----> ಜೀವನದ ಸತ್ಯಗಳು
<-----
ಹಣವಂತರಿಗೆ
ಮತ್ತು ವಿದ್ಯಾವಂತರಿಗೆ ಕಷ್ಟ ಮತ್ತು ನೋವು
ಬರುವುದಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಈ ಭೂಮಿಯ ಮೇಲೆ
ಜನಿಸಿದ ಪ್ರತಿ ಜೀವಿಯೂ ಕಷ್ಟ ಮತ್ತು ನೋವು
ಅನುಭವಿಸದೆ ವಿಧಿಯಿಲ್ಲ. "ಆನೆಯ ಕಷ್ಟ ಆನೆಗೆ,
ಇರುವೆಯ ಕಷ್ಟ ಇರುವೆಗೆ".
ಆನಂದದ ಜೀವನಕ್ಕೆ ಸರಳ ಮಾರ್ಗಗಳು...
·
ಆಸೆಗಳು
ಮತ್ತು ನಿರೀಕ್ಷೆಗಳು ನಮ್ಮ ಮನಸ್ಸಿನ ಶಾಂತಿಯನ್ನು ದೂರ ಮಾಡುತ್ತವೆ.
·
ಇತರರನ್ನು
ದೂಷಣೆ ಮಾಡುವುದು ಮತ್ತು ಸ್ವಯಂ ದೂಷಣೆ ಮಾಡುವುದು ನಮ್ಮ ಶ್ರೀಮಂತಿಕೆಯನ್ನು
ದೂರ ಮಾಡುತ್ತವೆ.
·
ಸಿಟ್ಟು
ಮತ್ತು ಭಯ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ.
·
ನಮ್ಮ
ಜೀವನದಲ್ಲಿ ಒಳ್ಳೆಯದೇ ಆಗಲಿ ಅಥವಾ ಕೆಟ್ಟದ್ದೇ ಆಗಲಿ, ಯಾರನ್ನು ದೂಷಿಸದೆ, ಎಲ್ಲವೂ ದೇವರ ಪ್ರಸಾದ ಎಂದು ತಾಳ್ಮೆಯಿಂದ ಸ್ವೀಕಾರ ಮಾಡುವವರಿಗೆ, ಭಗವಂತನ ಕೃಪೆ ಪ್ರಾಪ್ತವಾಗುತ್ತದೆ.
ನಮ್ಮ ಎಲ್ಲಾ ಕರ್ಮಗಳನ್ನು ಸುಡಲು ಈ ಐದು ಸೂತ್ರಗಳು ಸಹಾಯ ಮಾಡಬಲ್ಲವು:
1. ದಿನಕ್ಕೆ ಎರಡು ಗಂಟೆ ಧ್ಯಾನ ಅಥವಾ ದೇವರ ನಾಮ ಜಪ ಅಥವಾ ಪ್ರಾರ್ಥನೆ ಮಾಡಬೇಕು.
2. ಜೀವನದಲ್ಲಿ ಬರುವ ಎಲ್ಲಾ ಅವಮಾನ, ಕಷ್ಟ, ಅಡೆ ತಡೆಗಳನ್ನು ಸಹನೆ ಮತ್ತು ತಾಳ್ಮೆಯಿಂದ ದೇವರ ಪ್ರಸಾದ ಎಂದು ಸ್ವೀಕಾರ ಮಾಡಬೇಕು.
3. ಪ್ರತಿ ದಿನವೂ ದೈಹಿಕ ಶ್ರಮ ಅಥವಾ ಸಾಧ್ಯವಾದಷ್ಟು ಕೆಲಸ ಮಾಡಲೇ ಬೇಕು, ಅದು ನಮ್ಮ ಮನಸ್ಸಿನ ಚಿಂತೆಯ ಬಲೆಯಿಂದ ತಪ್ಪಿಸಿಕೊಳ್ಳಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
4. ನಮಗಿಂತ ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಲಾದರೆ ದಾನ ಅಥವಾ ಸಹಾಯ ಮಾಡಬೇಕು, ಇಲ್ಲವಾದರೆ ಅವರಿಗೆ ಒಳ್ಳೆಯದಾಗಲಿ ಎಂದು ಮನದಲ್ಲಿ ದೇವರ ಪ್ರಾರ್ಥನೆ ಮಾಡಬೇಕು.
5. ಸತ್ಯವಾದರೂ ಸರಿ ಇತರರಿಗೆ ಹಿತವೆನ್ನಿಸುವ ಹಾಗಿದ್ದರೆ ಮಾತ್ರ ಮಾತನಾಡಿ. ಹಾಗಂತ ಹಿತವಾದ ಸುಳ್ಳನ್ನು ಹೇಳುವುದು ಸಹ ಒಳ್ಳೆಯದಲ್ಲ. ಮೌನವೇ ಬಂಗಾರ.
ಮನುಜ ಪ್ರಯತ್ನ ಮತ್ತು ದೈವ ಪ್ರೇರಣೆ ಇದ್ದರೆ ಎಲ್ಲವೂ ಸಾಧ್ಯ. ಶುಭವಾಗಲಿ!
ಸೂಚನೆ:
ಹೋಟೆಲ್ ಮತ್ತು ಬೇಕರಿ ತಿಂಡಿ ತಿನಿಸುಗಳು, ದಿನ ಪತ್ರಿಕೆ, ಮೋಬೈಲ್ ಹಾಗು ಟಿವಿ ಆರೋಗ್ಯಕ್ಕೆ ಹಾನಿಕಾರಕ, ಇವುಗಳಿಂದ ದೂರ ಇರಿ.
----> ದೇವರ
ನಾಮ ಜಪ / ಸ್ಮರಣೆ <-----
ದಿನಕ್ಕೆ
ಎರೆಡು ಬಾರಿ ದೇವರ ನಾಮ ಜಪ ಮಾಡಿ.
1.
ಜಪ
ಮಾಲೆ ಬಳಸುವುದಾದರೆ 21 ಬಾರಿ, ಜಪ ಮಾಲೆ ಬಳಸಿ, ಕೆಳಗಿನ ಒಂದು ದೇವರ ನಾಮ ಜಪ ಅಥವಾ ದೇವರ ನಾಮ ಸ್ಮರಣೆ
ಮಾಡಿ. ಇದನ್ನು ದಿನಕ್ಕೆ ಎರೆಡು ಬಾರಿ ಮಾಡಿ.
2.
ಜಪ
ಮಾಲೆ ಬಳಸದೆ ಇದ್ದರೆ, ದಿನಕ್ಕೆ ಎರೆಡು ಬಾರಿ 30 ನಿಮಿಷ ಅಥವಾ 60 ನಿಮಿಷ ದೇವರ ನಾಮ ಜಪ ಅಥವಾ ದೇವರ
ನಾಮ ಸ್ಮರಣೆ ಮಾಡಿ.
[ಕೆಳಗಿನ ದೇವರ ನಾಮದಲ್ಲಿ ನಿಮಗೆ
ಇಷ್ಟವಾದ ಒಂದು ದೇವರ ನಾಮ ಸ್ಮರಣೆ ಮಾಡಿ. ಅಥವಾ ಯಾವುದೇ ನಿಮ್ಮ ಇಷ್ಟ ದೇವರ ನಾಮ ಸ್ಮರಣೆಯನ್ನಾದರೂ
ಮಾಡಿ.]
ದೇವರ ನಾಮ
/ ಬೀಜ ಮಂತ್ರಗಳು:
1.
ರಾಮ
ರಾಮ ರಾಮ ರಾಮ ರಾಮ ರಾಮ
2.
ಓಂ
ನಮಃ ಶಿವಾಯ
3.
ಓಂ
ಹಂ ಹನುಮತೇ ನಮಃ
4.
ಓಂ ದುಂ ದುರ್ಗಾಯೈ ನಮಃ
5.
ಓಂ
ಗಮ್ ಗಣಪತಯೇ ನಮಃ
6.
ಓಂ
ಶರವಣ ಭವ
7.
ಓಂ
ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
ನಿಮ್ಮ
ಬಿಡುವಿನ ಸಮಯದಲ್ಲಿ ಸದಾ ದೇವರ ನಾಮ ಸ್ಮರಣೆ ಮಾಡಿ, ಇದು ನಿಮಗೆ ಕೆಟ್ಟ ಯೋಚನೆಗಳು ಮನದಲ್ಲಿ ಬಾರದ
ಹಾಗೆ ಮಾಡುತ್ತದೆ. ಯಾವುದೇ ಕೆಟ್ಟ ಯೋಚನೆ ಮನದಲ್ಲಿ
ಬಂದರೆ ಕೂಡಲೇ ನಿಮ್ಮ ಇಷ್ಟ ದೇವರ ನಾಮ ಸ್ಮರಣೆ ಮಾಡಿ. ಹೀಗೆ ಮಾಡುತ್ತ ಮಾಡುತ್ತಾ, ಮನವು ಪ್ರಶಾಂತವಾಗುತ್ತದೆ.
ಸೂಚನೆ: ನೀವು ಈ ನಾಮ ಸ್ಮರಣೆ ಮಾಡುವಾಗ ನಿಮಗೆ ಸಂಕಲ್ಪದ
ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ನಿಮಗಾಗಲಿ ಅಥವಾ ಇತರರಿಗಾಗಲಿ ಮನದಲ್ಲಿ ಕೆಟ್ಟದ್ದನ್ನು
ಬಯಸಬೇಡಿ, ಒಂದು ವೇಳೆ ಕೆಟ್ಟ ಯೋಚನೆ ಬಂದರೆ ಕೂಡಲೇ ದೇವರ ನಾಮ ಸ್ಮರಣೆ ಮಾಡಿ. ಏಕೆಂದರೆ, ನಾವು ಯಾವುದೇ
ಕೆಟ್ಟದ್ದನ್ನು ಇತರರಿಗೆ ನಮ್ಮ ಮನದಲ್ಲಿ ಬಯಸಿದರೆ, ಅದರ ಕರ್ಮ ಫಲ ನಮ್ಮನ್ನು ಕಾಡುತ್ತದೆ. ಸಾದ್ಯವಾದರೆ ಒಳ್ಳೆಯದನ್ನು ಬಯಸಿ, ಇಲ್ಲ ಸುಮ್ಮನೆ ನಾಮ
ಸ್ಮರಣೆ ಮಾಡುತ್ತಾ ಇರಿ, ಇದೆ ಮುಕ್ತಿಗೆ ಮಾರ್ಗ.
ಯೆದ್
ಭಾವಮ್ ತದ್ ಭವತಿ. ಎಂದರೆ
ನಿಮ್ಮ ಭಾವನೆಯಂತೆಯೆ ನಿಮ್ಮ ಬದುಕು. ನೀವು ಸದಾ ಮನದಲ್ಲಿ ಭಯ ಪಡುವುದು ಮತ್ತು ಕೆಟ್ಟ ಯೋಚನೆ ಮಾಡುವುದನ್ನು
ಮಾಡಿದರೆ, ದೇವರು ಕೂಡ ನಿಮ್ಮನ್ನು ರಕ್ಷಿಸಲಾರ. ಹಾಗಾಗಿ ನೀವು ಸದಾ ಒಳ್ಳೆಯ ಭಾವನೆಗಳನ್ನು ಹೊಂದಿರಬೇಕು. ಅದೇ ಕಾರಣಕ್ಕೆ ಸ್ವಾಮಿ ವಿವೇಕಾನಂದ ಅವರು ಹೀಗೆ ಹೇಳಿದ್ದಾರೆ
:
ಸ್ವತಂತ್ರರಾಗಿ, ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ. ಇದುವರೆಗೆ ನಿಮಗೆ
ಆಗಿರುವುದನ್ನು ಪರೀಕ್ಷೆ ಮಾಡಿ ನೋಡಿದರೆ, ಎಂದೆಂದಿಗೂ ಬಾರದ ಇನ್ನೊಬ್ಬರ ಸಹಾಯಕ್ಕಾಗಿ ನೀವು ನೆಚ್ಚಿ
ಕುಳಿತದ್ದು ನಿರರ್ಥಕವೆಂದು ನಿಮಗೆ ಗೊತ್ತಾಗುವುದರಲ್ಲಿ ನನಗೆ ಸಂದೇಹವಿಲ್ಲ, ಬಂದ ಸಹಾಯವೆಲ್ಲವೂ ಕೂಡ
ನಿಮ್ಮಿಂದಲೇ. ಯಾರ ಸಹಾಯಕ್ಕೂ ಕಾದು ಕುಳಿತು ಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು
ಮಿಗಿಲಲ್ಲವೆ?
ಉಪಾಯ: ಮನದಲ್ಲಿ
ಬರುವ ಸಿಟ್ಟು, ಭಯ ಮತ್ತು ಕೆಟ್ಟ ಯೋಚನೆ ಬಿಡಲು ಇರುವುದು ಒಂದೇ ಮಾರ್ಗ, ನಿತ್ಯವೂ ಧ್ಯಾನ ಅಥವಾ ದೇವರ
ನಾಮ ಜಪ ಮಾಡುತ್ತಾ, ಯಾವುದಾದರು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕು. ಇಲ್ಲವಾದರೆ
ನಮ್ಮ ಮನಸ್ಸೆ ನಮಗೆ ಇಲ್ಲದ ಯೋಚನೆಗಳನ್ನು ಕೊಟ್ಟು
ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳುಮಾಡುತ್ತದೆ.
ನೀವು ಈ ಜೀವನದ ಸತ್ಯಗಳನ್ನು ಅರಿತು ಅವನ್ನು ಪಾಲಿಸಿದರೆ, ನಿಮ್ಮ ಜೀವನದಲ್ಲಿ ಶಾಂತಿ, ಶ್ರೀಮಂತಿಕೆ ಮತ್ತು ಆರೋಗ್ಯ ಅಭಿವೃದ್ದಿಯಾಗುತ್ತದೆ.
ನಿಮ್ಮ ಆಪ್ತರ ಜೀವನದಲ್ಲಿ ಶಾಂತಿ, ಶ್ರೀಮಂತಿಕೆ ಮತ್ತು ಆರೋಗ್ಯ ಅಭಿವೃದ್ಧಿಯಾಗಲು ಮಾಡಿದ, ನಿಮ್ಮ ಒಳ್ಳೆಯ ಕರ್ಮ, ನಿಮಗೆ ಜೀವನದಲ್ಲಿ ಒಳ್ಳೆಯ ಫಲ ಕೊಡುತ್ತದೆ!
ಪ್ರಿಂಟ್ ತೆಗೆಯಲು ನೀವು ಮೇಲಿನ ವಿಷಯ ಎರೆಡು ಪುಟದಲ್ಲಿ ಸರಿಯಾಗಿ ಬರಲು ಕೆಳಗಿನ ಇಮೇಜ್ ಗಳನ್ನಾದರೂ ಬಳಸಿ ಅಥವಾ ಮೇಲಿನ ವಿಷಯವನ್ನಾದರೂ ಬಳಸಿ...
ಧನ್ಯವಾದಗಳು
ಇಂತಿ ನಿಮ್ಮ
ಜಿ ಸಿ ವಿ