Monday, September 23, 2024

ಎಲ್ಲರನ್ನೂ ಕಂಡೆ, ನನ್ನನ್ನು ಕಂಡೆ!

 

ಎಲ್ಲರನ್ನೂ ಕಂಡೆ, ನನ್ನನ್ನು ಕಂಡೆ!


ತುಂಬಾ ಜನ ಶ್ರೀಮಂತರ ಕಂಡೆ.
ತುಂಬಾ ಜನ ಬಡವರನ್ನು ಕಂಡೆ.
ತುಂಬಾ ಜನ ವಿಧ್ಯಾವಂತರ ಕಂಡೆ.
ತುಂಬಾ ಜನ ಅವಿಧ್ಯಾವಂತರ ಕಂಡೆ.
ತುಂಬಾ ಜನ ಮೇಧಾವಿಗಳ ಕಂಡೆ.
ತುಂಬಾ ಜನ ಪ್ರಭಾವಿಗಳ ಕಂಡೆ.
ತುಂಬಾ ಜನ ಯುವಕರನ್ನು ಕಂಡೆ.
ತುಂಬಾ ಜನ ವಯಸ್ಕರನ್ನು ಕಂಡೆ.
ತುಂಬಾ ಜನ ಪಂಡಿತರನ್ನು ಕಂಡೆ.
ತುಂಬಾ ಜನ ಶಿಕ್ಷಕರನ್ನು ಕಂಡೆ.
ತುಂಬಾ ಜನ ಸುಳ್ಳುಗಾರರ  ಕಂಡೆ.
ತುಂಬಾ ಜನ ಸತ್ಯವಂತರ ಕಂಡೆ.
ತುಂಬಾ ಜನ ವೈದ್ಯರನ್ನು ಕಂಡೆ.
ತುಂಬಾ ಜನ ಇಂಜಿನಿಯರ್ ಗಳ ಕಂಡೆ.
ತುಂಬಾ ಜನ ಲಾಯರ್ ಗಳ ಕಂಡೆ.
ತುಂಬಾ ಜನ ಮಂತ್ರಿಗಳ ಕಂಡೆ.
ತುಂಬಾ ಜನ ಪತ್ರಕರ್ತರ ಕಂಡೆ.
ತುಂಬಾ ಜನ ಜನಸೇವಕರ ಕಂಡೆ.
ತುಂಬಾ ಜನ ರೈತರನ್ನು ಕಂಡೆ.
ತುಂಬಾ ಜನ ಪೊಲೀಸರನ್ನು ಕಂಡೆ.
ವಿವಿಧ ಮಠಗಳ ಜನರನ್ನು ಕಂಡೆ.
ವಿವಿಧ ಮತಗಳ ಜನರನ್ನು ಕಂಡೆ.
ವಿವಿಧ ದೇಶದ ಜನರನ್ನು ಕಂಡೆ.
ವಿವಿಧ ಭಾಷೆಯ ಜನರನ್ನು ಕಂಡೆ.
ಸ್ವಲ್ಪ ಜನ ಸ್ವಾಮೀಜಿಗಳನೂ ಕಂಡೆ.
ಸ್ವಲ್ಪ ಜನ ಸಾಧುಗಳನೂ ಕಂಡೆ.
ನನ್ನೊಳಗಿನ ಈಗಿನ ನನ್ನನು ಕಂಡೆ.
ಈ ಎಲ್ಲರಲ್ಲಿಯೂ ಸ್ವತಂತ್ರದ ಜೀವನವಿಲ್ಲ.
ಈ ಎಲ್ಲರಲ್ಲಿಯೂ ಆನಂದದ ಭಾವನೆಯಿಲ್ಲ.

ತುಂಬಾ ಜನ ಮಹನೀಯರನ್ನು ಹತ್ತಿರದಿಂದ ಗಮನಿಸಿದ್ದೇನೆ, ಎಷ್ಟೋ ಮಹನೀಯರನ್ನು ಮಾತನಾಡಿಸಿ ಅವರ ಜೀವನದ ಬಗ್ಗೆ ಅರಿತಿದ್ದೇನೆ. ಆಶ್ಚರ್ಯ ಎಂದರೆ, ಎಲ್ಲರೂ ಮಹಾ ಆನಂದದಲ್ಲಿ ಜೀವನ ನಡೆಸುವ ಹಾಗೆ ನಾಟಕ ಆಡುತ್ತಿದ್ದಾರೆ. ಆದರೆ, ಅವರ ಅಂತರಂಗಕ್ಕೆ ಗೊತ್ತಿದೆ ಅವರ ಉಳುಕು, ಕೊಳಕು, ಹತಾಶೆ, ದುಃಖ ಮತ್ತು ನೋವು. ವಾಸ್ತವದಲ್ಲಿ ನಾನು ಕಂಡ ಮಹನೀಯರು ದುಃಖ, ನೋವಿನಲ್ಲಿ ಇದ್ದರೂ ಹೊರಗೆ ಹೇಳಿಕೊಳ್ಳಲು ಆಗದೆ, ಒಳಗೆ ನುಂಗಿ ಕೊಳ್ಳಲು ಆಗದೆ, ಹಾಗೆಯೇ ಜೀವಿಸುತ್ತಿದ್ದಾರೆ. ಕೆಲವರನ್ನು ಹೊರತು ಪಡಿಸಿ, ಎಲ್ಲರ ಕಥೆಯೂ ಅಷ್ಟೇ. ಎಷ್ಟು ದಿನಗಳ ಕಾಲ ಈ ನಾಟಕ, ಹೀಗೆ ಮರೆಮಾಚಿ ಹೆಚ್ಚುಕಾಲ ಬದುಕಿದರು, ನೀವು ಇನ್ನೂ ಹೆಚ್ಚು ನೋವು ಮತ್ತು ದುಃಖ ಅನುಭವಿಸುವಿರೇ ಹೊರತು, ಅದಕ್ಕಿಂತಲೂ ಮಿಗಿಲಾದದ್ದು ಏನು ಸಿಗುವುದಿಲ್ಲ.

ಯಾರೊಬ್ಬರ ಮಾತು ಅಥವಾ ಹಾವಭಾವ ನಿಮ್ಮನ್ನು ಕೆರಳಿಸುತ್ತದೆ ಎಂದರೆ ನೀವು ಅಹಂಕಾರದ ಅಧೀನದಲ್ಲಿ ಇದ್ದೀರಿ ಎಂದು ಅರ್ಥ. ಅಹಂಕಾರ ಇದ್ದವರಲ್ಲಿ ಸ್ವಾತಂತ್ರ್ಯ ಮತ್ತು ಆನಂದದ ಜೀವನ ಇರಲು ಸಾದ್ಯವಿಲ್ಲ.

ಯಾರೊಬ್ಬರ ಮೇಲಿನ ಪ್ರೀತಿ ನಿಮ್ಮನ್ನು ಸುಳ್ಳು, ಅಸತ್ಯ ಆಡುವಂತೆ ಅಥವಾ ಇತರರನ್ನು ದ್ವೇಷ ಮಾಡುವಂತೆ ಮಾಡಿದೆ ಎಂದರೆ, ನೀವು ಮಮಕಾರದ ಅಧೀನದಲ್ಲಿ ಇದ್ದೀರಿ ಎಂದು ಅರ್ಥ. ಮಮಕಾರದಲ್ಲಿ ಇದ್ದವರು ಸಹ ಸ್ವಾತಂತ್ರ್ಯ ಮತ್ತು ಆನಂದದಲ್ಲಿ ಜೀವಿಸಲು ಸಾದ್ಯವಿಲ್ಲ.

ನಿಜ, ದ್ವೇಷ, ಅಸೂಯೆ, ಸಿಟ್ಟು, ಸಹಜವಾಗಿ ಆಯಾ ಸಂದರ್ಭಕ್ಕೆ ಬರಬೇಕು. ಆದರೆ, ಅದೇ ಜೀವನ ಆಗಬಾರದು. ಊಟಕ್ಕೆ ಉಪ್ಪಿನಕಾಯಿ ಬೇಕು, ಆದರೆ ಉಪ್ಪಿನ ಕಾಯಿಯೇ ಊಟ ಆಗಬಾರದು. ಇದನ್ನು ನಾನು ಇಲ್ಲಿ ಒತ್ತಿ ಹೇಳಲು ಕಾರಣ; ನಾನು ಈ ದ್ವೇಷ, ಅಸೂಯೆ, ಸಿಟ್ಟಿನಿಂದ ನನ್ನ ಆರೋಗ್ಯ ತುಂಬಾ ಹಾಳು ಮಾಡಿಕೊಂಡು, ನಂತರ ಧ್ಯಾನ, ಸೂರ್ಯ ನಮಸ್ಕಾರ, ವಾಕ್,  ಯೋಗದ ಮೂಲಕ ಚೇತರಿಸಿ ಕೊಂಡಿದ್ದೇನೆ. ನನ್ನ ರೀತಿಯ ತೊಂದರೆ ಇತರರಿಗೆ ಬಾರದಿರಲಿ ಎಂದು ಇಲ್ಲಿ ಹೇಳುತ್ತಿದ್ದೇನೆ.

ಸಂತ ಕಬೀರರು ಹೀಗೆ ಹೇಳುತ್ತಾರೆ...

1.
ತೀರ್ಥಯಾತ್ರೆಗೆ ಫಲ ಒಂದು.
ಸಾಧು ಸಂಘಕೆ ನಾಲ್ಕು.
ಸದ್ಗುರು ಸಂಘಕೆ ಅನೇಕ ಫಲ.


"ಗುರುವಿನ  ಅವಶ್ಯಕತೆ ಮತ್ತು ಅದರ ಲಾಭದ ಬಗ್ಗೆ".

2.
ಕೆಡುಕರನು ನಾ ಹುಡುಕುತ ಹೋರಟೆ
ಕೆಡುಕರಾರು ಸಿಗಲಿಲ್ಲ.
ನನ್ನಯ ಮನವನು ನಾನೆ ನೋಡೆ.
ನನಗಿಂತ ಕೆಡುಕರಿಲ್ಲ.


"ಅನ್ಯರ ವಿಮರ್ಶೆ ಬಿಟ್ಟು, ಆತ್ಮ ವಿಮರ್ಶೆ ಮಾಡುವ ಬಗ್ಗೆ"

3.
ರಾತ್ರಿ ಕಳೆಯಿತು ನಿದ್ದೆಯಲೀ
ದಿನ ಕಳೆಯಿತು ಊಟದಲಿ
ರತ್ನದಂತ ಈ ನರ ಜನ್ಮ
ಮೂರೂ ಕಾಸಿಗೆ ಹೋಯಿತು.


"84 ಲಕ್ಷ ಜೀವರಾಶಿಯಾಗಿ ಹುಟ್ಟಿದ ಮೇಲೆ ಸಿಕ್ಕ ಅಪರೂಪದ ಈ ಮನುಷ್ಯ ಜನ್ಮವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಬಗ್ಗೆ"

4.
ಗ್ರಂಥ ಗ್ರಂಥ ಗಳನ್ನು ಓಡಿದವನು
ಪಂಡಿತನಲ್ಲ ಖಂಡಿತ
ಪ್ರೇಮವೆಂಬ ಎರಡಕ್ಷರವನು
ಅರಿತವನೆ ಪಂಡಿತ.


"ಪ್ರೀತಿಯ ಶಕ್ತಿ ಮತ್ತು ಮಹತ್ವದ ಬಗ್ಗೆ"

ಋಷಿ, ಮುನಿ, ಬುದ್ಧ, ಮಹಾವೀರರ ಕೆಲವು ಸೂತ್ರಗಳ ಪಾಲನೆ, ನನ್ನಲ್ಲಿ ಅಲ್ಪ ಮಟ್ಟಿಗಿನ ಸ್ವಾತಂತ್ರ್ಯ, ಆನಂದ ಮತ್ತು ಶಾಂತಿಯನ್ನು ತಂದಿದೆ. ನಿಜವಲ್ಲದ ತೋರಿಕೆ, ಶಾಶ್ವತವಲ್ಲದ ಶ್ರೀಮಂತಿಕೆ, ಬಿಟ್ಟು ಕೇವಲ ಕೆಲವು ದಿನ ಆಧ್ಯಾತ್ಮದ ಸಾಧನೆ ಮಾಡಿನೋಡಿ. ಆದ್ಯಾತ್ಮ ಎನ್ನುವ ಹಣ್ಣಿನ ಸಿಪ್ಪೆಯೆ ಅತ್ಯಂತ ರುಚಿಯಾಗಿದೆ, ಅದರ ಹಣ್ಣು ಹೇಗಿರಬಹುದು ನೀವೇ ಊಹಿಸಿ!

ಧ್ಯಾನ, ನಾಮ ಜಪ, ಯಜ್ಞ, ಹೋಮ, ಪೂಜೆ, ಪ್ರಾರ್ಥನೆ, ನಿಮಗೆ ಕೆಲವೇ ದಿನದಲ್ಲಿ ಆ ಆದ್ಯಾತ್ಮ ಎನ್ನುವ ಹಣ್ಣಿನ ಸಿಪ್ಪೆಯೆ ರುಚಿಯನ್ನು ತೋರಿಸಬಲ್ಲವು. ನಿಮ್ಮಲ್ಲಿ ಇನ್ನೂ ಸ್ವಲ್ಪ ಶ್ರದ್ದೆ, ಭಕ್ತಿ ಮತ್ತು ಸಾಧನೆ ಇದ್ದರೆ, ಆ ಹಣ್ಣಿನ ರುಚಿಯನ್ನು ಸಹ ತೋರಿಸಬಲ್ಲವು.

ನೆನಪಿರಲಿ, ಎಷ್ಟುಕಾಲ ಬಾಳುತ್ತೇವೆ ಎನ್ನುವುದು ಮುಖ್ಯವಲ್ಲ, ಹೇಗೆ ಬಾಳುತ್ತೇವೆ ಅಥವಾ ಹೇಗೆ ಬಾಳಿದ್ದೆವು ಎನ್ನುವುದು ಮುಖ್ಯ.

ಸೂಚನೆ: ಹಿಂದಿನ ಕಾಲದಲ್ಲಿ ಋಷಿಗಳು, ರಾಜರು, ಇತರ ಸಾಮಾನ್ಯ ಜನರು ಸಾಮಾಜಿಕ ಸಂಸಾರದಲ್ಲಿ ಇದ್ದರು. ಆದರೂ ಅವರಲ್ಲಿ ಬಹಳಷ್ಟು ಜನ ಆ ನಿಜವಾದ ಸ್ವಾತಂತ್ರ್ಯ ಮತ್ತು ನಿಜವಾದ ಆನಂದದ ಜೀವನ ನಡೆಸುತ್ತಿದ್ದರು.

ದಿನವೂ ಸ್ವಲ್ಪ ಕಾಲ ಆಧ್ಯಾತ್ಮದ ಸಾಧನೆ ಮಾಡುತ್ತಾ ಮತ್ತು ನಿಮ್ಮ ದೈಹಿಕ ಆರೋಗ್ಯ ಕಡೆ ಗಮನ ಕೊಡುತ್ತಾ ಜೀವಿಸಿ.

ನಿಮಗೆ ಆ ಆಧ್ಯಾತ್ಮದ ರುಚಿಯಾದ ಹಣ್ಣಿನ ಸಲಾಡ್ ತಿನ್ನುವ ಇಚ್ಚೆ ಇದ್ದರೆ? ನಿಮಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇದ್ದರೆ ಕೆಳಗೆ ಹೇಳಿದ ಪುಸ್ತಕಗಳನ್ನು ಓದಿ...👇

The Power of Now
[A Guide To Spiritual Enlightenment]
By: Eckhart Tolle

Awareness
[The key to living in balance]
By: Osho

Courage
[The Joy of Living Dangerously]
By: Osho

Change your thoughts Change your life
By: Dr. Wayne W. Dyer.

Sri Ramana Gita
Source: Ramana Maharshi

ನಿಮಗೆ ಪುಸ್ತಕ ಕೊಂಡು ಓದಲು ಆಗದೆ ಇದ್ದರೂ ಚಿಂತಿಸ ಬೇಡಿ, ದಿನವೂ ಧ್ಯಾನದ ಅಭ್ಯಾಸ ಮಾಡಿ, ಧ್ಯಾನ ಆ ವಿಶ್ವದ ಉನ್ನತ ಜ್ಞಾನವನ್ನು ನಿಮಗೆ ನಿಮ್ಮ ಅಂತಃಪ್ರಜ್ಞೆಯ ಮೂಲಕ ತಂದು ಕೊಡುತ್ತದೆ.

ಧ್ಯಾನ ವಿಶ್ವದ ಡೇಟಾಬೇಸ್ ಅನ್ನು ನಿಮ್ಮ ಮೆದುಳಿಗೆ ಕನೆಕ್ಟ್ ಮಾಡುವ ಸಾಧನ.

ಸಂತ ಕಬೀರ ವಾಣಿಗಳನ್ನು ಕೇಳಲು...👇

https://youtu.be/POAMEh7rgmY?si=B2m7p9hP8rH-FBZr


ಧನ್ಯವಾದಗಳು

ಇಂತಿ ನಿಮ್ಮ

ಜಿ ಸಿ ವಿ 🙏💐💮
Visit My YouTube channel: @gcvkannada