Saturday, January 7, 2023

ಜೀವನದ ಸತ್ಯಗಳು - ದೇವರ ನಾಮ ಜಪ / ಸ್ಮರಣೆ

 

ಜೀವನದ ಸತ್ಯಗಳು - ದೇವರ ನಾಮ ಜಪ / ಸ್ಮರಣೆ 

ನಿಮ್ಮ ದೇಹದ ಕಣ ಕಣ ದಲ್ಲಿಯೂ, ನಿಮ್ಮ ದೇಹದ ಪ್ರತಿ ಜೀವಕೋಶದಲ್ಲಿಯೂ ಆ ದೇವರ ನಾಮವೇ ತುಂಬಿದ್ದರೆ, ನಿಮ್ಮ ಜೀವನದಲ್ಲಿ ಯಾವ ಕಷ್ಟ ಮತ್ತು ತೊಂದರೆಗೆ ಅಲ್ಲಿ ಜಾಗವೇ ಇರುವುದಿಲ್ಲ.

ನೀವು ಆಡುವ ಪ್ರತಿ ಮಾತು, ನೋಡುವ ಪ್ರತಿ ನೋಟ, ನಿಮ್ಮ ಪ್ರತಿ ಉಸಿರು, ನಿಮ್ಮ ಪ್ರತಿ ಹೆಜ್ಜಯಲ್ಲೂ, ಪ್ರೀತಿ ತುಂಬಿರಲಿ. ಈ ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನು ಸ್ವಲ್ಪವೂ ಕುಗ್ಗಿಸಲಾರದು.

ಪ್ರೀತಿಗೆ ಶಕ್ತಿಯಿದೆ, ಕೃತಜ್ಞತೆಯ ಭಾವಕ್ಕೆ ಇನ್ನೂ ಹೆಚ್ಚು ಶಕ್ತಿ ಇದೆ, ಸರ್ವವನ್ನೂ ಭಗವಂತನ ಲೀಲೆ ಎಂದು ನೋಡುವ ಭಾವಕ್ಕೆ ಇನ್ನೂ ದೊಡ್ಡ ಶಕ್ತಿ ಇದೆ....!

ನೆನಪಿರಲಿ, ಬರೀ ಧ್ಯಾನ, ನಾಮ ಜಪ, ಜಯವನ್ನು ತರುವುದಿಲ್ಲ, ಧ್ಯಾನದ ಜೊತೆಗೆ ನೀವು ಮಾಡುವ ಕೆಲಸದಲ್ಲಿ ನಿಮ್ಮನ್ನು ನೀವು 100% ತೊಡಗಿಸಿಕೊಳ್ಳಿ, ಬೇರೆ ಯಾವ ಯೋಚನೆ ಮಾಡದೆ, ಸಂಪೂರ್ಣವಾಗಿ ಆ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಕೊಂಡು ಕೆಲಸ ಮಾಡಿದರೆ, ಆಗ ಜಯ ನಿಮ್ಮ ಕಾಲ ಬಳಿಗೆ ಬರುತ್ತದೆ...👣


----> ಜೀವನದ ಸತ್ಯಗಳು <-----

ಹಣವಂತರಿಗೆ ಮತ್ತು ವಿದ್ಯಾವಂತರಿಗೆ ಕಷ್ಟ ಮತ್ತು ನೋವು ಬರುವುದಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಈ ಭೂಮಿಯ ಮೇಲೆ ಜನಿಸಿದ ಪ್ರತಿ ಜೀವಿಯೂ ಕಷ್ಟ ಮತ್ತು ನೋವು ಅನುಭವಿಸದೆ ವಿಧಿಯಿಲ್ಲ. "ಆನೆಯ ಕಷ್ಟ ಆನೆಗೆ, ಇರುವೆಯ ಕಷ್ಟ ಇರುವೆಗೆ".

ಆನಂದದ ಜೀವನಕ್ಕೆ ಸರಳ ಮಾರ್ಗಗಳು...

·        ಆಸೆಗಳು ಮತ್ತು ನಿರೀಕ್ಷೆಗಳು ನಮ್ಮ ಮನಸ್ಸಿನ ಶಾಂತಿಯನ್ನು ದೂರ ಮಾಡುತ್ತವೆ.

 

·        ಇತರರನ್ನು ದೂಷಣೆ ಮಾಡುವುದು ಮತ್ತು ಸ್ವಯಂ ದೂಷಣೆ ಮಾಡುವುದು ನಮ್ಮ  ಶ್ರೀಮಂತಿಕೆಯನ್ನು ದೂರ ಮಾಡುತ್ತವೆ.

 

·        ಸಿಟ್ಟು ಮತ್ತು ಭಯ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ.

 

·        ನಮ್ಮ ಜೀವನದಲ್ಲಿ ಒಳ್ಳೆಯದೇ ಆಗಲಿ ಅಥವಾ ಕೆಟ್ಟದ್ದೇ ಆಗಲಿ, ಯಾರನ್ನು ದೂಷಿಸದೆ, ಎಲ್ಲವೂ ದೇವರ ಪ್ರಸಾದ ಎಂದು ತಾಳ್ಮೆಯಿಂದ ಸ್ವೀಕಾರ ಮಾಡುವವರಿಗೆ, ಭಗವಂತನ ಕೃಪೆ ಪ್ರಾಪ್ತವಾಗುತ್ತದೆ.

 

ನಮ್ಮ ಎಲ್ಲಾ ಕರ್ಮಗಳನ್ನು ಸುಡಲು ಈ ಐದು ಸೂತ್ರಗಳು ಸಹಾಯ ಮಾಡಬಲ್ಲವು:

1.      ದಿನಕ್ಕೆ ಎರಡು ಗಂಟೆ ಧ್ಯಾನ ಅಥವಾ ದೇವರ ನಾಮ ಜಪ ಅಥವಾ ಪ್ರಾರ್ಥನೆ ಮಾಡಬೇಕು.

 

2.      ಜೀವನದಲ್ಲಿ ಬರುವ ಎಲ್ಲಾ ಅವಮಾನ, ಕಷ್ಟ, ಅಡೆ ತಡೆಗಳನ್ನು ಸಹನೆ ಮತ್ತು ತಾಳ್ಮೆಯಿಂದ ದೇವರ ಪ್ರಸಾದ ಎಂದು ಸ್ವೀಕಾರ ಮಾಡಬೇಕು.

 

3.      ಪ್ರತಿ ದಿನವೂ ದೈಹಿಕ ಶ್ರಮ ಅಥವಾ ಸಾಧ್ಯವಾದಷ್ಟು ಕೆಲಸ ಮಾಡಲೇ ಬೇಕು, ಅದು ನಮ್ಮ ಮನಸ್ಸಿನ ಚಿಂತೆಯ ಬಲೆಯಿಂದ ತಪ್ಪಿಸಿಕೊಳ್ಳಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

 

4.      ನಮಗಿಂತ ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಲಾದರೆ ದಾನ ಅಥವಾ ಸಹಾಯ ಮಾಡಬೇಕು, ಇಲ್ಲವಾದರೆ ಅವರಿಗೆ ಒಳ್ಳೆಯದಾಗಲಿ ಎಂದು ಮನದಲ್ಲಿ ದೇವರ ಪ್ರಾರ್ಥನೆ ಮಾಡಬೇಕು.

 

5.      ಸತ್ಯವಾದರೂ ಸರಿ ಇತರರಿಗೆ ಹಿತವೆನ್ನಿಸುವ ಹಾಗಿದ್ದರೆ ಮಾತ್ರ ಮಾತನಾಡಿ. ಹಾಗಂತ ಹಿತವಾದ ಸುಳ್ಳನ್ನು ಹೇಳುವುದು ಸಹ ಒಳ್ಳೆಯದಲ್ಲ. ಮೌನವೇ ಬಂಗಾರ.

 

ಮನುಜ ಪ್ರಯತ್ನ ಮತ್ತು ದೈವ ಪ್ರೇರಣೆ ಇದ್ದರೆ ಎಲ್ಲವೂ ಸಾಧ್ಯ. ಶುಭವಾಗಲಿ!

ಸೂಚನೆ: ಹೋಟೆಲ್ ಮತ್ತು ಬೇಕರಿ ತಿಂಡಿ ತಿನಿಸುಗಳು, ದಿನ ಪತ್ರಿಕೆ, ಮೋಬೈಲ್ ಹಾಗು ಟಿವಿ ಆರೋಗ್ಯಕ್ಕೆ ಹಾನಿಕಾರಕ, ಇವುಗಳಿಂದ ದೂರ ಇರಿ.

 

 

----> ದೇವರ ನಾಮ ಜಪ / ಸ್ಮರಣೆ <-----

ದಿನಕ್ಕೆ ಎರೆಡು ಬಾರಿ ದೇವರ ನಾಮ ಜಪ ಮಾಡಿ.

1.      ಜಪ ಮಾಲೆ ಬಳಸುವುದಾದರೆ 21 ಬಾರಿ, ಜಪ ಮಾಲೆ ಬಳಸಿ, ಕೆಳಗಿನ ಒಂದು ದೇವರ ನಾಮ ಜಪ ಅಥವಾ ದೇವರ ನಾಮ ಸ್ಮರಣೆ ಮಾಡಿ. ಇದನ್ನು ದಿನಕ್ಕೆ ಎರೆಡು ಬಾರಿ ಮಾಡಿ.

2.      ಜಪ ಮಾಲೆ ಬಳಸದೆ ಇದ್ದರೆ, ದಿನಕ್ಕೆ ಎರೆಡು ಬಾರಿ 30 ನಿಮಿಷ ಅಥವಾ 60 ನಿಮಿಷ ದೇವರ ನಾಮ ಜಪ ಅಥವಾ ದೇವರ ನಾಮ ಸ್ಮರಣೆ ಮಾಡಿ. 

[ಕೆಳಗಿನ ದೇವರ ನಾಮದಲ್ಲಿ ನಿಮಗೆ ಇಷ್ಟವಾದ ಒಂದು ದೇವರ ನಾಮ ಸ್ಮರಣೆ ಮಾಡಿ. ಅಥವಾ ಯಾವುದೇ ನಿಮ್ಮ ಇಷ್ಟ ದೇವರ ನಾಮ ಸ್ಮರಣೆಯನ್ನಾದರೂ ಮಾಡಿ.]  

ದೇವರ ನಾಮ / ಬೀಜ ಮಂತ್ರಗಳು:

1.     ರಾಮ ರಾಮ ರಾಮ ರಾಮ ರಾಮ ರಾಮ

2.     ಓಂ ನಮಃ ಶಿವಾಯ

3.     ಓಂ ಹಂ ಹನುಮತೇ ನಮಃ

4.     ಓಂ ದುಂ ದುರ್ಗಾಯೈ ನಮಃ

5.     ಓಂ ಗಮ್ ಗಣಪತಯೇ ನಮಃ

6.     ಓಂ ಶರವಣ ಭವ

7.     ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ

 

ನಿಮ್ಮ ಬಿಡುವಿನ ಸಮಯದಲ್ಲಿ ಸದಾ ದೇವರ ನಾಮ ಸ್ಮರಣೆ ಮಾಡಿ, ಇದು ನಿಮಗೆ ಕೆಟ್ಟ ಯೋಚನೆಗಳು ಮನದಲ್ಲಿ ಬಾರದ ಹಾಗೆ ಮಾಡುತ್ತದೆ.  ಯಾವುದೇ ಕೆಟ್ಟ ಯೋಚನೆ ಮನದಲ್ಲಿ ಬಂದರೆ ಕೂಡಲೇ ನಿಮ್ಮ ಇಷ್ಟ ದೇವರ ನಾಮ ಸ್ಮರಣೆ ಮಾಡಿ. ಹೀಗೆ ಮಾಡುತ್ತ ಮಾಡುತ್ತಾ, ಮನವು ಪ್ರಶಾಂತವಾಗುತ್ತದೆ.

ಸೂಚನೆ: ನೀವು ಈ ನಾಮ ಸ್ಮರಣೆ ಮಾಡುವಾಗ ನಿಮಗೆ ಸಂಕಲ್ಪದ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ನಿಮಗಾಗಲಿ ಅಥವಾ ಇತರರಿಗಾಗಲಿ ಮನದಲ್ಲಿ ಕೆಟ್ಟದ್ದನ್ನು ಬಯಸಬೇಡಿ, ಒಂದು ವೇಳೆ ಕೆಟ್ಟ ಯೋಚನೆ ಬಂದರೆ ಕೂಡಲೇ ದೇವರ ನಾಮ ಸ್ಮರಣೆ ಮಾಡಿ. ಏಕೆಂದರೆ, ನಾವು ಯಾವುದೇ ಕೆಟ್ಟದ್ದನ್ನು ಇತರರಿಗೆ ನಮ್ಮ ಮನದಲ್ಲಿ ಬಯಸಿದರೆ, ಅದರ ಕರ್ಮ ಫಲ ನಮ್ಮನ್ನು ಕಾಡುತ್ತದೆ.  ಸಾದ್ಯವಾದರೆ ಒಳ್ಳೆಯದನ್ನು ಬಯಸಿ, ಇಲ್ಲ ಸುಮ್ಮನೆ ನಾಮ ಸ್ಮರಣೆ ಮಾಡುತ್ತಾ ಇರಿ, ಇದೆ ಮುಕ್ತಿಗೆ ಮಾರ್ಗ.

ಯೆದ್ ಭಾವಮ್ ತದ್ ಭವತಿ. ಎಂದರೆ ನಿಮ್ಮ ಭಾವನೆಯಂತೆಯೆ ನಿಮ್ಮ ಬದುಕು. ನೀವು ಸದಾ ಮನದಲ್ಲಿ ಭಯ ಪಡುವುದು ಮತ್ತು ಕೆಟ್ಟ ಯೋಚನೆ ಮಾಡುವುದನ್ನು ಮಾಡಿದರೆ, ದೇವರು ಕೂಡ ನಿಮ್ಮನ್ನು ರಕ್ಷಿಸಲಾರ. ಹಾಗಾಗಿ ನೀವು ಸದಾ ಒಳ್ಳೆಯ ಭಾವನೆಗಳನ್ನು ಹೊಂದಿರಬೇಕು.  ಅದೇ ಕಾರಣಕ್ಕೆ ಸ್ವಾಮಿ ವಿವೇಕಾನಂದ ಅವರು ಹೀಗೆ ಹೇಳಿದ್ದಾರೆ :

ಸ್ವತಂತ್ರರಾಗಿ,  ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ. ಇದುವರೆಗೆ ನಿಮಗೆ ಆಗಿರುವುದನ್ನು ಪರೀಕ್ಷೆ ಮಾಡಿ ನೋಡಿದರೆ, ಎಂದೆಂದಿಗೂ ಬಾರದ ಇನ್ನೊಬ್ಬರ ಸಹಾಯಕ್ಕಾಗಿ ನೀವು ನೆಚ್ಚಿ ಕುಳಿತದ್ದು ನಿರರ್ಥಕವೆಂದು ನಿಮಗೆ ಗೊತ್ತಾಗುವುದರಲ್ಲಿ ನನಗೆ ಸಂದೇಹವಿಲ್ಲ, ಬಂದ ಸಹಾಯವೆಲ್ಲವೂ ಕೂಡ ನಿಮ್ಮಿಂದಲೇ. ಯಾರ ಸಹಾಯಕ್ಕೂ ಕಾದು ಕುಳಿತು ಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

 

ಉಪಾಯ: ಮನದಲ್ಲಿ ಬರುವ ಸಿಟ್ಟು, ಭಯ ಮತ್ತು ಕೆಟ್ಟ ಯೋಚನೆ ಬಿಡಲು ಇರುವುದು ಒಂದೇ ಮಾರ್ಗ, ನಿತ್ಯವೂ ಧ್ಯಾನ ಅಥವಾ ದೇವರ ನಾಮ ಜಪ ಮಾಡುತ್ತಾ, ಯಾವುದಾದರು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕು. ಇಲ್ಲವಾದರೆ ನಮ್ಮ ಮನಸ್ಸೆ ನಮಗೆ ಇಲ್ಲದ ಯೋಚನೆಗಳನ್ನು  ಕೊಟ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳುಮಾಡುತ್ತದೆ.

ನೀವು ಈ ಜೀವನದ ಸತ್ಯಗಳನ್ನು ಅರಿತು ಅವನ್ನು ಪಾಲಿಸಿದರೆ, ನಿಮ್ಮ ಜೀವನದಲ್ಲಿ ಶಾಂತಿ, ಶ್ರೀಮಂತಿಕೆ ಮತ್ತು ಆರೋಗ್ಯ ಅಭಿವೃದ್ದಿಯಾಗುತ್ತದೆ.

ಇವು ನಿಮಗೆ ಇಷ್ಟ ಆದರೆ, ಇದನ್ನು ಪ್ರಿಂಟ್ ತೆಗೆದು, ಮತ್ತು ಒಂದು 108 ಮಣಿಯ ತುಳಸಿ ಮಾಲೆಯನ್ನು ನಿಮ್ಮ ಪೋಷಕರು, ಸಂಬಂಧಿಕರು, ಹಾಗೂ ಶಿಕ್ಷಕರಿಗೆ ಉಡುಗೊರೆಯಾಗಿ ಕೊಡಿ. ಯಾರಿಗೆ ಮೊಬೈಲ್ ನೋಡಿ ಧ್ಯಾನ ಮಾಡಲು ಸಾದ್ಯವಿಲ್ಲವೊ ಅವರಿಗೆ ಈ ವಿಷಯದ ಪ್ರಿಂಟ್ ತೆಗೆದ ಹಾಳೆ ಮತ್ತು ಜಪ ಮಾಲೆ ಉಡುಗೊರೆಯಾಗಿ ಕೊಟ್ಟು, ಅವರಿಗೂ ಧ್ಯಾನ, ಜಪದ ಉಪಯೋಗಗಳನ್ನು ಪಡೆಯಲು ಸಹಾಯ ಮಾಡಿ.

ನಿಮ್ಮ ಆಪ್ತರ ಜೀವನದಲ್ಲಿ ಶಾಂತಿ, ಶ್ರೀಮಂತಿಕೆ ಮತ್ತು ಆರೋಗ್ಯ ಅಭಿವೃದ್ಧಿಯಾಗಲು ಮಾಡಿದ, ನಿಮ್ಮ ಒಳ್ಳೆಯ ಕರ್ಮ, ನಿಮಗೆ ಜೀವನದಲ್ಲಿ ಒಳ್ಳೆಯ ಫಲ ಕೊಡುತ್ತದೆ!

ಪ್ರಿಂಟ್ ತೆಗೆಯಲು ನೀವು ಮೇಲಿನ ವಿಷಯ ಎರೆಡು ಪುಟದಲ್ಲಿ ಸರಿಯಾಗಿ ಬರಲು ಕೆಳಗಿನ ಇಮೇಜ್ ಗಳನ್ನಾದರೂ ಬಳಸಿ ಅಥವಾ ಮೇಲಿನ ವಿಷಯವನ್ನಾದರೂ ಬಳಸಿ...

ನೀವು ದಿನವೂ ತಪ್ಪದೆ ಈ ಧ್ಯಾನ ಅಥವಾ ನಾಮ ಜಪ 41 ದಿನ ಮಾಡಿದರೆ ನಿಮ್ಮ ಆರೋಗ್ಯ, ಶ್ರೀಮಂತಿಕೆ ಮತ್ತು ಮಾನಸಿಕ ಶಾಂತಿಯಲ್ಲಿ ಗಣನೀಯ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಒಳ್ಳೆಯ ಸಂಕಲ್ಪ ಮಾಡಿ ಆರಂಭಿಸಿ. 

ಧನ್ಯವಾದಗಳು

ಇಂತಿ ನಿಮ್ಮ

ಜಿ ಸಿ ವಿ

ಪುಟ -1 
ಪುಟ - 2



 

Friday, July 1, 2022

ಆರೋಗ್ಯ ಆಫ್ಫಾರ್ಮೆಷನ್

 

ಆರೋಗ್ಯ ಆಫ್ಫಾರ್ಮೆಷನ್

 

ನಮಸ್ಕಾರ ಸ್ನೇಹಿತರೆ, ನಾನು ಇಲ್ಲಿ ಕೊಟ್ಟಿರುವ ಆರೋಗ್ಯದ ಆಫ್ಫಾರ್ಮಶನ್ ಗಳು, ತುಂಬಾ ಪರಿಣಾಮ ಕಾರಿ ಮತ್ತು ಪ್ರಾಯೋಗಿಕವಾಗಿ ವಿಶ್ವದಲ್ಲಿ ಆಫ್ಫಾರ್ಮಶನ್ ಮೂಲಕ ಆರೋಗ್ಯ ಸುಧಾರಣೆಗೆ ಅನುಸರಿಸುವ ಉತ್ತಮ ಪದ್ಧತಿಗಳು.

 ನೀವು ಸಂಪೂರ್ಣ ದೇಹದ ಆರೋಗ್ಯ ಬಯಸುವುದಾದರೆ ನಾನು ಇಲ್ಲಿ ಕೊಟ್ಟಿರುವ ಎಲ್ಲಾ ಆಫ್ಫಾರ್ಮಶನ್ ಗಳನ್ನ ಒಂದು ಹಾಳೆಯಲ್ಲಿ ಬರೆದುಕೊಂಡು ದಿನವೂ ಹೇಳಿಕೊಳ್ಳಿ ಅಥವಾ ಈ ವಿಡಿಯೋ ಕೇಳುತ್ತಾ ಮನದಲ್ಲಿ ಆಫ್ಫಾರ್ಮಶನ್ ಹೇಳಿಕೊಂಡು ಅಭ್ಯಾಸ ಮಾಡಿ. ಅಥವಾ ನನ್ನ ಯು ಟ್ಯೂಬ್ ವಿಡಿಯೋ ಆರೋಗ್ಯದ ಅಫಾರ್ಮೇಶನ್ ಧ್ಯಾನ ಎನ್ನುವ ವಿಡಿಯೋ ಕೇಳುತ್ತಾ ಅಭ್ಯಾಸ ಮಾಡಿ.

 ನಿಮ್ಮಲ್ಲಿ ದೇಹದ ಯಾವುದಾದರೂ ಒಂದು ಅಂಗಾಂಗಕ್ಕೆ ಸಂಬಂದಿಸಿದ ಅನಾರೋಗ್ಯ ಸಮಸ್ಯೆ ಇದ್ದರೆ, ನೀವು ಆ ಅಂಗಾಂಗಕ್ಕೆ ಸಂಬಂದಿಸಿದ ಆಫ್ಫಾರ್ಮಶನ್ ಗಳನ್ನು ಮಾತ್ರ ಪೇಪರ್ ನಲ್ಲಿ ಬರೆದು ಕೊಂಡು ಅಭ್ಯಾಸ ಮಾಡಿ.

 ನಿಮ್ಮಆಫ್ಫಾರ್ಮಶನ್ ಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು, ನಾನು ಹೇಳುವ ವಿಧಾವನ್ನು ಅನುಸರಿಸಿ ಅಭ್ಯಾಸ ಮಾಡಿ.

 ನಿಮ್ಮ ಆಫ್ಫಾರ್ಮಶನ್ ಬೇಗ ನಿಮಗೆ ಫಲಿತಾಂಶ ಕೊಡಬೇಕೆಂದರೆ ನಿಮಗೆ ನಿಮ್ಮ ಮೇಲೆ ಸಂಪೂರ್ಣವಾದ ನಂಬಿಕೆ ಇರಬೇಕು. ನಿಮಗೆ ನಿಮ್ಮ ಆತ್ಮದ ಶಕ್ತಿಯ ಮೇಲೆ ಮತ್ತು ಆ ಪರಮಾತ್ಮನ ಮೇಲೆ ಸಂಪೂರ್ಣವಾದ ವಿಸ್ವಾಸ ಇರಬೇಕು.

 ಮತ್ತು ಈ  ಆಫ್ಫಾರ್ಮಶನ್ ಗಳನ್ನ, ನೀವು ದಿನವೂ ನಾನು ಹೇಳಿದ ಸಮಯದಲ್ಲಿ, ಹೇಳಿದ ವಿಧಾನವನ್ನು ಅನುಸರಿಸಿ ತಪ್ಪದೆ ಅಭ್ಯಾಸ ಮಾಡಬೇಕು. 

 ಅಭ್ಯಾಸ ಮಾಡುವಾಗ ನೀವು, ಪ್ರತಿ ಒಂದು ಸಮಯದಲ್ಲಿ, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಹೇಳಿಕೊಳ್ಳಬೇಕು.

 ನೀವು ಪ್ರತಿ ಬಾರಿ ಮನದಲ್ಲಿ ಹೇಳಿಕೊಳ್ಳುವಾಗ, ಅದನ್ನು ಪೂರ್ಣ ವಿಸ್ವಾಸಾದದಿಂದ ನಿಮ್ಮ ಹೃದಯದಲ್ಲಿ ಭಾವಿಸಬೇಕು. ನೀವು ಆಫ್ಫಾರ್ಮಶನ್ ಹೇಳಿಕೊಳ್ಳುವಾಗ ಎಷ್ಟು ಮನದಲ್ಲಿ ಫೀಲ್ ಆಗುವಿರೋ ಅಷ್ಟು ಪರಿಣಾಮ ಕಾರಿಯಾಗಿ ಅದು ನಿಮಗೆ ರಿಸಲ್ಟ್ ಕೊಡುತ್ತದೆ. 

 ಒಂದುವೇಳೆ ನಿಮಗೆ ಸಮಯ ಇದ್ದರೆ ಅಥವಾ ಬೇಗ ಗುಣವಾಗಲು ಬಯಸಿದರೆ, ದಿನದಲ್ಲಿ ೫ ಅಥವಾ ೬ ಸಮಯದಲ್ಲಿಈ ಆಫ್ಫಾರ್ಮಶನ್ ಗಳನ್ನ ಅಭ್ಯಾಸ ಮಾಡಿ.

 ಬೆಳಿಗ್ಗೆ ಎದ್ದ ಕೊಡಲೇ, ನೀವು ಹಾಸಿಗೆಯಿಂದ ಕೆಳಗೆ ಇಳಿಯುವುದಕ್ಕೂ ಮೊದಲೇ, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ಮತ್ತೆ ನೀವು ಸ್ನಾನ ಮಾಡುವ ಸಮಯದಲ್ಲಿ, ನೀರನ್ನು ನಿಮ್ಮ ದೇಹದ ಮೇಲೆ ಹಾಕಿಕೊಳ್ಳುತ್ತಾ ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ಮತ್ತೆ ರಾತ್ರಿ ನೀವು ಮಲಗುವುದಕ್ಕೂ ಮುನ್ನ, ಎಂದರೆ ನೀವು ನಿದ್ದೆಗೆ ಹೋಗುವ ೧೦ ನಿಮಿಷದ ಮೊದಲು, ಈ ಆಫ್ಫಾರ್ಮಶನ್ ಗಳನ್ನ ಕನಿಷ್ಠ ೫ ರಿಂದ ೧೦ ಬಾರಿ ಮನದಲ್ಲಿ ಫೀಲ್ ಆಗಿ ಹೇಳಿಕೊಳ್ಳಿ.

 ನಾನು ಹೇಳಿದ ಈ ಮೂರು ಸಮಯಗಳಲ್ಲಿ ನಿಮ್ಮ ಆಫ್ಫಾರ್ಮಶನ್ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಏಕೆ ಮತ್ತು ಹೇಗೆ ಎನ್ನುವದನ್ನ ನಾನು ಮುಂದಿನ ದಿನಗಳಲ್ಲಿ ವೈಜ್ಞಾನಿಕ ಕಾರಣಗಳೊಂದಿಗೆ ವಿವರಿಸುತ್ತೇನೆ.

 ಮಿತ್ರರೇ ಈಗ ನಾವು ಆರೋಗ್ಯದ ಮತ್ತು ದೇಹದ ಅಂಗಾಂಗಳಿಗೆ ಸಂಬಂದಿಸಿದ ಆಫ್ಫಾರ್ಮಶನ್ ಗಳನ್ನ ಒಂದೊಂದಾಗಿ ನೋಡೋಣ...

 ಮುಖ

ನಾನು ಹೇಗಿದ್ದೇನೋ ಹಾಗೆಯೆ ನನ್ನನ್ನು ನಾನು ಪ್ರೀತಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ನಾನು ಅದ್ಭುತವಾದ ವ್ಯಕ್ತಿ.

 ತಲೆ

ನನ್ನಲ್ಲಿ ಶಾಂತಿ, ಪ್ರೀತಿ, ಸಂತೋಷ, ಮತ್ತು ವಿಶ್ರಾಂತಿ ತುಂಬಿವೆ. ನಾನು ಜೀವನದ ಜ್ಯೋತೆ ಹಾಯಾಗಿ ನದಿಯ ರೀತಿ ಪ್ರಯಾಣ ಮಾಡುತ್ತೇನೆ ಮತ್ತು ಜೀವನವು ಸುಲಭವಾಗಿ ನನ್ನ ಮೂಲಕ ನದಿಯ ಹಾಗೆ  ಹರಿಯುತ್ತಿದೆ.

 ಕಿವಿಗಳು

ದ್ವನಿ ದೇವರ ವಾಣಿ. ನಾನು ದೇವರ ವಾಣಿಯನ್ನು ಕೇಳುತ್ತೇನೆ. ನಾನು ಜೀವನದ ಸಂತೋಷವನ್ನು ಹಾಯಾಗಿ ಕೇಳುತ್ತೇನೆ. ದ್ವನಿ  ಜೀವನದ ಒಂದು  ಭಾಗ, ನಾನು ಪ್ರೀತಿಯಿಂದ ಎಲ್ಲವನ್ನು ಕೇಳುತ್ತೇನೆ.

 ಬಾಯಿ

ನಾನು ಪ್ರೀತಿಯಿಂದ ಇದ್ದೇನೆ. ನಾನೊಬ್ಬ ನಿರ್ಣಾಯಕ ವ್ಯಕ್ತಿ. ನಾನು ಎಲ್ಲವನ್ನು ಅನುಸರಿಸುತ್ತೇನೆ. ನಾನು ಹೊಸ ಆಲೋಚನೆಗಳು ಮತ್ತು ಹೊಸ ಪರಿಕಲ್ಪನೆಗಳನ್ನು ಸ್ವಾಗತಿಸುತ್ತೇನೆ.

 ಮೆದುಳು

ನಾನು ಜೀವನದಲ್ಲಿ ಎಲ್ಲರೊಂದಿಗೆ ಒಂದಾಗಿದ್ದೇನೆ. ನನ್ನ ಶಾಂತಿಯನ್ನು ಕದಡುವ ಶಕ್ತಿ ಯಾರಿಗೂ ಇಲ್ಲ. ನಾನು ಹಳೆಯ ನಂಬಿಕೆಗಳನ್ನು ನಿರಾಕರಿಸುತ್ತೇನೆ.  ನನ್ನ ಜೀವನ ಶಾಂತಿ ಮತ್ತು ಸಾಮರಸ್ಯವಾಗಿದೆ.

 ಕಣ್ಣುಗಳು

ನಾನು ಸ್ವತಂತ್ರವಾಗಿ ಇದ್ದೇನೆ.  ನಾನು ಮುಕ್ತವಾಗಿ ಮುಂದೆ ನೋಡುತ್ತೇನೆ ಏಕೆಂದರೆ ಜೀವನವು ಶಾಶ್ವತವಾಗಿದೆ ಮತ್ತು ಸಂತೋಷದಿಂದ ತುಂಬಿದೆ. ನಾನು ನನ್ನ ಪ್ರೀತಿಯ ಕಣ್ಣುಗಳಿಂದ ಅದನ್ನು ನೋಡುತ್ತೇನೆ. ಯಾರೂ ನನ್ನನ್ನು ಎಂದಿಗೂ ನೋಯಿಸಲಾರರು. ನಾನು ಎಲ್ಲವನ್ನು ತುಂಬಾ ಖುಷಿ ಮತ್ತು ಪ್ರೀತಿ ಯಿಂದ ನೋಡುತ್ತೇನೆ. 

 ಗಂಟಲು

ನಾನು ಹಾಯಾಗಿ ಮಾತನಾಡಬಲ್ಲೆ. ನಾನು ನನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತೇನೆ. ನಾನು ಸೃಜನಶೀಲ ವ್ಯಕ್ತಿ. ನಾನು ಪ್ರೀತಿಯಿಂದ ಮಾತನಾಡುತ್ತೇನೆ.

 ಕುತ್ತಿಗೆ

ನಾನು ಹೊಂದಿಕೊಳ್ಳುವ ವ್ಯಕ್ತಿ. ನಾನು ಇತರರ ಭಾವನೆ ಮತ್ತು ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇನೆ. ನನ್ನ ಜೀವನ ಶಾಂತಿ ಮತ್ತು ಸುರಕ್ಷಿತವಾಗಿ ಇದೆ.

 ಶ್ವಾಸಕೋಶಗಳು

ಜೀವನದ ಉಸಿರು ನನ್ನ ಮೂಲಕ ಸುಲಭವಾಗಿ ಹರಿಯುತ್ತಿದೆ. ಶಾಂತಿ ತುಂಬಿದೆ. ಯಾರೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನನ್ನ ಜೀವನದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಸ್ವತಂತ್ರವಾಗಿದ್ದೇನೆ. ನಾನು ಜೀವನವನ್ನು ಸರಿತೂಗಿಸಬಲ್ಲೆ.

 ಹೃದಯ

ನನ್ನಲ್ಲಿ ಸಂತೋಷ, ಪ್ರೀತಿ, ಶಾಂತಿ ತುಂಬಿದೆ. ನಾನು ಜೀವನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನ ಹೃದಯ ಮತ್ತೆ ಆನಂದ ಮತ್ತು ಸಂತೋಷ ದಿಂದ ತುಂಬಿದೆ.

 ಭುಜಗಳು

ನಾನು ಕೋಪವನ್ನು ನನ್ನಿಂದ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತೇನೆ. ನನ್ನಲ್ಲಿ ಪ್ರೀತಿ ಮತ್ತು ವಿಶ್ರಾಂತಿ ಹೆಚ್ಚಾಗುತ್ತಿದೆ. ನನ್ನ ಜೀವನ ಸಂತೋಷ ಮತ್ತು ಮುಕ್ತವಾಗಿದೆ; ನಾನು ಸ್ವೀಕರಿಸುವ ಎಲ್ಲವೂ ಒಳ್ಳೆಯದೇ.

 ಕೈಗಳು

ನಾನು ಎಲ್ಲಾ ವಿಚಾರಗಳನ್ನು ಪ್ರೀತಿಯಿಂದ ಮತ್ತು ಸುಲಭವಾಗಿ ನಿಭಾಯಿಸುತ್ತೇನೆ.

 ಕೈ ಬೆರಳುಗಳು

ನಾನು ಹಾಯಾಗಿ ವಿಶ್ರಾಂತಿ ಪಡೆಯುತ್ತೇನೆ.  ನನ್ನ ಜೀವನದ ಬುದ್ಧಿವಂತಿಕೆ ಎಲ್ಲವನ್ನು ನೋಡಿಕೊಳ್ಳುವ ಮತ್ತು ನಿಭಾಯಿಸುವ ಶಕ್ತಿ ಹೊಂದಿದೆ.  ನನ್ನಲ್ಲಿ ಶಾಂತಿ, ಪ್ರೀತಿ, ಹಿತವಾದ ವಾತಾವರಣವಿದೆ.  ನನ್ನ ಕೌಟುಂಬಿಕ ಜೀವನ ಆನಂದಮಯವಾಗಿದೆ. 

 ಲಿವರ್

ನಾನು ಇನ್ನು ಮುಂದೆ, ನನಗೆ ಅಗತ್ಯವಿಲ್ಲದ ಎಲ್ಲವನ್ನೂ ನಾನು ಬಿಟ್ಟು ಬಿಡುತ್ತೇನೆ. ನನ್ನ ಪ್ರಜ್ಞೆಯು ಈಗ ಶುದ್ಧವಾಗಿದೆ ಮತ್ತು ನನ್ನ ಪರಿಕಲ್ಪನೆಗಳು ಹೊಸತನದೊಂದಿಗೆ ಕಂಗೊಳಿಸುತ್ತಿವೆ.  ನನ್ನಲ್ಲಿ ಶಾಂತಿ, ಪ್ರೀತಿ ಮತ್ತು ಸಂತೋಷ ತುಂಬಿದೆ.

 ಹೊಟ್ಟೆ

ನಾನು ಹೊಸ ಆಲೋಚನೆಗಳನ್ನು ಸುಲಭವಾಗಿ ಸಂಯೋಜಿಸುತ್ತೇನೆ. ನನ್ನನ್ನು ನಾನು  ಒಪ್ಪುತ್ತೇನೆ ಮತ್ತು ಪ್ರೀತಿಸುತ್ತೇನೆ.  ಯಾವುದೂ ನನ್ನನ್ನು ಕೆರಳಿಸಲು ಸಾಧ್ಯವಿಲ್ಲ. ನಾನು ಶಾಂತವಾಗಿದ್ದೇನೆ. ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ.

 ದೊಡ್ಡ ಕರುಳುಗಳು

ನಾನು ಸ್ವತಂತ್ರವಾಗಿ ಇದ್ದೇನೆ; ನಾನು ಹಿಂದಿನ ಎಲ್ಲಾ ನೆನಪುಗಳನ್ನು ಬಿಡುಗಡೆ ಮಾಡುತ್ತೇನೆ. ನನ್ನ ಜೀವನವು ಈಗ ಸುಲಭವಾಗಿ ನದಿಯ ರೀತಿ ಹರಿಯುತ್ತಿದೆ. ನಾನು ಎಲ್ಲಾ ಒತ್ತಡ ಮತ್ತು ಭಾರಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಈ ಕ್ಷಣಗಳು ಸಂತೋಷ ಮತ್ತು ಆನಂದ ದಿಂದ ತುಂಬಿವೆ.

 ಮೂತ್ರಪಿಂಡಗಳು (Kidneys)

ನಾನು ಹಳೆಯ ಸರಿಯಲ್ಲದ ನೆನಪುಗಳನ್ನು ಬಿಡುಗಡೆ ಮಾಡಿದ್ದೇನೆ. ನಾನು ಎಲ್ಲಾಕಡೆ  ಒಳ್ಳೆಯದನ್ನು ಮಾತ್ರ ಹುಡುಕುತ್ತೇನೆ. ಜೀವನ ಸರಿಯಾದ ಕ್ರಮದಲ್ಲಿ ಸಾಗುತ್ತಿದೆ. ನಾನು ಸಂಪೂರ್ಣನಾಗಿದ್ದೇನೆ.

 ಮೂತ್ರ ಕೋಶ (Kidneys)

ನಾನು ಹಳೆಯದನ್ನು ಬಿಡುಗಡೆ ಮಾಡುತ್ತೇನೆ ಮತ್ತು ಹೊಸದನ್ನು ಸ್ವಾಗತಿಸುತ್ತೇನೆ.

 ಪೆಲ್ವಿಸ್

ಆಕಾರಗಳು  ಮತ್ತು ಸಂಪರ್ಕಗಳು  ಬದಲಾಗಬಹುದು ಆದರೆ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ದೇಹದ ಎಲ್ಲಾ ಬದಲಾವಣೆಗಳಲ್ಲಿ ನಾನು ಸಮತೋಲನದಲ್ಲಿದ್ದೇನೆ. ನಾನು ನನ್ನ ದೇಹವನ್ನು ಪ್ರೀತಿಯಿಂದ ಆಶೀರ್ವದಿಸುತ್ತೇನೆ. ನನ್ನ ದೇಹದ ಎಲ್ಲಾ ಭಾಗಗಳು ಸುಂದರವಾಗಿವೆ.

 ಹಿಪ್

ನಾನು ನನ್ನ ಜೀವನದ ಶಕ್ತಿ, ಬೆಂಬಲ ಮತ್ತು ಸಮರ್ಥನೆಯೊಂದಿಗೆ ಸಂತೋಷದಿಂದ ಮುನ್ನಡೆಯುತ್ತೇನೆ. ನಾನು ಇನ್ನು ಹೆಚ್ಚು ಒಳತಿನೆಡೆಗೆ ಮುನ್ನಡೆಯುತ್ತಿದ್ದೇನೆ. ನಾನು ಇತರರನ್ನು ಅವರಂತೆಯೇ ಇರಲು ಬಿಡುತ್ತೇನೆ ಮತ್ತು ನಾನು ಸ್ವತಂತ್ರವಾಗಿದ್ದೇನೆ. ನನ್ನ ಜೀವನ ಸಮತೋನವಾಗಿ ಮುಂದುವರೆಯುತ್ತಿದೆ. 

 ಜನನಾಂಗಗಳು

ನನ್ನಲ್ಲಿ ಶಕ್ತಿ ಇದೆ, ನನ್ನ ಲೈಂಗಿಕ ಅಂಗಾಂಗಳು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿವೆ,  ನಾನು ಅವನ್ನು ಸುಲಭವಾಗಿ ಮತ್ತು ಸಂತೋಷದಿಂದ ಕಾರ್ಯನಿರ್ವಹಿಸಲು ಅನುಮತಿಸುತ್ತೇನೆ. ನನ್ನ ಲೈಂಗಿಕತೆಯನ್ನು ನಾನು ಪ್ರೀತಿಯಿಂದ ಮತ್ತು ಸಂತೋಷದಿಂದ ಸ್ವೀಕರಿಸುತ್ತೇನೆ. ನನ್ನಲ್ಲಿ ಯಾವುದೇ ಬೇಸರವಾಗಲಿ ಮತ್ತು ಅಪರಾಧ ಭಾವನೆಯಾಗಲಿ ಇಲ್ಲ.

 ಮೊಣಕಾಲು

ನನ್ನಲ್ಲಿ ಕ್ಷಮೆ, ಸಹನೆ, ಸಹಾನುಭೂತಿ ತುಂಬಿವೆ. ನಾನು ಹಿಂಜರಿಕೆಯಿಲ್ಲದೆ ಮುನ್ನಡೆಯುತ್ತೇನೆ. ನಾನು ಈಗಿನ ಸ್ಥಿತಿಗತಿಗೆ ಅನುಸಾರವಾಗಿ ಬದಲಾಗುವ ಸ್ನೇಹ ಮತ್ತು ಪ್ರೀತಿಯ ಭಾವವನ್ನು ಹೊಂದಿದ್ದೇನೆ.

 ಚರ್ಮ

ನಾನು ಒಳ್ಳೆಯ ರೀತಿಯಲ್ಲಿ ಎಲ್ಲರನ್ನು ಗಮನ ಸೆಳೆಯುತ್ತೇನೆ. ನಾನು ಸುರಕ್ಷಿತವಾಗಿದ್ದೇನೆ. ನನ್ನ ವ್ಯಕ್ತಿತ್ವಕ್ಕೆ ಯಾವ ಭಯವು ಇಲ್ಲ. ನಾನು ಸಮಾಧಾನದಲ್ಲಿದ್ದೇನೆ. ಜಗತ್ತು ಸುರಕ್ಷಿತ ಮತ್ತು ಸ್ನೇಹಪರವಾಗಿದೆ. ನಾನು ಎಲ್ಲಾ ಕೋಪ ಮತ್ತು ಅಸಮಾಧಾನವನ್ನು ಬಿಡುಗಡೆ ಮಾಡುತ್ತೇನೆ. ನನಗೆ ಏನು ಬೇಕೋ ಅದು ಯಾವಾಗಲೂ ನನ್ನಲ್ಲಿಗೆ ಬರುತ್ತದೆ. ನಾನು ನನ್ನಲ್ಲಿನ  ಒಳ್ಳೆಯತನವನ್ನು ಹಾಯಾಗಿ ಸ್ವೀಕರಿಸುತ್ತೇನೆ. ನಾನು ನನ್ನ ಜೀವನದಲ್ಲಿ ಬರುವ ಎಲ್ಲಾ ಸಣ್ಣ ವಿಷಯಗಳೊಂದಿಗೆ ಶಾಂತಿಯುತವಾಗಿರುತ್ತೇನೆ.

 ಬೆನ್ನು

ಜೀವನ ನನ್ನನ್ನು ಬೆಂಬಲಿಸುತ್ತಿದೆ. ನಾನು ವಿಶ್ವವನ್ನು ನಂಬುತ್ತೇನೆ. ನಾನು ಪ್ರೀತಿ ಮತ್ತು ವಿಶ್ವಾಸವನ್ನು ಮುಕ್ತವಾಗಿ ನೀಡುತ್ತೇನೆ. ನಾನು ಧೈರ್ಯಶಾಲಿ ಮತ್ತು ಸ್ವತಂತ್ರ. ಜೀವನ ಚೆನ್ನಾಗಿದೆ. ನಾನು ಪ್ರೀತಿಯಿಂದ ಮುಂದುವರೆಯುತ್ತಿದ್ದೇನೆ. ಆ ದೈವದ ಸಪೋರ್ಟ್ ನನಗೆ ಇದೆ.

 ಗ್ರಂಥಿಗಳು

ನಾನು ಸಂಪೂರ್ಣ ಸಮತೋಲನದಲ್ಲಿದ್ದೇನೆ. ನನ್ನ ದೇಹದ ಅಂಗಾಂಗಳ ವ್ಯವಸ್ಥೆಯು ಕ್ರಮಬದ್ಧವಾಗಿದೆ. ನಾನು ಜೀವನವನ್ನು ಪ್ರೀತಿಸುತ್ತೇನೆ ಮತ್ತು ಮುಕ್ತವಾಗಿ ಸ್ವೀಕಾರ ಮಾಡುತ್ತೇನೆ. ನಾನು ಸೃಜನಶೀಲ ವ್ಯಕ್ತಿ.

ಪಾದಗಳು

ನಾನು ಸತ್ಯದಲ್ಲಿ ನಿಲ್ಲುತ್ತೇನೆ. ನಾನು ಸಂತೋಷದಿಂದ ಮುನ್ನಡೆಯುತ್ತೇನೆ. ನನಗೆ ಆಧ್ಯಾತ್ಮಿಕ ತಿಳುವಳಿಕೆ ಇದೆ. ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತೇನೆ.

 ಒಂದು ವಿಶೇಷ ಸೂಚನೆ ಮಿತ್ರರೇ,

ನೀವು ಈ ಅಫ್ರಾಮ್ಷನ್ ಮಾಡುವಾಗ ಒಂದುವೇಳೆ ಯಾವುದಾದರೂ ಮೆಡಿಕೇಷನ್ ನಲ್ಲಿ ಇದ್ದಾರೆ ಅದನ್ನು ನಿಲ್ಲಿಸ ಬೀಡಿ, ನಿಮಗೆ ಈ ಆಫ್ರ್ಮ್ಯಾಟಿವ್ನ್ ಮಾಡಿ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದ ಮೇಲೆ ವೈದ್ಯರ ಸಲಹೆಯ ಮೇರೆಗೆ ಬೇಕಾದರೆ ಆ ಮೆಡಿಕೇಷನ ಅನ್ನು ನಿಲ್ಲಿಸ ಬಹುದು. 

 ನೀವು ಈ ಆಫ್ಫಾರ್ಮಶನ್ ಗಳನ್ನ 30 ರಿಂದ 60 ದಿನ, ಒಂದು ದಿನವೂ ತಪ್ಪಿಸದೇ ನಾನು ಹೇಳಿದ ಆ ಮೂರು ಸಮಯದಲ್ಲಿ ಅಭ್ಯಾಸ ಮಾಡಿದರೆ, ನೀವು ನಿಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆ ಗಮನಿಸಬಲ್ಲಿರಿ.  ನಿಮಗೆ ಇದರ ಅಭ್ಯಾಸ ದಿಂದ ಆರೋಗ್ಯ ಸುಧಾರಣೆಯಾದರೆ, ದಯವಿಟ್ಟು ಈ ವಿಡಿಯೋ ಲಿಂಕ್ ಅನ್ನು ಇತರರಿಗೂ ಶೇರ್ ಮಾಡಿ, ಅವರಿಗೆ ಆರೋಗ್ಯ ಕರುಣಿಸಿದ ಸ್ವಲ್ಪವಾದರೂ ಪುಣ್ಯ ನಿಮಗೂ ಬರುತ್ತದೆ.

 ನೀವು ಈ ಅಫರ್ಮಶನ್ ದಿನಕ್ಕೆ 3 ಬಾರಿ ಹೇಳಿಕೊಂಳ್ಳುವುದರಿಂದಲೇ  ನಿಮ್ಮ ಆರೋಗ್ಯ ಸಮಸ್ಯಗೆ ಪರಿಹಾರ ಪಡೆಯಬಹುದು. ನಿಮಗೆ ಮತ್ತೆ ಬೇರೆ ರೀತಿಯ ಆರೋಗ್ಯ ಸಮಸ್ಯೆ ಬರದೇ ಶಾಶ್ವತ ಪರಿಹಾರ ಪಡೆಯಲು ನೀವು ಬಯಸಿದರೆ. ಕನಿಷ್ಠ ದಿನಕ್ಕೆ ಒಂದು ಗಂಟೆ ಆರೋಗ್ಯದ ಧ್ಯಾನ ಅಥವಾ ಇನ್ನಾವುದೇ ದ್ಯಾನ ಮಾಡುವ ಅಭ್ಯಾಸ ಮಾಡಿಕೊಂಡರೆ. ನೀವು ಬದುಕಿರುವ ವರೆಗು ಪೂರ್ಣ ಆರೋಗ್ಯ ದಿಂದ ಜೀವಿಸುವ ಸಾದ್ಯತೆ ಹೆಚ್ಚುಇದೆ ಮಿತ್ರರೇ.

ಹಾಗಾಗಿ, ನೀವು ನನ್ನ ಸಂಕಲ್ಪ ಧ್ಯಾನ ಅಥವಾ ಆರೋಗ್ಯ ಧ್ಯಾನದ ವಿಡಿಯೋ ನೋಡಿ ಕನಿಷ್ಟ ದಿನಕ್ಕೆ ಒಂದು ಗಂಟೆ ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.

 ಇದು ನನ್ನ ಯು ಟ್ಯೂಬ್ ಲಿಂಕ್:

https://youtube.com/channel/UCgDZumB4pM3kfqNjuLj2x3w

 ಮುಖ್ಯ ಸೂಚನೆ: ಬರೀ ಸಂಕಲ್ಪಗಳನ್ನು ಅಥವಾ ಅಫರ್ಮಶನ್  ಮಾಡಿಯೇ ನೀವು ಇಚ್ಚಿಸಿದ್ದನ್ನ ಪಡೆಯಬಹುದು, ಆದರೆ ಬಂದ ಆ ಆರೋಗ್ಯ ಅಥವಾ ಸಂಪತ್ತನ್ನು ಕಾಪಾಡಿಕೊಳ್ಳಲು ದಿನವೂ ಧ್ಯಾನ ಮಾಡುವುದು ತುಂಬಾ ಮುಖ್ಯ. ಧ್ಯಾನಕ್ಕೆ ಕರ್ಮವನ್ನು ಸುಡುವ ಶಕ್ತಿ ಇದೆ.

 ನೀವು ಆರೋಗ್ಯ ಪಡೆಯಲು ಧ್ಯಾನ ಮಾಡಲು ಇಚ್ಚಿಸಿದರೆ ನನ್ನ ಆರೋಗ್ಯದ ಅಫರ್ಮಶನ್  ಧ್ಯಾನ ಮತ್ತು  ಆರೋಗ್ಯದ ಸಂಕಲ್ಪ ಧ್ಯಾನ ಎರೆಡು ವಿಡಿಯೋಗಳನ್ನ ಅನುಸರಿಸಿ ಅವು ತುಂಬಾ ಪರಿಣಾಮಕಾರಿ ದ್ಯಾನಗಳು, ಅದರಲ್ಲಿ ನಿಮಗೆ ಇಷ್ಟವಾದ ಧ್ಯಾನವನ್ನು ದಿನಕ್ಕೆ ಕನಿಷ್ಠ ಎರೆಡು ಬಾರಿ ಮಾಡಿ.

 ನೀವು ಸಂಪತ್ತಿನ ಧ್ಯಾನ ಮಾಡಲು ಇಚ್ಚಿಸಿದರೆ ನನ್ನ ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನವನ್ನು ದಿನಕ್ಕೆ ಎರೆಡು ಬಾರಿ ಅಭ್ಯಾಸ ಮಾಡಿ.

ನೀವು ಈ ಅಫರ್ಮೇಶನ್ ಗಳನ್ನೂ ಓದಿಕೊಂಡು ಮಾಡಲು ಅಥವಾ ಬರೆದು ಕೊಳ್ಳಲು, ನಾನು ಈ ವಿಡಿಯೋ ಡೆಸ್ಕ್ರಿಪ್ಶೇನ್ ನಲ್ಲಿ ಕೊಟ್ಟಿರುವ ನನ್ನ ಬ್ಲಾಗ್ ಲಿಂಕ್ ಅನ್ನು ಕ್ಲಿಕ್ ಮಾಡಿ...

ಆರೋಗ್ಯದ ಸಂಕಲ್ಪ ಧ್ಯಾನ:

https://youtu.be/gMbHWJJoV_g

ಸಂಪತ್ತಿನ ಸೃಷ್ಟಿಯ ಸಂಕಲ್ಪ ಧ್ಯಾನ:

https://youtu.be/WGKHrg7az_E


ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇

http://askvishnudotcom.blogspot.com/2018/04/why-you-get-disease.html?m=1


 ಧನ್ಯವಾದಗಳು ಸ್ನೇಹಿತರೆ

 ಇಂತಿ ನಿಮ್ಮ

 ಜಿ ಸಿ ವಿ

 

Monday, February 1, 2021

ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬೇಕೆ?

 

ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬೇಕೆ?

ಇದನ್ನು ಓದಿ, ಈಕ್ಷಣ ದಲ್ಲೇ ನೀನು ಶಾಂತಿ ಮತ್ತು ಆನಂದ ಪಡೆಯುವುದು ಹೇಗೆ ಎಂದು ತಿಳಿಯಲು....

ಬಾಲ್ಯದಲ್ಲಿ ನೀನು ನೋಡಿದ್ದೆಲ್ಲ ಸೌಂದರ್ಯ. ನಿನಗೆ ಕಂಡಿದ್ದೆಲ್ಲ ಆಶ್ವರ್ಯ. ಆ ದಿನದಲ್ಲಿ ಸಂತೋಷಕ್ಕೆ ಮತ್ತು ಶಾಂತಿಗೆ ಕೊರತೆಯೇ ಇಲ್ಲ, ಅವು ಆನಂದದ ಪರಕಾಷ್ಠೆಯ ದಿನಗಳು. ಆದರೆ ಈಗ ನೀನು ಆ ಎಲ್ಲಾ ಸೌಂದರ್ಯ ಮತ್ತು ಆಶ್ಚರ್ಯ ಸಿಗುತ್ತಿಲ್ಲ, ಸಂತೋಷ ಮತ್ತು ಶಾಂತಿಯಿಂದ ಸಂಪೂರ್ಣ ವಂಚಿತನಾಗಿರುವೆ.

ಆನಂದಕ್ಕಿಲ್ಲಿದೆ ”ಟೋಲ್” ಅವರ ಸರಳ ಉಪಾಯ:

ಎಕ್ಹಾರ್ಟ್ ಟೋಲ್ ಅವರು ಪವರ್ ಆಪ್ನೌ (Power of Now) ಪುಸ್ತಕದಲ್ಲಿ ಹೀಗೆ ಹೇಳಿರುವರು...

ಮಾನಸಿಕ ಅಸಮತೋಲನ ಮತ್ತು ಅಶಾಂತಿಗೆ ಮುಖ್ಯ ಕಾರಣ ಎಲ್ಲಾ ಕಳೆದುಹೋದ ಘಟನೆಗಳ ಮರು ಸಂಗ್ರಹ ಮತ್ತು ಅತಿಯಾದ ಅದರ ಬಗೆಗಿನ ಯೋಚನೆ. ಇಲ್ಲಾ ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಮತ್ತು ಭಯ. ಹಾಗೂ ವರ್ತಮಾನದ(ಈಕ್ಷಣದ/ಈದಿನದ) ನಿರಾಕರಣೆಯಿಂದ ಉಂಟಾಗುತ್ತದೆ.

ಅಶಾಂತಿ, ಆತಂಕ, ಉದ್ವೇಗ, ಒತ್ತಡ, ಚಿಂತೆ - ಎಲ್ಲಾ ರೀತಿಯ ಭಯ - ಭವಿಷ್ಯದ ಬಗೆಗಿನ ಅತಿಯಾದ ಚಿಂತೆಯ ಕಾರಣದಿಂದ ಉಂಟಾಗುತ್ತದೆ ಮತ್ತು ಇವರು ವರ್ತಮಾನ ದಲ್ಲಿ ಇಲ್ಲದಿರುವುದು ಇದಕ್ಕೆ  ಮುಖ್ಯ ಕಾರಣ.

ಅಪರಾಧ ಭಾವನೆ, ವಿಷಾದ, ಅಸಮಾಧಾನ, ಕುಂದುಕೊರತೆಗಳ ಚಿಂತೆ, ದುಃಖ, ಕಹಿ, ಖಿನ್ನತೆ, ಮತ್ತು ಎಲ್ಲಾ ರೀತಿಯ ದ್ವೇಷಭಾವ, ಅಸೂಯೆ,  ಅತಿಯಾದ ಗತಕಾಲದ ಚಿಂತೆಯಿಂದ ಉಂಟಾಗುತ್ತವೆ ಮತ್ತು ಇವರು ವರ್ತಮಾನ ದಲ್ಲಿ ಇಲ್ಲದಿರುವುದು ಇದಕ್ಕೆ  ಮುಖ್ಯ ಕಾರಣ.

ಕಾರಣ ನಿನ್ನ ಮನಸ್ಸು ಇಲ್ಲಿ ಇಲ್ಲ. ಅದು ಕಳೆದು ಹೋದ ಕಾಲದ ಬಗ್ಗೆ ಕೊರಗುತ್ತಿದೆ, ಇಲ್ಲಾ ಮುಂದೆ ಏನಾಗುವುದೇ ಎನ್ನುವ ಭಯದಲ್ಲಿ ಚಿಂತಿಸುತ್ತಲಿದೆ.

ಬಾಲ್ಯದ ನಿನ್ನ ಆ ಸಂತೋಷಕ್ಕೆ ಮೂಲ ಕಾರಣ, ನೀನು ಇದ್ದಲ್ಲಿಯೇ ನಿನ್ನ ಮನಸ್ಸು ಇರುತ್ತಿತ್ತು.

ಒಮ್ಮೆ ನಿನ್ನ ಮನಸನ್ನು ಇಲ್ಲಿ, ಈಕ್ಷಣ ದಲ್ಲಿ ಇಟ್ಟು ನೋಡು, ಆಗ ನೀನಿರುವಲ್ಲೇ ಸ್ವರ್ಗ ಕಾಣುವುದು.

ಆಗ ನೀನು ನೋಡುವ ಬೀದಿ ಬದಿಯ ಹೂವುಗಳೇ ಕಂಗೊಳಿಸುವವು. ನೀನು ನೋಡುವ ಮರ ಗಿಡದಲ್ಲಿ ಪ್ರಕೃತಿ ಮಾತೆಯ ಹಸಿರು, ಜೀವ ತುಂಬಿದಂತೆ ಕಾಣುವುದು. ಪಕ್ಷಿಯ ಕೂಗು ನಿನ್ನ ಮೈ ಮರೆಸುವುದು, ನೀರಿನ ಜುಳು ಜುಳು ಶಬ್ದ ನಿನ್ನಲಿ ಜೀವ ಶಕ್ತಿಯ ಪ್ರೇರೇಪಿಸುವಿದು.

ನೀನು ಈಗ ಬರಿ, ಹಣ, ಅಧಿಕಾರ, ಹಂಕಾರದ ಮಧದಲ್ಲಿ, ಇಹದ ಸೌಂದರ್ಯ ಮತ್ತು ಸ್ವರ್ಗವನ್ನು ಕಾಣುಲಾಗುತ್ತಿಲ್ಲ.

ಮಕ್ಕಳು ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಡುವರು, ಚಿಟ್ಟೆ ಕಂಡರೆ, ಚಿಟ್ಟೆಯ ಹಿಂದೆ ಹೋಡುವರು. ಅವರು ಎಲ್ಲದರಲ್ಲೂ ಆ ಆಶ್ಚರ್ಯ ಮತ್ತು ಸೌಂದರ್ಯ ನೋಡಲು ಮುಖ್ಯ ಕಾರಣ ಅವರ ಮನಸು ಮತ್ತು ಅವರ ದೇಹದ ಜ್ಯೋತೆ ಇದೆ ಎಂದರೆ,  ಎರೆಡು ಒಂದೇ ಜಾಗದಲ್ಲಿ ಇವೆ.

ಆದರೆ ನಿನ್ನ ದೇಹ ಇಲ್ಲಿದೆ, ನಿನ್ನ ಮನಸ್ಸು ಎಲ್ಲೋ ಇದೆ. ನೀನು ಒಂದು 5 ನಿಮಿಷ ನೀನಿರುವಲ್ಲಿಯೇ ನಿನ್ನ ಮನಸು ಇಟ್ಟು ನೋಡು.

ನೀನು ನೋಡುವ ಪ್ರತಿ ನೋಟದಲ್ಲಿಯೂ ಸ್ವರ್ಗ ವನ್ನು ಕಾಣಲು ಸಾಧ್ಯ, ನೀನು ರೋಗದಿಂದ ಬಳಲುತ್ತಿದ್ದರು, ನಿನ್ನ ಮನಸ್ಸನ್ನು ನೀನು ಇರುವಲ್ಲಿಯೇ ಇಟ್ಟು ಕೊಂಡರೆ, ಆ ರೋಗದ ನೋವು ಸಹ ಮಾಯ ಆಗುವುದು. ಏಕೆಂದರೆ ರೋಗದ ನೋವಿಗಿಂತ, ನಿನಗೆ ಏನಾಗುವುದೋ ಎನ್ನುವ ಭವಿಶ್ಯದ ಭಯ ಹೆಚ್ಚು ನೋವು ಕೊಡುತ್ತಿರುತ್ತದೆ.

ರಾಷ್ಟ್ರ ಕವಿ ಕುವೆಂಪು ಅವರ ಜೀವನದ ಸತ್ಯ:

ಕುವೆಂಪು ಅವರು ಹೇಳಿದ ಹಾಗೆ, ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು ಎಂದು.  ಹಾಗೆಂದರೆ ನಿನ್ನ ಮೈ ನೀಲಿ ಬಣ್ಣ ಆಗುವಂತೆ ಎಂದು ಅರ್ಥ ಅಲ್ಲ, ನೀನು ಆಕಾಶವನ್ನು ನೋಡುವಾಗ ಭೂಥಕಾಲ ಮತ್ತು ಭವಿಷ್ಯತ್ ಕಾಲದಲ್ಲಿ ಇರದೇ ವರ್ತಮಾನ ದಲ್ಲಿ ಇದ್ದು ನೋಡು. ಎಂದರೆ ಎಲ್ಲಾ ಚಿಂತೆಗಳನ್ನು ಪಕ್ಕಕ್ಕೆ ಇಟ್ಟು ಆಕಾಶವನ್ನು ನೋಡು.

ಮತ್ತೆ ನಿನ್ನ ನೋಟದಲ್ಲಿ ಹೋಲಿಕೆ, ಮೇಲು, ಕೀಳು ಇಲ್ಲದಿರಲಿ, ನೋಡುವ ನೋಟದಲ್ಲೇ ನಿನ್ನ ಮೈ ಮನಸು ಎಲ್ಲವೂ ಮಗ್ನವಾಗಿರಲಿ. ಆಗ ಆ ನೋಟ 100%. ಆ ನೋಟ ಒಂದು ಮಗುವಿನ ನೋಟಕ್ಕೆ ಸಮವಾಗುವುದು.

ಅಂಥಾ ಮನಸಿಂದ ನೀನು ಆಕಾಶ ನೋಡಿದರೆ, "ಆಗ ನೀನು ಬೇರೆ ಆಕಾಶ ಬೇರೆ ಆಗಲು ಸಾಧ್ಯವಿಲ್ಲ", ನೀನೇ ಆಕಾಶ ಹಾಗಿಬಿಡುವೆ, ಆಕಾಶವೇ ನೀನಾಗುವುದು. ಈಗ ನೀನು ಮತ್ತೆ ಆ ಕುವೆಂಪು ರವರ ಸಾಲನ್ನು ಒಮ್ಮೆ ಓದು..."ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು"

ಕುವೆಂಪು ಅವರು ಹೀಗೆ ಹೇಳುವರು, ಕುಂಬಳಕಾಯಿ ಹೂವು ಬಹಳ ಸುಂದರ ಎಂದು. ಹೌದು ನೀನು ನೋಡುವ ನೋಟದಲ್ಲಿ 100% ಒಳಗೊಡರೆ, ಆಗ ಯಾವು ಹೂವಲ್ಲಾದರು ಸೌಂದರ್ಯ ಸಿಗಲು ಸಾಧ್ಯ.

ನೀನು ಮನಸ್ಸನ್ನು ಅಥವಾ ಯೋಚನೆಯನ್ನು ನೋಡುವ ನೋಟಕ್ಕೆ ಮಿಶ್ರಣ ಮಾಡಿದರೆ, ಆಗ ಅದು ರೋಸ್ ಇಲ್ಲ, ಕಮಲದ ಹೂವಿಗೆ ಹೋಲಿಸಿ, ಇದು ಸರಿಯಿಲ್ಲ, ಅದು ಸರಿಯಿಲ್ಲ ಎನ್ನುವುದು. ನೀನು ನಿನ್ನ ಹೋಲಿಸುವ ಮನಸ್ಸನ್ನು ದೂರ ಮಾಡಿ ಸಂಪೂರ್ಣ ಮಜ್ಞತೆ ಯಲ್ಲಿ ನೋಡಿದರೆ, ರಸ್ತೆ ಬಡಿಯಲ್ಲಿ ಕಾಣುವ ಪ್ರತಿ ಹೂವಲ್ಲಿ ಮಹಾ ಸೌಂದರ್ಯ ನೋಡಲು ಸಾದ್ಯ. ಆದರೆ ನೆನಪಿರಲಿ, ನೀನು ನೋಡುವಾಗ ನೀನೆೇ ಆ ಹೂವಾಗಬೇಕು. ಹೇಗೆಂದರೆ: ನೀನು ಆಕಾಶವನ್ನು ನೋಡಿದರೆ ನಿನ್ನ ಮೈ ನೀಲಿಗಟ್ಟು ವಂತೆ ನೋಡು ಎಂದ ಹಾಗೆ.

ಭಯ ಮತ್ತು ಚಿಂತೆಯ ಪರಿಣಾಮಗಳು:

ಅತಿಯಾದ ಚಿಂತೆ ನಿನ್ನನ್ನು ಸುಮ್ಮನೆ ಕೊರಗಿಸುವುದೇ ಹೊರತು, ಅದರಿಂದ ಯಾವ ಪ್ರಯೋಜನವಿಲ್ಲ. ಎಲ್ಲಾ ನೋವು ಕೊಡುವ ಮತ್ತು ಭಯಪಡಿಸುವ, ಚಿಂತೆಗಳಿಂದ ಹೊರಬಂದು, ವಾಸ್ತವದಲ್ಲಿ ಇರುವುದನ್ನ ಕಲಿಯಬೇಕು. ಆಗ ನೀನು ಇದ್ದಲ್ಲಿಯೇ ಸ್ವರ್ಗ್ ಕಾಣುವುದು.

ಜೀವನದಲ್ಲಿ ಎಲ್ಲವೂ ನೀನು ಅಂದುಕೊಂಡು ಹಾಗೆ ನಡೆಯವುದಿಲ್ಲ, ಅವು ಹೇಗೆ ಆದರೂ ಅದನ್ನು ದೈವ ಕೃಪೆ ಎಂದು ಭಾವಿಸುವುದು ಕಲಿತರೆ, ಆಗ ನೀನು ದುಃಖ ಪಡಲು ಸಾಧ್ಯವಿಲ್ಲ.

ಮುಖ್ಯವಾಗಿ, ವರ್ತಮಾನದಲ್ಲಿ ಮೈ ಮತ್ತು ಮನಸ್ಸನ್ನು ಇಟ್ಟು ಬದುಕಲು ಪ್ರಾರಂಭಿಸಿ. ಆಗ ನೀನು ತಿನ್ನುವ ಪ್ರತೀ ತುತ್ತ ನಿಮಗೆ ರಸಗವಳ ಆಗುವುದು, ನೀವು ಮುಟ್ಟುವ ಪ್ರತಿ ವಸ್ತು ಸುಂದರಾವಾಗಿ ಕಾಣುವುದು, ನೀನು ಕುಡಿಯುವ ಮತ್ತು ಸ್ನಾನ ಮಾಡುವ ನೀರು ನಿನಗೆ ಜೀವದ ಚಿಲುಮೆಯ ಪರಿಚಯ ಮಾಡಿಸುವುದು.

ಹೆಚ್ಚು ಹೆಚ್ಚು ಚಿಂತೆ ಮಾಡಿ ಯಾರು ಯಾವ ಪರಿಹಾರ ಪಡೆದ ಉದಾಹರಣೆ ಎಲ್ಲಾ, ಆದರೆ ಹೆಚ್ಚು ಹೆಚ್ಚು ಚಿಂತಿಸಿ ಮತ್ತು ಕೊರಗಿ, ರೋಗ ಗ್ರಸ್ತರಾದ, ಹುಚ್ಚರಾದ ಉದಾಹರಣೆಗಳು ಹೇರಳವಾಗಿ ಇವೆ.

ಭಯ ಮತ್ತು ಚಿಂತೆ ಆರೋಗ್ಯದಮೇಲೆ ಹೇಗೆ ಪರಿಣಾಮ ಬೀರುವವು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಓದಿ: ಆರೋಗ್ಯದ ಗುಟ್ಟು

ಆನಂದದ ಕೀಲಿಕೈ:

ನೀನು ತಿನ್ನುವಾಗ ನಿನ್ನ ಗಮನ ತಿನ್ನುವುದರಮೇಲೆ ಇರಲಿ

ನೀನು ನಡೆಯುವಾಗ ನಿನ್ನ ಗಮನ ನಿನ್ನ ಹೆಜ್ಜೆಗಳ ಮೇಲೆ ಇರಲಿ

ನೀನು ಕೆಲಸ ಮಾಡುವಾಗ ನಿಮ್ಮ ಧ್ಯಾನ ಕೆಲಸದ ಮೇಲೆ ಇರಲಿ

ನೀನು ಮಾಡುವ ಯಾವುದೇ ಕೆಲಸ ಇರಲಿ ನಿನ್ನ ಧ್ಯಾನ ಅದರ ಮೇಲೆ ಇರಲಿ

ಕೆಲಸವೇ ಇಲ್ಲದಿರುವಾಗ ನಿನ್ನ ಧ್ಯಾನ ಉಸಿರಾಟದ ಮೇಲೆ ಇರಲಿ

ನೀನು ಹೊಮ್ಮೆ ಪರೀಕ್ಷಿಸಿ ನೋಡು: ನೀನು ಮೈ ಮತ್ತು ಮನಸು ಕೊಟ್ಟು ಒಂದು ಕೆಲಸದಲ್ಲಿ ತೊಡಗಿದ್ದಾಗ ಹಸಿವು ಆಗುವುದಿಲ್ಲ ಮತ್ತು ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ, ಆ ದಿನ ನಿನಗೆ ಆನಂದ ಮತ್ತು ಸಂತೋಷದ ದಿನವಾಗಿರುತ್ತದೆ.

ಅದೇ ನೀನು ಯಾವುದೊ ಚಿತೆಯಲ್ಲಿ ಬರಿ ಅರ್ಧ ದಿನ ಕೆಲಸ ಮಾಡಿದರು ನೀನು ಸಾಕಷ್ಟು ಧಣಿಯುವೆ ಕಾರಣ, ನಿನ್ನ ಮೈ ಕೆಲಸದಲ್ಲಿ ಮನಸು ಬೇರೆ ಯಾವುದೊ ಚಿಂತೆಯಲ್ಲಿ ಇರುವುದೇ ಇದಕ್ಕೆ ಮುಖ್ಯ ಕಾರಣ.

ಕೆಲವಾರು ಮಹಾ ಸಾದು ಸ್ವಾಮೀಜಿಗಳು ಸದಾ ಅಷ್ಟು ಖುಷಿ, ಸಂತೋಷ ಮತ್ತು ಶಾಂತಿ ಯಿಂದ ಇರಲು ಮುಖ್ಯ ಕಾರಣ, ಅವರು ಒಂದು ಸದಾ ಮನಸ್ಸನ್ನು ಉಸಿರಾಟದ ಮೇಲೆ ಇರಿಸಿರುವರು, ಇಲ್ಲ ಅವರು ಮಾಡುವ ಪೂಜೆ, ಕೆಲಸದ ಮೇಲೆ ಇಟ್ಟಿರುವರು.

ಮಗುವಿನಂತೆ ಆಕ್ಷಣದಲ್ಲಿ ಮೈ ಮತ್ತು ಮನಸ್ಸನ್ನು ಕೊಟ್ಟು ಬದುಕುವುದನ್ನು ಕಲೆಯಿರಿ. ಶಾಂತಿ ಮತ್ತು ಆನಂದದ ಜೀವನ ನಿಮ್ಮದಾಗಾಲಿ ಎಂದು ಆಶಿಸುವ, ನಿಮ್ಮ ಪ್ರೀತಿಯ- ಜಿಸಿವಿ.



ಲೇಖಕರು :  ವಿಷ್ಣುವರ್ಧನ ಜಿ ಸಿ


ಕೆರೆಯ ನೀರನ್ನು ಕೆರೆಗೆ ಚೆಲ್ಲಿ

ಲೇಖಕ ಹಕ್ಕುತ್ಯಾಗ:

ನಾನು ಸ್ಥಿರ ಮತ್ತು ಸಂಪೂರ್ಣ ರೋಬೋಟ್ ಅಲ್ಲ, ನಾನು ಸಾಮಾನ್ಯ ಮನುಷ್ಯ ಮತ್ತು ನನ್ನ ಬ್ಲಾಗ್ ಅಥವಾ  ಲೇಖನ ವಿರೋಧಾಭಾಸವಾಗಿರುತ್ತದೆ, ನಿರ್ದೇಶಕರು ಅನೇಕ ಚಲನಚಿತ್ರಗಳಿಗೆ ಒಂದೇ ವಿಷಯದ ಬಗ್ಗೆ ಅಥವಾ ವಿಭಿನ್ನ ವಿಷಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಾರೆ. ನಾನು ನದಿಯಂತೆ ಹರಿಯುತ್ತೇನೆ, ನಾನು ನಿಜವಾಗಿಯೂ ಮರಳು, ಕಲ್ಲು, ಮರಗಳು, ಮನೆ ಇತ್ಯಾದಿಗಳನ್ನು ಹುಡುಕುವುದಿಲ್ಲ. ಸಾಗರವನ್ನು ತಲುಪುವುದು  ಮೂಲ ಉದ್ದೇಶ, ಸಾಗರ ತಲುಪುವ ಮುನ್ನ ದಾರಿಯಲ್ಲಿ ಕೆಲವರಿಗೆ ಉಪಯೋಗವಾಗುವದು ನನ್ನ ಗುರಿ. ನನ್ನ ಲೇಖನದ  ಯಾವುದೇ ವಿಧಾನಗಳನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ತಜ್ಞರ ಸಲಹೆಯನ್ನು ಸಂಪರ್ಕಿಸಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ನಿಮ್ಮ ಅನ್ವೇಷಣೆಯಲ್ಲಿ ನಿಮಗೆ ಸಹಾಯ ಮಾಡಲು ಸಾಮಾನ್ಯ ಮಾಹಿತಿಯನ್ನು ನೀಡುವುದು ನನ್ನ ಉದ್ದೇಶವಾಗಿದೆ.