್ಲಿ ಕೊಟ್ಟಿರುವ ನನ್ನ ಬ್ಲಾಗ್ ಲಿಂಕ್ ಅನ್ನು ಕ್ಲಿಕ್ ಮಾಡಿ...
ಆರೋಗ್ಯದ ಸಂಕಲ್ಪ ಧ್ಯಾನ:
ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನ:
ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇
http://askvishnudotcom.blogspot.com/2018/04/why-you-get-disease.html?m=1